ಬಿಸಿ ಬಿಸಿ ಸುದ್ದಿ

ಕೊರೊನಾ ಭೀತಿಗೆ ಜನಸಂಚಾರ ವಿರಳ ಮನೆಯಿಂದ ಹೊರಬಾರದ ಜನರು: ಮುಂದೂಡಿದ ದೇವನತೆಗನೂರ ಶಿವಯೋಗೇಶ್ವರ ಜಾತ್ರೆ

ಶಹಾಬಾದ: ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಲಯಲ್ಲಿ ನಗರದಲ್ಲಿ ಸಭೆ ಸಮಾರಂಭಗಳು ನಡೆಸದಂತೆ, ಹೊಟೇಲ್, ವೈನಶಾಪ್, ಬಾರ್‍ಗಳು ತೆರೆಯದಂತೆ ತಾಲೂಕಾಢಳಿತ ಆದೇಶ ಹೊರಡಿಸಿದ ನಿಮಿತ್ತ ಸೋಮವಾರ ಜನಸಂಚಾರ ವಿರಳವಾಗಿತ್ತು.

ಸರ್ಕಾರದ ಆದೇಶದ ಮೇರೆಗೆ ಕೊರಾನಾ ವೈರಸ್ ಹರಡದಂತೆ ಮುಂಜಾಗ್ರತ ಕೈಗೊಂಡ ಪರಿಣಾಮವಾಗಿ ಜನರು ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದು, ನಗರಕ್ಕೆ ಜನರು ಬರುವುದು ಹಾಗೂ ಬೇರೆ ಊರಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಜನದಟ್ಟಣೆಯಿಲ್ಲದೇ ಬಿಕೋ ಎನ್ನುತ್ತಿತ್ತು. ಯಾವಾಗಲೂ ರೇಲ್ವೆ ನಿಲ್ದಾಣದ ಸಮೀಪ ನೂರಾರು ಜನರ ಜನದಟ್ಟಣೆ ಕಾಣುತ್ತಿತ್ತು.ಆದರೆ ಕೊರೊನಾ ಎಫೆಕ್ಟ್‍ಗೆ ರೇಲ್ವೆ ನಿಲ್ದಾಣ ಸುತ್ತಮುತ್ತಲಿನಲ್ಲಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.ಲ್ಲದೇ ಲಾಡ್ಜ್, ಬಾರ್, ರೆಸ್ಟೋರೆಂಟ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ಹೊರಹಾಕಿದರು.

ಕೊರೊನಾ ಹರಡದಂತೆ 7ನೇ ತರಗತಿಯಿಂದ 9 ತರಗತಿವರೆಗಿನ ಮಕ್ಕಳ ಪರೀಕ್ಷೆ ಮುಂದೂಡಲಾಗಿದೆ.ಆದರೆ ತಾಲೂಕಿನಲ್ಲಿ ಕೆಲವೊಂದು ಶಾಲೆಗಳು ಸರ್ಕಾರದ ಆದೇಶದ ವಿರುದ್ಧ ಪರೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಸ್ಥಳೀಯ ಸಿಆರ್‍ಸಿ ಅವರು ತಿಳಿಹೇಳಿ ಹೇಳಿದ್ದಾರೆ. ಇಂತಹ ಘಟನೆಗಳು ಕಂಡು ಬಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. – ಶಂಕ್ರಮ್ಮ ಢವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪೂರ.

ಕೊರೊನಾ ವೈರಸ್ ಸೊಂಕು ಹರಡದಂತೆ ಮದುವೆ, ಸಮಾರಂಭ ಹಾಗೂ ಮಾರ್ಚ 23ರಿಂದ ನಡೆಯುವ ದೇವತೆಗನೂರಿನ ಶಿವಯೋಗೇಶ್ವರ ಜಾತ್ರೆಯನ್ನು ಕೂಡ ಮುಂದೂಡಲಾಗಿದೆ. ಯಾವುದೇ ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದ್ದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಸಾರ್ವಜನಿಕರು ಹೊರದೇಶದಿಂದ ಬಂದ ಹಾಗೂ ಬುರುವವರ ಮಾಹಿತಿ ತಪ್ಪದೇ ಮಾಹಿತಿ ನೀಡಿ.ಅಲ್ಲದೇ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವಿನಿಂದ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು.ಆದಷ್ಟು ಮಾಸ್ಕ್ ಧರಿಸಿ ಕೊರೊನಾ ವೈರಸ್ ಹರಡದಂತೆ ಸಹಕರಿಸಬೇಕು. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ನಗರದ ಮುಖ್ಯ ಬಜಾರನಲ್ಲಿ ಬಂಡಿಯ ಮೇಲೆ ಹಣ್ಣು ಮಾರಾಟಗಾರರನ್ನು ಬಿಟ್ಟರೇ ಬಹುತೇಖ ಎಲ್ಲಾ ಅಂಗಡಿಗಳು ಮುಚ್ಚಲಾಗಿತ್ತು. ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದಕ್ಕೆ ಅವುಗಳನ್ನು ಮುಚ್ಚಲು ಕಟ್ಟನಿಟ್ಟಾಗಿ ಆದೇಶಿಸಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರ 7ರಿಂದ 9 ನೇ ತರಗತಿವರೆಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬಂದು ಮತ್ತೆ ಮನೆ ಕಡೆಗೆ ತೆರಳುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ಸ್ಥಳ ಕೊರೊನಾ ಭೀತಿಗೆ ಸಂಪೂರ್ಣ ಜನರಿಲ್ಲದೇ ಸ್ಮಶಾನ ಸ್ಥಿತಿ ಆವರಿಸಿದಂತಾಗಿತ್ತು.ಬಸ್‍ಗಳಲ್ಲಿ ಪ್ರಯಾನೀಕರ ಸಂಖ್ಯೆ ತೀರ ವಿರಳವಾಗಿತ್ತು. ಪ್ರತಿ ಬಸ್‍ನಲ್ಲಿ ಕೇವಲ ಒಂದೆರಡು ಜನ ಮಾತ್ರ ಪ್ರಯಾಣಿಕರು ಕಂಡುಬರುತ್ತಿತ್ತು.

ಇದರಿಂದ ಸಾರಿಗೆ ಇಲಾಖೆಗೆ ನಷ್ಟ ಅನುಭವಿಸುವಂತಾಗಿದೆ. ಇತ್ತ ತರಕಾರಿ ಮಾರುಕಟ್ಟೆ ಕಡೆಗೂ ಜನರು ಮುಖಮಾಡದೇ ಮನೆಯಲ್ಲಿಯೇ ಉಳಿದು ಗೃಹ ಬಂಧನಕ್ಕೆ ಜಾರಿಕೊಂಡ ಸನ್ನಿವೇಶ ಮಾತ್ರ ಸರ್ವೆ ಸಾಮಾನ್ಯವಾಗಿತ್ತು.

emedialine

Recent Posts

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು. ಅವರು…

3 hours ago

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

4 hours ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

5 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

7 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

7 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420