ಜೇಡರ ದಾಸಿಮಯ್ಯನವರ ವಚನಗಳ ಕುರಿತಾಗಿ ,ಅವುಗಳ ಸಾಹಿತ್ಯಿಕ ಸೊಬಗು, ನೇರ ನಿಷ್ಠುರ ನೀತಿನಡಾವಳಿಗಳ ನಿಲುವು, ಗುರು(ತತ್ವಬೋಧಕ) ಶಿಷ್ಯಸಂಬಂಧಗಳು. ಇತ್ಯಾದಿ ನಿಲುವುಗಳ ಕುರಿತು ಪೂಜ್ಯ ಶಿವಮೂರ್ತಿ ಮುರುಘಾಶರಣರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗೆಗೆ ಸಹಮತಿ ಹಾಗೂ ಅದೇ ಭಾವದ ಗೌರವ ದಾಸಿಮಯ್ಯತಂದೆಗಳ ಬಗೆಗಿದೆ.
ಆದರೆ ವಚನಗಳ ಮಹದನಿಲುವಿನ ಕುರಿತಾಗಿ ಅವರು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಭರದಲ್ಲಿ ಯಾವುದೇ ಐತಿಹಾಸಿಕ ಆಧಾರಗಳನ್ನು, ಪ್ರಮೇಯಗಳನ್ನು ನೀಡದೇ ಬಸವಣ್ಣನವರಿಗಿಂತ ಮೊದಲೇ ಶರಣತತ್ವವನ್ನು ಆಚರಿಸಿ ಉಳಿದವರಿಗೆ ಪ್ರೇರಕರಾಗಿದ್ದಾರೆ, ಅವರ ಚಳುವಳಿಯನ್ನು ಉಳಿದವರು ಮುಂದುವರೆಸಿದರು ಎಂಬುದರ ಕುರಿತು ಆಧಾರಗಳನ್ನು ನೀಡುವುದು ಅವರದೇ ಜವಾಬ್ದಾರಿಯಾಗಿದೆ.
ಚರಿತ್ರೆಯಲ್ಲಿ ದಾಸಿಮಯ್ಯ ಎಂಬ ಹೆಸರಿರುವ ಹಲವಾರು ಮಹಾನುಭಾವರು, ಹಲವಾರು ಜಯಸಿಂಹ, ವಿಕ್ರಮಾದಿತ್ಯ ಎಂಬ ಹೆಸರಿನವರ ಜತೆ ತಳಕು ಹಾಕಿಕೊಂಡಿರುವ ಈ ಗೊಂದಲವನ್ನು ಪೂಜ್ಯ ಡಾ.ಎಂ ಎಂ ಕಲಬುರ್ಗಿಯವರಂತಹ ಸಂಶೋಧಕರು ಸೇರಿದಂತೆ ಹಲವಾರು ವಿದ್ವಾಂಸರು ಈ ಗೊಂದಲದ ಬಗೆಗೆ ತೆರೆ ಎಳೆದದ್ದು ಪೂಜ್ಯ ಶಿಮುಶರಿಗೂ ತಿಳಿದಿದೆ. ಆದಾಗ್ಯೂ ಮಾಡಲು ಬಸವಧರ್ಮದ ಅನುಷ್ಠಾನದ ಕುರಿತು ಬೇಕಾದಷ್ಟು ಕೆಲಸಗಳಿದ್ದಾಗ್ಗಯೂ ಅದನ್ನು ಬಿಟ್ಟು, ಒಳ್ಳೆಯ ಒಮದು ಲೇಖನದ ಮದ್ಯೆ ಇಂತಹ ಗೊಂದಲಗಳನ್ನು ಮೂಡಿಸುವುದು ಸರಿಯೆ ಎಂಬುದನ್ನು ಅವರೇ ಚಿಂತಿಸಬೇಕು.
ದಾಸಿಮಯ್ಯ ತಂದೆಗಳು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ತಂದೆಗಳನ್ನು ನೆನೆದರೆ , ಕಕ್ಕಯ್ಯ ಚೆನ್ನಯ್ಯ ತಂದೆಗಳು ಬಸವತಂದೆಯನ್ನಯ ಸ್ಮರಿಸುತ್ತಾರೆ. ಇದು ದುಗ್ಗಳೆ ತಾಯಿಯ ವಚನಗಳಲ್ಲೂ ಪುನರಾವರ್ತನೆಯಾಗುತ್ತದೆ. ತವನಿಧಿ ಪಡೆದ ದಾಸಿಮಯ್ಯ ತಂದೆಗಳ ಗರ್ವ ಹರಣ ಮಾಡಿದ ಶಂಕರದಾಸಿಮಯ್ಯನವರು ಬಸವಾದಿಗಳನ್ನು ಸ್ಮರಿಸುತ್ತಾರೆ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಪೂಜ್ಯರಿಗೆ ನಾವು ಹೇಳಬೇಕೆ?.
ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತೊಡೆ ನಿಮ್ಮನಿತ್ತೆ ಕಾಣಾ….ಎನ್ನುವ ದಾಸಿಮಯ್ಯ ತಂದೆಗಳಿಗೆ ಶರಣರ ಸಂಪರ್ಕ ಬಂದಿತ್ತೆಂಬುದನ್ನು ಸೂಚಿಸುತ್ತದೆ. ಹೀಗಾಗಿ ಜೇಡರ ದಾಸಿಮಯ್ಯತಂದೆಗಳು ಬಸವಾದಿ ಶರಣರ ಸಮಕಾಲೀನರು;ಹಿರಿಯ ಸಮಕಾಲೀನರಾಗಿರುವ ಸಾಧ್ಯತೆಯೂ ಇದೆ. ಲಿಂ.ಇಲಕಲ್ಲ ಅಪ್ಪಗಳು, ಲಿಂ. ಮಲ್ಲಿಕಾರ್ಜುನ ಜಗದ್ಗುರುಗಳು,ಗದುಗಿನ ಜಗದ್ಗುರುಗಳು ಪೂ.ಶಿವಮೂರ್ತಿ ಶರಣರು, ಪೂ. ಗುರುಮಹಾಂತ ಶ್ರೀಗಳು ಒಂದೇ ಕಾಲಘಟ್ಟದವರು ಎಂಬ ಮಾದರಿಯನ್ನು ಕೇವಲ ಉದಾಹರಣೆಗಾಗಿ ಹೆಸರಿಸಬಹುದು
ಈ ಹಿನ್ನೆಲೆಯಲ್ಲಿ ವಚನಕಾರ ಜೇಡರ ದಾಸಿಮಯ್ಯ ಬಸವಾದಿ ಶರಣರ (ಹಿರಿಯ)ಸಮಕಾಲೀನರು. ಮಾರ್ಗಸಂಪುಟಗಳನ್ನು ಮತ್ತೊಮ್ಮೆ ಗಮನಿಸಲು ವಿನಂತಿಸಿದೆ. ಬಸವಧರ್ಮವನ್ನು ಮಠೀಯ ಸಂಪ್ರದಾಯಕ್ಕೆ ಸಿಲುಕಿಸಿದ ಪರಿಣಾಮವಾಗಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಿಕೊಂಡು ಶರಣರ ನಿಜದ ನೆಲೆಯೊಂದಿಗೆ ಮುನ್ನುಗ್ಗಬೇಕಾದ ಈ ಪ್ರಸಂಗದಲ್ಲಿ ಗೊಂದಲಗಳನ್ನು ಮತ್ತೆಮತ್ತೆ ಕೆದಕಿ ಹಿನ್ನುಗ್ಗುವಂತೆ ಮಾಡುವುದು(ಯಾರು ಮಾಡಿದರೂ ಸರಿಯೆ) ಸರಿಯಲ್ಲ.
ಅಶೋಕ ಬ ಬರಗುಂಡಿ
ಗುಳೇದಗುಡ್ಡ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…