ಕೊರೊನಾ ವಿಶ್ವವ್ಯಾಪಿ ಆವರಿಸಿಕೊಂಡು ಮನುಕುಲಕ್ಕೆಸವಾಲಾಗಿ ನಿಂತ ಸೂಕ್ಷ್ಮ ವೈರಸ್ ಇಂದಿನ ಧಾವಂತದ ಬದುಕಿಗೆ ಬ್ರೇಕ್ ಹಾಕಿದೆ. ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ನಿಯಮ ಮೀರಿ ನಾವುಗಳು ಸಹಜ ಬದುಕಿನ ಜೀವನಶೈಲಿಯಿಂದ ಮತ್ತು ಆಹಾರ ವಿಹಾರಗಳಿಂದ ದೂರವಾಗಿರುವುದರ ಫಲ ಎಂದು ಹೇಳಬಹುದು.ಪ್ರಕೃತಿಯ ಒಡಲಿನಲ್ಲಿ ಸಮೃದ್ಧವಾಗಿ ಬದುಕು ಸಾಗಿಸಿದ ನಮ್ಮ ಪೂರ್ವಜರು ಬೋಧಿಸಿದ ಶ್ರೇಷ್ಠ ಜೀವನ ಬಿಟ್ಟು ನಾಗರಿಕತೆಯ ವಾರಸುದಾರರಾದ ನಾವುಗಳು ಇಂದು ಮಾಡುತ್ತಿರುವುದು ಏನು? ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಎಂದು ಹೇಳಿದರೆ ಬಹುಶಃ ತಪ್ಪಾಗಲಾರದು.

ನಿರಂತರವಾಗಿ ಕಾಡುಗಳು ಕ್ಷೀಣಿಸಿ ಹೋಗುತ್ತಿವೆ. ನದಿ ಮೂಲಗಳು ಬತ್ತಿವೆ. ಮಹಾನಗರಗಳ ವಿಸ್ತರಿಸುವ ನೆಪದಲ್ಲಿ ಕೃಷಿ ಭೂಮಿ ಲೇಔಟ್‌ಗಳಾಗಿ ಪರಿವರ್ತನೆ ಹೀಗೆ ಮನುಷ್ಯನ ದಾಹಕ್ಕೆ ಕೊನೆ ಇಲ್ಲದಂತಾಗಿದೆ. ಕೇವಲ ಹಣ ಗಳಿಕೆ ಮಾಡುವುದೇ ನಮ್ಮ ಜೀವನದ ಉದ್ದೇಶವೇ? ಇಲ್ಲಿ ನಾವು ಬಂದಿದ್ದು ಕೇವಲ ಇದಕ್ಕಾಗಿಯೇ? ಸಂಪತ್ತು ಗಳಿಸುವುದರ ಹಿಂದೆ ಬೆನ್ನು ಹತ್ತಿರುವ ನಾವುಗಳು ಮನುಷ್ಯ ಸಂಬಂಧಗಳನ್ನೇ ಮರೆತಿರುವುದನ್ನು ಎಚ್ಚರಿಸುವುದಕ್ಕಾಗಿ ಇದು ಬಂದಿದೆ ಎಂದು ಹೇಳಬಹುದು. ಆರೋಗ್ಯ ಮತ್ತು ನೆಮ್ಮದಿಯನ್ನು ಕಳೆದುಕೊಂಡಿರುವ ನಾವುಗಳು ಆಸ್ಪತ್ರೆಗೆ ಅಲೆದಾಡುವಂತೆ ಮಾಡಿದ್ದು, ಹಾಗಾದರೆ ನಾವು ಗಳಿಸಿರುವುದೇನು? ಎಂಬುದನ್ನು ಅರ್ಥ ಮಾಡಿಸಿದೆ.

ಮನೆಯೆಂದರೆ ಕೇವಲ ತಂದುದಾಣ ಅಲ್ಲ. ನಮ್ಮನ್ನೆಲ್ಲ ಬಂಧಿಸಿದ ಬೆಚ್ಚನೆಯ ಗೂಡು. ತಾಯಿಯಂತೆ ಪೊರೆವ ಕರುಣೆಯ ಕಟ್ಟಡ. ಒಲವು, ನಿಲುವಿನ ಆಗರ. ಎಲ್ಲದಕ್ಕೂ ಬಿಗ್ ಬಜಾರ್ ಗಳಿಗೆ ಓಡುತ್ತಿರುವ ನಾವು ಮನೆಯಲ್ಲೇ ಅನೇಕ ರಚಿರುಚಿಯಾದ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು ಎಂಬುದು ಕಾರ್ಯರೂಪಕ್ಕೆ ತಂದ ಕೊರೊನಾ. ಪಾನಿಪೂರಿ, ಬೇಲ್, ಪಿಜ್ಜಾ, ಬರ್ಗರ್ ಗಳ ದಾಸರಾಗಿರುವ ನಮ್ಮ ಮಕ್ಕಳಿಗೆ ಸಜ್ಜಕ, ಪುಂಡಿಪಲ್ಯ, ಶೇಂಗಾ ಹಿಂಡಿ, ಖಡಕ್ ರೊಟ್ಟಿಎಣ್ಣೆ ಬದನೆಕಾಯಿ, ನುಚ್ಚಿನ ದರ್ಶನ ಮಾಡಿಸಿದ್ದು ಎಂದಿಗೂ ಮರೆಯಲಾಗದ ಅನುಭವ.

ಟಿವಿ, ವಾಟ್ಸ್ ಆಪ್, ಫೇಸ್ ಬುಕ್‌ಗೆ ವಿದಾಯ ಹೇಳಿ ಮನೆಯ ಮಾಳಿಗೆ ಮೇಲೆ ಏರಿ ಆಕಾಶದ ನಕ್ಷತ್ರ, ಚಂದ್ರ, ತಾರೆಯರನ್ನು ನೋಡಲು ಅವಕಾಶ ಮಾಡಿಕೊಟ್ಟಿತು. ಹೀಗೆ ಕೊರೊನಾ ಅನೇಕ ಬಗೆಯ ಪಾಠ ಕಲಿಸಿಕೊಟ್ಟಿತು ಎಂದು ಹೇಳಬಹುದು. ಕೊರೊನಾದಿಂದ ಕಲಿತ ಪಾಠ ನಮ್ಮ ಬದುಕನ್ನು ಕೈ ಹಿಡಿದು ಮುನ್ನಡೆಸುವಂತಾಗಲಿ.

– ಸವಿತಾ ನಾಸಿ, ಉಪನ್ಯಾಸಕಿ, ಕಲಬುರಗಿ
emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

38 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

45 mins ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

58 mins ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

1 hour ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420