ಸುರಪುರ: ಕರೊನಾ ವೈರಸ್ ಇಡೀ ದೇಶವನ್ನೆ ನಡುಗಿಸುತ್ತಿದ್ದು,ಸುರಪುರಕ್ಕೂ ಅದರ ಬಿಸಿ ಜೊರಾಗಿ ತಟ್ಟಿದೆ.ತಾಲೂಕಿನಲ್ಲಿ ವಿದೇಶದಿಂದ ಬಂದ ೧೪ ಜನರನ್ನು ನಿತ್ಯವು ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆ ಕಲಬುರ್ಗಿಯಲ್ಲಿ ಒಬ್ಬರು ಮೃತರಾಗಿ,ಇಬ್ಬರು ಸೊಂಕಿನಿಂದ ಬಳಲುತ್ತಿದ್ದಾರೆ. ಇದರಿಂದ ಯಾದಗಿರಿ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆಯಾಗಿದೆ. ಅದರಂತೆ ಸುರಪುರ ನಗರದಲ್ಲಿನ ಎಲ್ಲಾ ಹೋಟೆಲ್ ಬಾರ್ ರೆಸ್ಟೋರೆಂಟ್ ಮಾಲ್‌ಗಳು ಅಂಗಡಿ ಮುಂಗಟ್ಟುಗಳನ್ನು ಈ ತಿಂಗಳ ೩೧ನೇ ತಾರೀಖಿನ ವರೆಗು ಮುಚ್ಚಲು ನಗರಸಭೆ ಕಮಿಷನರ್ ಆದೇಶ ಮಾಡಿದ್ದಾರೆ. ಆದರೆ ಈ ಆದೇಶದ ಪರಿವೆ ಇಲ್ಲದಂತೆ ಬೀದಿ ಬದಿಯ ಹಣ್ಣು ಹೂ ತರಕಾರಿ ಮಾರಾಟ ಮಾಡುವವರು ಎಂದಿನಂತೆ ತಮ್ಮ ವ್ಯಾಪಾರ ನಡೆಸಿದರು.
ಕೆಲವು ಹೊಟೇಲಗಳು ಮುಚ್ಚಿದನ್ನು ಹೊರತುಪಡಿಸಿದರೆ ಬಹುತೇಕ ಸಣ್ಣ ಬಜಿ ಬಂಡಿ,ಪಾನೀಪುರಿ ಬಂಡಿ ಮತ್ತು ಸಣ್ಣ ಹೊಟೇಲಗಳು ತೆಗೆದಿದ್ದವು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರವು ಇಂದು ಜನರಿಲ್ಲದೆ ಖಾಲಿ ಖಾಲಿ ಎನಿಸಿದರು ಮಾಂಸದವ್ಯಾಪರಿಗಳು ವ್ಯಾಪಾರ ನಡೆಸಿದ್ದರಿಂದ ಜನರ ಸುರಕ್ಷತೆ ಹಿತದೃಷ್ಠಿಯಿಂದ ಬಂದಮಾಡುವು ಓಳಿತು ಎಂದು ಅಲ್ಲಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ನಗರಸಭೆಯ ಅಧಿಕಾರಿಗಳು ಈ ಕುರಿತು ಸಮಗ್ರವಾಗಿ ಜಾಗೃತಿ ಮೂಡಿಸಬೇಕಾಗಿತ್ತು, ಆದರೆ ಸಾಕಷ್ಟು ಮಾಹಿತಿ ಮತ್ತು ಸೂಕ್ತ ನಿರ್ದೇಶನ ನೀಡದೆ ಇರುವುದರಿಂದ ಈ ರೀತಿ ಹಣ್ಣು ತರಕಾರಿ ವ್ಯಾಪಾರ ಮತ್ತು ಹೊಟೇಲಗಳು ತೆಗೆದಿವೆ ಎಂದು ನಗರಸಭೆ ಅಧಿಕಾರಿಗಳ ಬೇಜವಬ್ದಾರಿತನದ ಕುರಿತು ಜನತೆ ಬೇಸರ ಹೊರಹಾಕುತಿದ್ದಾರೆ.
ಇದುವರೆಗೆ ಅತೀ ಹೆಚ್ಚಿನ ಕಾಳಜಿ ತೋರಿದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಜನ ಜಾಗೃತಿ ಮತ್ತು ಎಲ್ಲಾ ಇಲಾಖೆಗಳ ಸಭೆ ನಡೆಸಿ ಜಾಗೃತಿಗೆ ಮುಂದಾಗಿದ್ದಾರೆ.ಅಲ್ಲಲ್ಲಿ ಬ್ಯಾನರ್‌ಗಳು ಹಾಕಿಸಿ ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.ಆದರೆ ನಗರಸಭೆ ಮಾತ್ರ ತನಗೇನು ಸಂಬಂಧವೆ ಇಲ್ಲ ಎಂಬಂತೆ ವರ್ತಿಸುತ್ತಿದೆ.ಕೇವಲ ನಗರಸಭೆಯ ವಾಹನಗಳಲ್ಲಿ ಕೊರೊನಾ ಬಗ್ಗೆ ಧ್ವನಿವರ್ಧಕದ ಪ್ರಚಾರ ಹೊರತುಪಡಿಸಿ ಇನ್ನುಳಿದಂತೆ ಯಾವ ಜಾಗೃತಿ ಕಾರ್ಯಕ್ರಮವನ್ನೂ ಮಾಡದೆ ಕೈತೊಳೆದುಕೊಂಡಿದೆ.
ನಗರಸಭೆಯಿಂದ ಅಂಗಡಿಗಳಿಗೆ,ಹಣ್ಣು ತರಕಾರಿ ವ್ಯಾಪಾರಿಗಳ ಬಳಿಗೆ ಹೋಗಿ ಖಡಕ್ಕಾಗಿ ಆದೇಶ ಮಾಡುವುದು.ಜನ ಸಂದಣಿ ಇರುವ ಸ್ಥಳಗಳಲ್ಲಿ ಪ್ರಚಾರ ನಡೆಸಿ ಜನಜಾಗೃತಿ ಮಾಡುವುದು,ನಗರದಲ್ಲಿ ಕರ ಪತ್ರಗಳ ಮೂಲಕ,ಪ್ರಭಾತ ಪೇರಿ ಮೂಲಕ ಪ್ರಚಾರ ನಡೆಸುವುದು ಯಾವುದನ್ನು ಮಾಡದೆ ಅಧಿಕಾರಿಗಳು ಇರುವುದು ನೋಡಿದರೆ ಇವರ ಜವಬ್ದಾರಿ ಏನೆಂದು ಜನತೆ ಪ್ರಶ್ನಿಸುವಂತಾಗಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…