ಕಲಬುರಗಿ: ಕಂಕಣ ಸೂರ್ಯ ಗ್ರಹಣ ಬಗ್ಗೆ ಜನರಲ್ಲಿದ್ದ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಗುರುವಾರದಂದು ನಗರದ ಪ್ರಮುಖ ಬಡಾವಣೆಗಳಿಗೆ ತೆರಳಿ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದನ್ನು ನಡೆಸಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿ, ಗ್ರಹಣ ಎಂಬುದು ಒಂದು ಸಹಜ ಕ್ರಿಯೆಯಾಗಿದೆ. ನಮ್ಮ ಮನದಲ್ಲಿ ಅಡಗಿರುವ ಮೂಢತೆಯಿಂದ ಹೊರಬರಬೇಕಾಗಿದೆ. ಆ ಮೂಲಕ ಸಮಾನತೆ ಮತ್ತು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದ ಅವರು, ಈ ನಿಟ್ಟಿನಲ್ಲಿ ಸೂರ್ಯ ಗ್ರಹಣವಿರಲಿ, ಚಂದ್ರ ಗ್ರಹಣವಿರಲಿ ಜನರ ಮೇಲೆ ಇವುಗಳಿಂದ ಯಾವುದೇ ತರಹದ ಪರಿಣಾಮ ಬೀರುವುದಿಲ್ಲ. ಹಾಗಾಗಿ, ನಮ್ಮೆಲ್ಲರ ಮನಸ್ಸಿಗೆ ಹಿಡಿದ ಗೃಹಣವನ್ನು ಮೊದಲು ಕಿತ್ತೊಗೆಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಮುಖರಾದ ಅಣಿವೀರಯ್ಯ ಪ್ಯಾಟಿಮನಿ, ಮಲ್ಕಾರಿ ಪೂಜಾರಿ, ಸಂದೇಶ ಕುನ್ನೂರ, ಮಹಾಂತೇಶ ಮಠ, ಡಾ.ಸತೀಶ ದೊಡ್ಡಮನಿ, ಲಕ್ಷ್ಮಣ ಕುಂಬಾರ, ರಾಜಶೇಖರ ಕುರಿ, ಶರಣಕುಮಾರ ಡಿಗ್ಗಿ ಸೇರಿದಂತೆ ಬಡಾವಣೆಗಳ ಪ್ರಮುಖರೂ ಸಹ ಈ ಸಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…