ಕೂರೋನಾ ಮನುಷ್ಯನಿಗೆ ಸಾವಿನ ಎಚ್ಚರಿಕೆಯ ಘಂಟೆ: ತನ್ನ ರಕ್ಕಸ ವೈರಸ್ ಮೂಲಕ ರಣಕಹಳೆ

ಜಾಗತೀಕರಣ ಉದಾರೀಕರಣ ಖಾಸಗೀಕರಣದ ಸಂದರ್ಭದಲ್ಲಿ ವಿಶಾಲವಾದ ಜಗತ್ತು ಪುಟ್ಟ ಮನೆಯಾಗಿ ಮಾರ್ಪಾಡಾಗಿದೆ ಅಧುನಿಕ ಸಾರಿಗೆ ವ್ಯವಸ್ಥೆ ಮೂಲಕ ನಾವುಗಳು ಇಂದು ಪ್ರತಿ ಗಂಟೆಗೆ ನೂರಾರು ಕಿಲೋಮೀಟರ್ ಚಲಿಸಬಲ್ಲಿವು ಜೊತೆಗೆ ದಿನಕ್ಕೆ ನಾಲ್ಕಾರು ದೇಶಗಳನ್ನು ಸುತ್ತಬಲ್ಲಿವು

ಉದ್ಯೋಗ ಹುಡುಕಿಕೊಂಡು ಇಂದು ನಮ್ಮ ನಮ್ಮ  ಊರುಗಳಿಂದ ನಾಡು ಹೊರನಾಡು ದೇಶ ವಿದೇಶಗಳಲ್ಲಿ ನೆಲೆಸಿದ್ದೇವೆ ದಿನ ನಿತ್ಯ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ವಲಸೆ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು ಊರು ಬಿಟ್ಟು ಹೋದವರಲ್ಲಿ ಅನೇಕರು ತಮಗೆ ಜನ್ಮ ನೀಡಿದ ಆಡಿ ಬೆಳೆದ ಮೂಲ ನಲೆಯನ್ನೇ ಮರೆತು ಹೋಗಿದ್ದರು ನಗರೀಕರಣದ ಥಳಕು ಬೆಳಕಿನ ಮಾಯಾ ನಗರಿಯ ವ್ಯಾಮೋಹಕ್ಕೆ ಬಲಿಯಾಗಿದ್ದರು ಇದರಿಂದ ಕೃಷಿ ಕ್ಷೇತ್ರ ದಲ್ಲಿ ದುಡಿಯುವವರು ಇಲ್ಲದೆ ಹಾಗೂ ಕೂಲಿ ಕಾರ್ಮಿಕರು ಸಿಗದೆ ಇರುವದರಿಂದ ಒಕ್ಕಲುತನ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿ ಅಪಾಯದ ಅಂಚಿನಲ್ಲಿ ಬಂದು ನಿಂತಿತ್ತು ಹೀಗಾಗಿ ಅನೇಕ ಹಳ್ಳಿಗಳಲ್ಲಿ ಬಿಕೋ ಅನ್ನು ವಾತಾವರಣ ಕಾಣಬಹುದಾಗಿತ್ತು ಮಕ್ಕಳು  ವಯೋವೃದ್ಧರು ಮಾತ್ರ ವಾಸಿಸುತ್ತಿದ್ದು ಯುವಕರು ಮೈಯಲ್ಲಿ ಶಕ್ತಿ ಇದ್ದವರು ದೊಡ್ಡ ದೊಡ್ಡ ಶೆಹರ್ಗಳನ್ನು ಸೇರಿಕೊಂಡಿದ್ದಾರೆ ಹೀಗಾಗಿ ಗ್ರಾಮಗಳು ವೃದ್ದಾಶ್ರಮಗಳಾಗಿ ಬದಲಾದಂತೆ ಭಾಸವಾಗುತ್ತಿತ್ತು

ಕೂರೋನಾ ವೈರಸ್ ಬಂದಿದ್ದೆ ತಡ ಊರು ಬಿಟ್ಟು ಹೋದವರು ಓಡೋಡಿ ಊರಿಗೆ ಬಂದರು ಕೆಲವರು ಲಾಕ್ ಡೌನ್ ಆಗುವ ಮುಂಚೆ ಹೆಂಡತಿ ಮಕ್ಕಳೊಂದಿಗೆ ಊರು ಸೇರಿಕೊಂಡರು ಲಾಕ್ ಡೌನ್ ನಂತರ ವಾಹನ ಸೌಕರ್ಯಗಳು ಬಂದ್ ಆದ ಮೇಲೆ ನೂರಾರು ಕಿಲೋಮೀಟರ್ ಪಡಬಾರದ ಕಷ್ಟ ಕಾರ್ಪಣ್ಯಗಳನ್ನು ನುಂಗಿ ಬೇಸಿಗೆ ಬಿಸಿಲಿನಲ್ಲಿ ಉಪವಾಸ ವನವಾಸ ಬಿದ್ದು ಜೀವ ಕೈಯಲ್ಲಿ ಹಿಡಿದುಕೊಂಡು  ನಡೆದುಕೊಂಡ ಬಂದರು ಊರು ತಲುಪಿ ನಿಟ್ಟುಸಿರು ಬಿಟ್ಟರು ಮತ್ತೇ ನಮ್ಮ ನಮ್ಮ  ಊರುಗಳಿಗೆ ಜೀವಕಳೆ ಬಂದಿದೆ ಮೌನವಾಗಿದ್ದ ಹಳ್ಳಿಗಳಲ್ಲಿ ಕಲರವ ಕೇಳುತ್ತಿದೆ ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದ  ಕಟ್ಟೆಗಳ ಮೇಲೆ ಊರಮಂದಿ ಕುಳಿತು ಹರಟೆ ಶುರು ಇಟ್ಟುಕೊಂಡಿದ್ದಾರೆ ಯುವಕರು ಕ್ಯಾರಂ. ಚಕಾರ ಆಟ ಜೋರಾಗಿ  ಆಡುತ್ತಿದ್ದಾರೆ ಊರ ಮುಂದಿನ ಬಾವಿಗಳಲ್ಲಿ ಮಧ್ಯಾಹ್ನ  ಈಸಲು ಆಟ ಜಬರ್ ದಸ್ತ್ ಆಡುತ್ತಿದ್ದಾರೆ ಹೊಲಗಳ ಮುಖ ನೋಡದವರು ಮುಂಜಾನೆ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ ನೇಗಿಲು ಹೊಡೆಸುವ ಕೋಯ್ಲಿ ಆಯಿಸೋದು ಮುಂಗಾರು ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳುತ್ತಿದ್ದಾರೆ

ಪಟ್ಟಣದಾಗ ಇದ್ದ ಮಂದಿ ಊರಿಗೆ ಬಂದು ಮನಿಯಾಗಿನ ಹಿರಿಕರ ಜೊತೆ ಇರೋದು ನೋಡಿ ಹಿರಿಯಗೋಳಗಿ ಎಲ್ಲಿಲ್ಲದ ಖುಷಿ ತಂದಿದ ಮಗ ಸೊಸೆ ಮೊಮ್ಮಕ್ಕಳ ಜೊತೆಗೆ ಉಣೋದು  ತಿನೋದು ಮಾಡಲಕ್ಕತ್ತರ ಅವರ ಮುಖದ ಮೇಲಾ ಹೊಸ ಆಶಾ ಬಂದದ

ನಮ್ಮ ಊರ ನಮಗ ದೊಡ್ಡದು ಗಂಜಿಯರೆ ಕುಡಿಯಲಿ ಅಂಬಲಿಯರೆ ಕುಡಿಯಲಿ ಎಲ್ಲರ ಜೊತಗೆ ಊರಾಗೆ ಇರೋಣ ಅನ್ನು ಪಾಠ ಕಲಿಸಿದೆ.

ನಾಗಲಿಂಗಯ್ಯ ಮಠಪತಿ ಕಲಬರುಗಿ
emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

9 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

9 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

9 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

10 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

10 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420