ಸುರಪುರ: ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡುಗಳ ವಿತರಣೆಯಲ್ಲಿ ರಾಜುಗೌಡ ಗ್ರೌಂಡ್ ವರ್ಕ ಟೀಂ ಇದುವರೆಗೆ ಮೂವತ್ತು ಸಾವಿರ ಜನರಿಗೆ ಕಾರ್ಡುಗಳ ಮಾಡಿ ಕೊಡುವ ಮೂಲಕ ಉತ್ತಮವಾದ ಸಾಧನೆ ಮಾಡಿದೆ ಎಂದು ಟೀಂ ಮುಖಂಡ ಮಲ್ಲಿಕಾರ್ಜುನರೆಡ್ಡಿ ಕೋಳಿಹಾಳ ತಿಳಿಸಿದ್ದಾರೆ.
ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಅನೇಕ ಜನರಿಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲನುಭವಿಗಳಿಗೆ ಉಚಿತವಾಗಿ ಕಾರ್ಡುಗಳ ಮಾಡಿಕೊಡುವ ಸಂದರ್ಭದಲ್ಲಿ ಮಾತನಾಡಿ,ಇದುವರೆಗೆ ತಾಲೂಕಿನ ಹುಣಸಗಿ, ಕೊಡೇಕಲ್,ಪೇಠ ಅಮ್ಮಾಪುರ,ಅರಿಕೇರಿ,ಕಕ್ಕೇರಿ,ಖಾನಾಪುರ ಎಸ್.ಹೆಚ್ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವ್ಯಾಪ್ತಿ ಹಾಗು ಸುರಪುರ ನಗರ ಸೇರಿ ಇದುವರೆಗೆ ಮೂವತ್ತು ಸಾವಿರ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡುಗಳನ್ನು ಉಚಿತವಾಗಿ ಮಾಡಿ ಕೊಡಲಾಗಿದೆ.
ಅಲ್ಲದೆ ಮೂರು ನೂರಾ ಆರು ಜನರಿಗೆ ಕೃಷಿ ಸಮ್ಮಾನ ಯೋಜನೆ ಕಾರ್ಡುಗಳು, ಪ್ರಧಾನಮಂತ್ರಿ ಫಸಲ ಭೀಮ್ ಯೋಜನೆಯಲ್ಲಿ ಎರಡು ನೂರಾ ಎಪ್ಪತ್ಮೂರು ಜನರಿಗೆ ,ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆಯಲ್ಲಿ ಮೂವತ್ತೊಂದು ಜನರಿಗೆ ಹೀಗೆ ಒಟ್ಟು ಮೂವತ್ತು ಸಾವಿರದ ಎರಡು ನೂರಾ ಅರವತ್ತೊಂದು ಜನರಿಗೆ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜುಗೌಡ ಗ್ರೌಂಡ್ ವರ್ಕ ಟೀಂ ನ ಅನೇಕ ಸದಸ್ಯರುಗಳಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…