ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಿನಿ ವಿಧಾನಸೌಧ ಕಚೇರಿ ಆಡಳಿತ ಶಕ್ತಿ ಕೇಂದ್ರ ವಾಗಿದ್ದು, ಎರಡು ತಿಂಗಳಿಂದ ತಹಸೀಲ್ದಾರ್ ಇಲ್ಲದೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.
ಈ ಹಿಂದೆ ಜನವರಿ ತಿಂಗಳಲ್ಲಿ ತಹಸಿಲ್ದಾರ್ ಅಧಿಕಾರವಹಿಸಿಕೊಂಡ ಎಂ.ವಿ ರೂಪ ಕಾರ್ಯನಿರ್ವಹಿಸುತ್ತಿದ್ದರು.
ಸರ್ಕಾರದ ಆದೇಶದಂತೆ ಅಕ್ಟೋಂಬರ್ ತಿಂಗಳಲ್ಲಿ ಎಂ. ವಿ ರೂಪ ರವರು ಶ್ರೀರಂಗಪಟ್ಟಣಕ್ಕೆ ವರ್ಗಾವಣೆಗೊಂಡರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರಭಾರವಾಗಿ ನಾಗಮಂಗಲದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು.
ಸುಮಾರು ಎರಡು ತಿಂಗಳಿಂದ ರೈತರು ಹಾಗೂ ನಾಗರಿಕರು ಪ್ರತಿನಿತ್ಯ ಕಚೇರಿಗೆ ಅಲೆದು ಕೆಲಸವಾಗದೆ ಬರಿಗೈಯಲ್ಲಿ ಹಿಂತಿರುಗು ತಿರುವುದು ದುರದೃಷ್ಟಕರವಾಗಿದೆ. ತಾಲೂಕು ಕಚೇರಿಯ ದಂಡಾಧಿಕಾರಿಗಳ ಅಧೀನದಲ್ಲಿರುವ ಜನನ-ಮರಣ, ಭೂಮಿ-ಶಾಖೆ, ಕೋರ್ಟ್ ಕೇಸು,ಆರ್.ಟಿ.ಸಿ ಭೂಮಾಪನ ಇಲಾಖೆ, ಆಹಾರ ಇಲಾಖೆ. ಹೀಗೆ ಹಲವಾರು ಇಲಾಖೆಗಳಿದ್ದು ಸುಮಾರು 50 ಜನ ಗ್ರಾಮಲೆಕ್ಕಾಧಿಕಾರಿಗಳು ನಾಲ್ಕು ಜನ ಶಿರಸ್ತೇದಾರರು, ಕಚೇರಿ ನೌಕರರು 5 ಜನ ಉಪತಹಸೀಲ್ದಾರರು, ಗ್ರಾಮಸಹಾಯಕರು ನೂರಾರು ಜನರಿದ್ದು ತಾಲೂಕಿನಾದ್ಯಂತ ನಾಲ್ಕು ಉಪ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ತಾಲ್ಲೂಕಿನ ತಹಸೀಲ್ದಾರ್ ಇಲ್ಲದೆ ಜನತೆಯ ಕೆಲಸಗಳು ಹಿಂದುಳಿದಿದ್ದು, ಇನ್ನಾದರೂ ಪಾಂಡವಪುರ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ತಹಸಿಲ್ದಾರ್ ಅವರನ್ನು ನೇಮಕ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾಗಮಂಗಲ ತಾಲೂಕಿನಲ್ಲಿ ದಂಡಾಧಿಕಾರಿಗಳು ಇಲ್ಲದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…