ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಮೂಲಸೌಕರ್ಯ, ರಸ್ತೆ, ಕಟ್ಟಡ ನಿರ್ಮಾಣ, ಅರೋಗ್ಯ, ಶಿಕ್ಷಣ ಹೀಗೆ ಪ್ರತಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮೈಕ್ರೋ ಮತ್ತು ಮ್ಯಾಕ್ರೋ ವಲಯದಲ್ಲಿ ಯೋಜನೆಗಳನ್ನು ಹಾಕಿಕೊಂಡು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರಲು ಮಂಡಳಿ ಶ್ರಮಿಸುತ್ತಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಮಂಡಳಿಯ ಮೂಲ ಉದ್ದೇಶ ಅರಿಯದೇ ವಿನಾಕಾರಣ ಕಾಮಗಾರಿಗಳು ನಿಧಾನಗತಿಯಲ್ಲಿ ಮುಂದುವರೆಯುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಹೀಗೆ ಮುಂದುವರೆದರೆ ಶಿಸ್ತಿನ ಕ್ರಮ ಅನಿವಾರ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಂಗಳವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಡಳಿಯ ಮೈಕ್ರೋ, ಮ್ಯಾಕ್ರೋ ಹಾಗೂ ಇತರೆ ಯೋಜನೆ ಅಡಿಯಲ್ಲಿ ೨೦೧೪-೧೫ ರಿಂದ ೨೦೧೯-೨೦ನೇ ಸಾಲಿನ ವರೆಗೆ ಲೋಕೋಪಯೋಗಿ, ಬಂದರು, ಒಳನಾಡು ಮತ್ತು ಜಲ ಸಾರಿಗೆ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾಮಗಾರಿಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮಂಡಳಿಯು ಪ್ರಮುಖ ಮತ್ತು ಬೃಹತ್ ಮೊತ್ತದ ಬಹುತೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಸಮರ್ಥವಾಗಿ ನಿರ್ವಹಿಸುತ್ತದೆ ಎಂಬ ಖಾತ್ರಿಯೊಂದಿಗೆ ಇಲಾಖೆಗೆ ಕಾಮಗಾರಿಗಳು ವಹಿಸಲಾಗಿದೆ. ಇದನ್ನು ಅಧಿಕಾರಿಗಳು ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ೨೦೧೪-೧೫ ನೇ ಸಾಲಿನ ಕಾಮಗಾರಿಗಳನ್ನು ಇನ್ನೂ ಕೆಲವೆಡೆ ಪ್ರಗತಿಯಲ್ಲಿರುವುದನ್ನು ಗಮನಿಸಿದ ಅವರು ಸಂಬಂಧಿಸಿದ ಅನುಷ್ಟಾನ ಅಧಿಕಾರಿಗಳನ್ನು ಕೂಡಲೆ ಮುಗಿಸುವಂತೆ ತಾಕೀತು ಮಾಡಿದರು.
೨೦೧೯-೨೦ನೇ ಸಾಲಿನ ಕ್ರಿಯಾ ಯೋಜನೆಯ ಅನುಮೋದಿತ ಕಾಮಗಾರಿಗಳು ಇದೂವರೆಗೆ ಕೆಲವೆಡೆ ಆರಂಬವಾಗದಿರುವುದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸುಬೋಧ ಯಾದವ ಅವರು ವರ್ಷ ಪೂರ್ತಿ ಯಾವುದೇ ಪ್ರಗತಿ ಮಾಡದೆ ಆರ್ಥಿಕ ವರ್ಷದ ಕೊನೆಯಲ್ಲಿ ಸ್ಥಳ ಲಭ್ಯತೆ ಇಲ್ಲ, ಕಾರಣಾಂತರ ಸಮಸ್ಯೆಗಳಿಂದ ಸ್ಥಳ ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸುವುದು ಅಥವಾ ಭೌತಿಕ ಮತ್ತು ಆರ್ಥಿಕ ಸಾಧನೆ ಒಮ್ಮೆಲೆ ಮಾಡಲು ವರ್ಷಾಂತ್ಯಕ್ಕೆ ಕಾಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
೨೦೧೯-೨೦ನೇ ಸಾಲಿನ ಕಾಮಗಾರಿಗಳನ್ನು ಇದೂವರೆಗೆ ಆರಂಭಿಸದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ್ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಲಬುರಗಿ ವಲಯದ ಉಪ ಮುಖ್ಯ ಇಂಜಿನೀಯರ್ ಮಾಣಿಕ ಕನಕಟ್ಟೆ, ಕಲಬುರಗಿ ಅಧೀಕ್ಷಕ ಅಭಿಯಂತ ಪ್ರಕಾಶ ಶ್ರೀಹರಿ, ಬಳ್ಳಾರಿ ಅಧೀಕ್ಷಕ ಅಭಿಯಂತ ಜಿ.ಪಂಪಾಪತಿ, ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳ ಕಾರ್ಯನಿರ್ವಾಹಕ ಅಭಿಯಂತರರಾದ ಅಮೀನ್ ಮುಕ್ತಾರ, ಪ್ರಕಾಶ ಪಿ.ಅರ್. ದೇವಿದಾಸ್ ಚವ್ಹಾಣ, ತಿರುಮಲರಾವ್ ಕುಲಕರ್ಣಿ, ಕೆ.ಅಬ್ದುಲ್ ವಹಾಬ್, ಜಿ.ಹನುಮಂತರಾಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇ.ಇ.ಜಯರಾಂ ಚವ್ಹಾಣ, ಎ.ಇ. ಬಸವರಾಜ ಸೇರಿದಂತೆ ಆರು ಜಿಲ್ಲೆಗಳ ಡಿ.ಸಿ.ಕಚೇರಿಯ ಕೆ.ಕೆ.ಆರ್.ಡಿ.ಬಿ. ಕೋಶದ ತಾಂತ್ರಿಕ ಸಹಾಯಕರು, ಇನ್ನಿತರ ಅಧಿಕಾರಿಗಳು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…