ಜೈಪುರ: ಬಾಲಾ ಕೋಟ್ನಲ್ಲಿ ಏರ್ಸ್ಟ್ರೈಕ್ ಹಾಗೂ ಪಾಕ್ ನೆಲದಲ್ಲೇ ಎಫ್-16 ವಿಮಾನ ಹೊಡೆದುರುಳಿಸಿ, ವೀರತ್ವ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಸಾಧನೆಯನ್ನೂ ರಾಜಸ್ತಾನ ಸರಕಾರ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಪಾಠವಾಗಿ ಅಳವಡಿಸಿಕೊಂಡಿದೆ.
ಬಾಲಾ ಕೋಟ್ ನಲ್ಲಿ ಏರ್ಸ್ಟ್ರೈಕ್ ನಡೆಸಿ ಉಗ್ರರ ಸಂಹಾರ ಮಾಡಿದ ವಾಯುಸೇನೆಯ ಸಾಧನೆ ಮತ್ತು ಕಮಾಂಡರ್ ಅಭಿನಂದನ್ ಅವರ ಸಹಾಸದ ಕುರಿತು ಸಮಾಜ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಏರ್ಸ್ಟ್ರೈಕ್ ಹಾಗೂ ಅಭಿನಂದನ್ ಬಗ್ಗೆ ಬರೆಯಲಾಗಿರುವ ಗದ್ಯಕ್ಕೆ ಯಾವುದೇ ಹೆಡ್ಲೈನ್ ನೀಡಲಾಗಿಲ್ಲ. ಬದಲಿಗೆ ‘ರಾಷ್ಟ್ರೀಯ ಭದ್ರತೆ ಮತ್ತು ಶೌರ್ಯ ಸಂಪ್ರದಾಯ’ ಎಂಬ ಗದ್ಯಪಾಠದಲ್ಲಿ ಈ ಸಾಧನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಅಭಿನಂದನ್ ಅವರು ತಾನಿದ್ದ ವಿಮಾನಕ್ಕಿಂತ ಬಲಶಾಲಿಯಾಗಿದ್ದ ವಿಮಾನವನ್ನು ಹೊಡೆದುರುಳಿಸಿದ ಅಭಿನಂದನ್ ಶ್ರೇಷ್ಠತೆ ಪ್ರದರ್ಶಿಸಿದರು ಅಂತಾ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಫೆ.14ರಂದು ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರ ಬಲಿದಾನಕ್ಕೆ ಕಾರಣವಾಗಿದ ಘಟನಾವಳಿಯ ನಂತರದ ವಿಷಯವನ್ನು ಸರಕಾರ ವಿದ್ಯಾರ್ಥಿಗಳಲ್ಲಿ ಪಠ್ಯವಾಗಿ ನೀಡಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…