ಸುರಪುರ: ಕೊರೊನಾ ಎಂಬುದು ಮಹಾಮಾರಿ ಸಾಂಕ್ರಾಮಿಕ ರೋಗ ಎಂಬುದು ನಿಜ,ಆದರೆ ಇದರ ಬಗ್ಗೆ ಭಯಪಡುವ ಬದಲು ಆರೋಗ್ಯ ಇಲಾಖೆ ತಿಳಿಸಿರುವ ಮುಂಜಾಗ್ರತೆ ನಿಯಮ ಪಾಲಿಸುವಂತೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ತಿಳಿಸಿದರು.
ನಗರದ ಬಸ್ ನಿಲ್ದಾಣ ಹಸನಾಪುರ ಪೆಟ್ರೋಲ್ ಪಂಪ್,ಗಾಂಧಿ ವೃತ್ತ ಹಾಗು ಪೌರ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಹಾರ ನೀರು ವಿತರಿಸಿ ಮಾತನಾಡಿ,ಕೊರೊನಾ ಭೀತಿಯಿಂದ ಇಂದು ಲಕ್ಷಾಂತರ ಜನರು ಉದ್ಯೋಗವಿಲ್ಲದೆ ಬದುಕು ನಡೆಸಲು ಕಷ್ಟವಾಗಿದೆ.ಅಂತವರ ನೆರವಿಗೆ ನಾವೆಲ್ಲ ಬರುವುದು ಅವಶ್ಯವಿದೆ.ಇದನ್ನು ಮನಗಂಡು ಇಂದು ಜನರಿಗೆ ಸಹಕಾರಕ್ಕೆ ನಿಂತಿದ್ದು ತಾವೆಲ್ಲರು ಕೊರೊನಾ ತಡೆಯಲು ಜಾಗೃತರಾಗಬೇಕೆಂದರು.
ಗಾಂಧಿ ವೃತ್ತದಲ್ಲಿ ಆಹಾರ ವಿತರಿಸುವವರೊಂದಿಗೆ ಭಾಗವಹಿಸಿದ್ದ ಸುರಪುರ ಉಪ ವಿಭಾಗದ ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ಯುವಕರು ಅನಗತ್ಯವಾಗಿ ಹೊರಗೆ ಬೈಕ್ ಹತ್ತಿ ತಿರುಗಾಡಬೇಡಿ,ಜನರುಕೂಡ ಭಾರತ ಲಾಕ್‌ಡೌನ್ ಬೆಂಬಲಿಸಿ ಮನೆಯಲ್ಲಿರಿ ಇದರಿಂದ ಕೊರೊನಾ ಬೇಗನೆ ನಿರ್ಮೂಲನೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆಕಾಶ ಕಟ್ಟಿಮನಿ,ಶಿವು ಕಲಕೇರಿ,ರಂಗನಗೌಡ ದೇವಿಕೇರಾ,ರಮೇಶ ಬಡಿಗೇರ,ಪರಶುರಾಮ ನಾಟೆಕಾರ್,ಪ್ರಮೋದ್ ಕಟ್ಟಿಮನಿ,ಮೌನೇಶ ಝಂಡದಕೇರಾ,ಪ್ರಜ್ವಲ ಕಟ್ಟಿಮನಿ,ಪ್ರಕಾಶ ಮುಷ್ಠಳ್ಳಿ,ಪರಮೇಶ ಬಾಚಿಮಟ್ಟಿ,ಮಲ್ಲು ಜೇವರ್ಗಿ,ಬಾಗು ಬಿಲ್ಲವ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…