ಕಮಿಷನರ್ ಆದೇಶಕ್ಕಿಲ್ಲ ಕಿಮ್ಮತ್ತು ಅಲ್ಲಲ್ಲಿ ಅಂಗಡಿ ಬೀದಿಬದಿ ವ್ಯಾಪಾರ ಎಂದಿನಂತೆ ನಡೆದಿತ್ತು

0
4

ಸುರಪುರ: ಕರೊನಾ ವೈರಸ್ ಇಡೀ ದೇಶವನ್ನೆ ನಡುಗಿಸುತ್ತಿದ್ದು,ಸುರಪುರಕ್ಕೂ ಅದರ ಬಿಸಿ ಜೊರಾಗಿ ತಟ್ಟಿದೆ.ತಾಲೂಕಿನಲ್ಲಿ ವಿದೇಶದಿಂದ ಬಂದ ೧೪ ಜನರನ್ನು ನಿತ್ಯವು ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆ ಕಲಬುರ್ಗಿಯಲ್ಲಿ ಒಬ್ಬರು ಮೃತರಾಗಿ,ಇಬ್ಬರು ಸೊಂಕಿನಿಂದ ಬಳಲುತ್ತಿದ್ದಾರೆ. ಇದರಿಂದ ಯಾದಗಿರಿ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆಯಾಗಿದೆ. ಅದರಂತೆ ಸುರಪುರ ನಗರದಲ್ಲಿನ ಎಲ್ಲಾ ಹೋಟೆಲ್ ಬಾರ್ ರೆಸ್ಟೋರೆಂಟ್ ಮಾಲ್‌ಗಳು ಅಂಗಡಿ ಮುಂಗಟ್ಟುಗಳನ್ನು ಈ ತಿಂಗಳ ೩೧ನೇ ತಾರೀಖಿನ ವರೆಗು ಮುಚ್ಚಲು ನಗರಸಭೆ ಕಮಿಷನರ್ ಆದೇಶ ಮಾಡಿದ್ದಾರೆ. ಆದರೆ ಈ ಆದೇಶದ ಪರಿವೆ ಇಲ್ಲದಂತೆ ಬೀದಿ ಬದಿಯ ಹಣ್ಣು ಹೂ ತರಕಾರಿ ಮಾರಾಟ ಮಾಡುವವರು ಎಂದಿನಂತೆ ತಮ್ಮ ವ್ಯಾಪಾರ ನಡೆಸಿದರು.

ಕೆಲವು ಹೊಟೇಲಗಳು ಮುಚ್ಚಿದನ್ನು ಹೊರತುಪಡಿಸಿದರೆ ಬಹುತೇಕ ಸಣ್ಣ ಬಜಿ ಬಂಡಿ,ಪಾನೀಪುರಿ ಬಂಡಿ ಮತ್ತು ಸಣ್ಣ ಹೊಟೇಲಗಳು ತೆಗೆದಿದ್ದವು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರವು ಇಂದು ಜನರಿಲ್ಲದೆ ಖಾಲಿ ಖಾಲಿ ಎನಿಸಿದರು ಮಾಂಸದವ್ಯಾಪರಿಗಳು ವ್ಯಾಪಾರ ನಡೆಸಿದ್ದರಿಂದ ಜನರ ಸುರಕ್ಷತೆ ಹಿತದೃಷ್ಠಿಯಿಂದ ಬಂದಮಾಡುವು ಓಳಿತು ಎಂದು ಅಲ್ಲಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ನಗರಸಭೆಯ ಅಧಿಕಾರಿಗಳು ಈ ಕುರಿತು ಸಮಗ್ರವಾಗಿ ಜಾಗೃತಿ ಮೂಡಿಸಬೇಕಾಗಿತ್ತು, ಆದರೆ ಸಾಕಷ್ಟು ಮಾಹಿತಿ ಮತ್ತು ಸೂಕ್ತ ನಿರ್ದೇಶನ ನೀಡದೆ ಇರುವುದರಿಂದ ಈ ರೀತಿ ಹಣ್ಣು ತರಕಾರಿ ವ್ಯಾಪಾರ ಮತ್ತು ಹೊಟೇಲಗಳು ತೆಗೆದಿವೆ ಎಂದು ನಗರಸಭೆ ಅಧಿಕಾರಿಗಳ ಬೇಜವಬ್ದಾರಿತನದ ಕುರಿತು ಜನತೆ ಬೇಸರ ಹೊರಹಾಕುತಿದ್ದಾರೆ.

Contact Your\'s Advertisement; 9902492681

ಇದುವರೆಗೆ ಅತೀ ಹೆಚ್ಚಿನ ಕಾಳಜಿ ತೋರಿದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಜನ ಜಾಗೃತಿ ಮತ್ತು ಎಲ್ಲಾ ಇಲಾಖೆಗಳ ಸಭೆ ನಡೆಸಿ ಜಾಗೃತಿಗೆ ಮುಂದಾಗಿದ್ದಾರೆ.ಅಲ್ಲಲ್ಲಿ ಬ್ಯಾನರ್‌ಗಳು ಹಾಕಿಸಿ ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.ಆದರೆ ನಗರಸಭೆ ಮಾತ್ರ ತನಗೇನು ಸಂಬಂಧವೆ ಇಲ್ಲ ಎಂಬಂತೆ ವರ್ತಿಸುತ್ತಿದೆ.ಕೇವಲ ನಗರಸಭೆಯ ವಾಹನಗಳಲ್ಲಿ ಕೊರೊನಾ ಬಗ್ಗೆ ಧ್ವನಿವರ್ಧಕದ ಪ್ರಚಾರ ಹೊರತುಪಡಿಸಿ ಇನ್ನುಳಿದಂತೆ ಯಾವ ಜಾಗೃತಿ ಕಾರ್ಯಕ್ರಮವನ್ನೂ ಮಾಡದೆ ಕೈತೊಳೆದುಕೊಂಡಿದೆ.

ನಗರಸಭೆಯಿಂದ ಅಂಗಡಿಗಳಿಗೆ,ಹಣ್ಣು ತರಕಾರಿ ವ್ಯಾಪಾರಿಗಳ ಬಳಿಗೆ ಹೋಗಿ ಖಡಕ್ಕಾಗಿ ಆದೇಶ ಮಾಡುವುದು.ಜನ ಸಂದಣಿ ಇರುವ ಸ್ಥಳಗಳಲ್ಲಿ ಪ್ರಚಾರ ನಡೆಸಿ ಜನಜಾಗೃತಿ ಮಾಡುವುದು,ನಗರದಲ್ಲಿ ಕರ ಪತ್ರಗಳ ಮೂಲಕ,ಪ್ರಭಾತ ಪೇರಿ ಮೂಲಕ ಪ್ರಚಾರ ನಡೆಸುವುದು ಯಾವುದನ್ನು ಮಾಡದೆ ಅಧಿಕಾರಿಗಳು ಇರುವುದು ನೋಡಿದರೆ ಇವರ ಜವಬ್ದಾರಿ ಏನೆಂದು ಜನತೆ ಪ್ರಶ್ನಿಸುವಂತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here