ಬಿಸಿ ಬಿಸಿ ಸುದ್ದಿ

ಜೇವರ್ಗಿ: ಕನ್ನಡ ಭವನಕ್ಕೆ ಹೆಚ್ಚುವರಿ 10ಲಕ್ಷ ಅನುದಾನ: ಮನು ಬಳಿಗಾರ

ಜೇವರ್ಗಿ: ಕನ್ನಡಕ್ಕೆ ಹಿಂದೂ-ಮುಸ್ಲಿಂ ಭೇದವಿಲ್ಲ. ಇದು ಸೂಫಿ ಸಂತರುˌ ಶರಣರು ನಡೆದಾಡಿದ ಪವಿತ್ರ ನೆಲವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಶ ಪರಿಷತ್ ರಾಜ್ಶಾಧ್ಶಕ್ಷ ಮನು ಬಳಿಗಾರ ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ತಹಸೀಲ ಕಛೇರಿ ಆವರಣದಲ್ಲಿ ಸೋಮವಾರ ಸುಮಾರು 50ಲಕ್ಷ ವೆಚ್ಚದ ನೂತನ ಕನ್ನಡ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಕೆಲಸಗಳಿಗಾಗಿ ದಾನಿಗಳಿಂದˌ ಸಂಘ ಸಂಸ್ಥೆಗಳಿಂದ 5 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ. ರಾಜ್ಶದಾದ್ಶಂತ ಒಟ್ಟು 22 ಕನ್ನಡ ಭವನಗಳು ನಡೆಯುತ್ತಿದ್ದು ಎಲ್ಲವೂ ಪೂರ್ಣಗೊಳಿಸಲಾಗುವುದು. ಅಲ್ಲದೆ ಪಟ್ಟಣದ ಕನ್ನಡ ಭವನಕ್ಕೆ ಇನ್ನು ಹೆಚ್ಚುವರಿ 10ಲಕ್ಷ ಅನುದಾನ ನೀಡಲಾಗುವುದು ಎಂದರು.

ನಂತರ ಶಾಸಕ ಡಾ. ಅಜಯಸಿಂಗ್ ಮಾತನಾಡಿˌ ಕಸಾಪ ಭವನಕ್ಕೆ ಮಾಜಿ ಲೋಕಸಭಾ ಸದಸ್ಶರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರ ಅನುದಾನದಿಂದ 10ಲಕ್ಷˌ ಸ್ಥಳೀಯ ಶಾಸಕರ ಅನುದಾನˌ ಕನ್ನಡ ಮತ್ತು ಸಾಂಸ್ರ್ಕತಿ ಇಲಾಖೆ ಹಾಗೂ ದಾನಿಗಳಿಂದಲೂ ಹಣ ಸಂಗ್ರಹಿಸಿ ಸುಂದರವಾದ ಭವನ ನಿರ್ಮಿಸಲಾಗಿದೆ. ತಾಲೂಕಿನ ಜನತೆ ಕನ್ನಡದ ಚಟುವಟಿಕೆಗಳಿಗೆ ಈ ಭವನವನ್ನು ಬಳಸಿಕೊಳ್ಳಬೇಕು ಎಂದರು.

ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನˌ ಟೌನ್ ಹಾಲ್ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು. ಇದೇ 5, 6, 7ರಂದು ಕಲಬುರಗಿ ವಿಶ್ವವಿದ್ಶಾಲಯದ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಶ ಸಮ್ಮೇಳನದಲ್ಲಿ ತೆರಳಲು ಜೇವರ್ಗಿಯಿಂದ 2ˌ ಯಡ್ರಾಮಿಯಿಂದ 2 ಬಸ್ ಗಳ ವ್ಶವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಶಕ್ಷ ವಿರಭಂದ್ರ ಸಿಂಪಿˌ ಕಸಾಪ ತಾಲೂಕಾಧ್ಶಕ್ಷ ಶಿವನಗೌಡ ಹಂಗರಗಿˌ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ ರಾಜ್ ಪ್ರಸನ್ನˌ ಶಿವಾನಂದ ಶೆಟ್ಟಿˌ ಚಿ.ಸಿ. ನಿಂಗಣ್ಣˌ ಸಂಗಣ್ಣ ಇಟಗಿˌ ಹಿಂದುಳಿದ ವರ್ಗಗಳ ತಾಲೂಕ ವಿಸ್ತೀರ್ಣಾಧಿಕಾರಿ ವಿ.ಬಿ.ಹಿರೇಗೌಡ ಕಸಾಪ ಪದಾಧಿಕಾರಿಗಳಾದ ವಿರೇಶ ಕಂದಗಲ್ˌ ಗಿರೀಶ್ ರಾಠೋಡˌ ಭಗವಂತ್ರಾಯ ಬೆಣ್ಣೂರˌ ಪುರಸಭೆ ಸದಸ್ಶ ಸಂತೋಷ ಪಾಟೀಲ ಮಲ್ಲಾಬಾದˌ ರಾಜಶೇಖರ ಸೀರಿˌ ಖಾಸೀಂಪಟೇಲ ಮುದಬಾಳˌ ನೀಲಕಂಠ ಅವಂಟಿˌ ಶರಣಬಸವ ಕಲ್ಲಾˌ ಶಿವಕುಮಾರ ಕಲ್ಲಾˌ ಭೀಮರಾಯ ನಗನೂರˌ ಶ್ರೀಮಂತ ಧನ್ನಕರ್ ಇದ್ದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಶಿವಲಿಂಗ ಹಳ್ಳಿˌ ಕಂಠೆಪ್ಪ ಹರವಾಳˌ ಶ್ರೀಹರಿ ಕರಕಿಹಳ್ಳಿˌ ಸುಧೀಂದ್ರ ಇಜೇರಿˌ ಶಂಕರಗೌಡ ಹಾಲಗಡ್ಲಾˌ ಸಂತೋಷ ಪೂಜಾರಿˌ ಬಸವರಾಜ ಬಾಗೇವಾಡಿˌ ಸಂತೋಷಗೌಡ ಪಾಟೀಲˌ ˌಅಮಿನಪ್ಪ ಹೊಸಮನಿˌ ನಿಜಲಿಂಗ ದೊಡ್ಮನಿˌ ಮರೆಪ್ಪ ಕೋಬಾಳಕರ್ˌ ಸುನೀಲ ಹಳ್ಳಿˌ ಮರೆಪ್ಪ ಸರಡಗಿ ಸೇರಿದಂತೆ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago