ಏರ್​ಸ್ಟ್ರೈಕ್ ​ ಹಾಗೂ ಕಮಾಂಡರ್ ಅಭಿನಂದನ್ ಕುರಿತು ರಾಜಸ್ತಾನ ಪಠ್ಯ ಪುಸ್ತಕದಲ್ಲಿ ಅಳವಡಿಕೆ

0
62

ಜೈಪುರ: ಬಾಲಾ ಕೋಟ್​ನಲ್ಲಿ ಏರ್​ಸ್ಟ್ರೈಕ್​  ಹಾಗೂ ಪಾಕ್​ ನೆಲದಲ್ಲೇ ಎಫ್​-16 ವಿಮಾನ ಹೊಡೆದುರುಳಿಸಿ, ವೀರತ್ವ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್​ ಅಭಿನಂದನ್​ ಸಾಧನೆಯನ್ನೂ ರಾಜಸ್ತಾನ ಸರಕಾರ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಪಾಠವಾಗಿ ಅಳವಡಿಸಿಕೊಂಡಿದೆ.

ಬಾಲಾ ಕೋಟ್​ ನಲ್ಲಿ ಏರ್​ಸ್ಟ್ರೈಕ್ ನಡೆಸಿ ಉಗ್ರರ ಸಂಹಾರ ಮಾಡಿದ ವಾಯುಸೇನೆಯ ಸಾಧನೆ ಮತ್ತು  ಕಮಾಂಡರ್ ಅಭಿನಂದನ್ ಅವರ ಸಹಾಸದ ಕುರಿತು ಸಮಾಜ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ  ಏರ್​ಸ್ಟ್ರೈಕ್​ ಹಾಗೂ ಅಭಿನಂದನ್​ ಬಗ್ಗೆ ಬರೆಯಲಾಗಿರುವ ಗದ್ಯಕ್ಕೆ ಯಾವುದೇ ಹೆಡ್​ಲೈನ್​ ನೀಡಲಾಗಿಲ್ಲ. ಬದಲಿಗೆ ‘ರಾಷ್ಟ್ರೀಯ ಭದ್ರತೆ ಮತ್ತು ಶೌರ್ಯ ಸಂಪ್ರದಾಯ’ ಎಂಬ ಗದ್ಯಪಾಠದಲ್ಲಿ ಈ ಸಾಧನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.

Contact Your\'s Advertisement; 9902492681

ಅಭಿನಂದನ್ ಅವರು ತಾನಿದ್ದ ವಿಮಾನಕ್ಕಿಂತ ಬಲಶಾಲಿಯಾಗಿದ್ದ ವಿಮಾನವನ್ನು ಹೊಡೆದುರುಳಿಸಿದ ಅಭಿನಂದನ್​ ಶ್ರೇಷ್ಠತೆ ಪ್ರದರ್ಶಿಸಿದರು ಅಂತಾ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಫೆ.14ರಂದು ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರ ಬಲಿದಾನಕ್ಕೆ ಕಾರಣವಾಗಿದ ಘಟನಾವಳಿಯ ನಂತರದ ವಿಷಯವನ್ನು ಸರಕಾರ ವಿದ್ಯಾರ್ಥಿಗಳಲ್ಲಿ ಪಠ್ಯವಾಗಿ ನೀಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here