ಕಲಬುರಗಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಚೆಕ್ ಪೋಸ್ಟ್‍ಗಳು, ವಿಶೇಷವಾಗಿ ಸ್ಥಾಪಿಸಲಾದ ಚೆಕ್‍ಪೋಸ್ಟ್‍ಗಳು ಹಾಗೂ ಕೊರೋನಾ ವೈರೆಸ್ ಖಚಿತವಾದ ರೋಗಿಗಳ ವಾರ್ಡ್‍ಗಳ ಬ್ಯಾರಿಕೇಡ್ ಬಳಿ ಸಿ.ಸಿ. ಟಿ.ವಿ ಅಳವಡಿಸಲು ಕ್ರಮವಹಿಸುವಂತೆ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಿದರು.
ಅವರು ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಕರೆದಿದ್ದ ನಗರದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಎಲ್ಲಾ ಚೆಕ್ ಪೋಸ್ಟ್‍ಗಳಿಗೆ ಇಂದು ತಾವು ದಿಢೀರ್ ಭೇಟಿ ನೀಡಿದ್ದು, ಶಹಾಬಾದ ಹಾಗೂ ಹುಮನಾಬಾದನಿಂದ ಆಗಮಿಸುವ ಚೆಕ್ ಪೋಸ್ಟಗಳು ಹೊರುತುಪಡಿಸಿ ಎಲ್ಲಾ ಚೆಕ್ ಪೋಸ್ಟಗಳು ಚುರುಕಾಗಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಚೆಕ್‍ಪೋಸ್ಟಗಳಲ್ಲಿ ಸಿ.ಸಿ. ಕ್ಯಾಮರಾಗಳು ಅಳವಡಿಸಿ ಮರುದಿನ ಜಿಲ್ಲೆಗೆ ಆಗಮಿಸಿರುವ ವಾಹನಗಳು ಹಾಗೂ ವ್ಯಕ್ತಿಗಳ ಮಾಹಿತಿಗಳನ್ನು ಪರಿಶೀಲಿಸಬಹುದಾಗಿದೆ ಎಂದರು.
ದಿನೆ ದಿನೇ ಜಿಲ್ಲೆಯಲ್ಲಿ ಕೊರೋನಾ ವೈರೆಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಲಬುರಗಿ ಜಿಲ್ಲೆ ಈಗ ರೆಡ್ ಝೋನ್ ಆಗಿ ಪರಿವರ್ತನೆಯಾಗಿದೆ. ಇನ್ನು ಮುಂದೆ ಎಲ್ಲರೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಕೊರೋನಾ ವೈರೆಸ್ ತಗುಲಿದ ರೋಗಿಯ ಖಚಿತ ಮಾಹಿತಿಯನ್ನು ತ್ವರಿತವಾಗಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ಅವರಿಗೆ ಸೂಚಿಸಿದರು. ಮಾಹಿತಿ ಪಡೆದ ಪೊಲೀಸ್ ಇಲಾಖೆಯೂ ಎರಡು ಗಂಟೆಯೊಳಗಾಗಿ ವೈರೆಸ್ ಖಚಿತವಾದ ರೋಗಿಯ ಕಾಲೋನಿಯ ಸುತ್ತಮುತ್ತ ಬ್ಯಾರಿಕೇಡ್ ಹಾಗೂ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಸದಸ್ಯರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರು ಮಾತನಾಡಿ ದೇಶದಲ್ಲಿ ಲಾಕ್‍ಡೌನ್ ಆಗುವ ಮುಂಚೆಯೇ ಕಲಬುರಗಿ ಜಿಲ್ಲೆ ಹನ್ನೆರಡು ದಿನಗಳ ಹಿಂದೆಯೇ ಲಾಕ್‍ಡೌನ್ ಆಗಿದೆ. ಆದರೂ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ನಮ್ಮ ಜಿಲ್ಲೆ ರೆಡ್‍ಝೋನ್ ಪರಿಸ್ಥಿತಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರತಿಯೊಂದು ವಾಡ್ರ್Àಗಳ ಸಣ್ಣ ಪುಟ್ಟ ರಸ್ತೆಗಳು ಸೇರಿದಂತೆ ಎಲ್ಲ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಈ ವಾರ್ಡನಿಂದ ಹೊರಗಡೆ ಹೋಗಲು ಒಂದೇ ದಾರಿಯ ವ್ಯವಸ್ಥೆ ಮಾಡಬೇಕು. ವಾರ್ಡ್‍ನಿಂದ ಹೊರಗಡೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಓರ್ವ ಪೊಲೀಸ್ ಪೇದೆ, ಮಹಾನಗರ ಪಾಲಿಕೆಯಿಂದ ಓರ್ವ ಇಂಜಿನೀಯರ್ ಹಾಗೂ ಓರ್ವ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಬೇಕೆಂದರು.
ಈ ಕುರಿತು ಒಂದು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿಕೊಂಡು ತಂಡ ಕಾರ್ಯನಿರ್ವಹಿಸಬೇಕು. ವಾರ್ಡ್‍ಗಳಿಂದ ಹೊರಗಡೆ ಹೋಗುವ ಸಾರ್ವಜನಿಕರಿಗೆ ತಡೆದು ಮನೆಯಲ್ಲೆ ಇರಲು ತಿಳಿಸಿ ಅವರ ಮನೆ ವಿಳಾಸ ಪಡೆದು ಅವರಿಗೆ ಬೇಕಾಗಿರುವ ಅಗತ್ಯ ವಸ್ತುಗಳಾದ ದವಸ ಧಾನ್ಯ, ತರಕಾರಿ ಹಾಗೂ ರೋಗಿಗಳಿಗೆ ಮಾತ್ರೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಮೂರರಿಂದ ನಾಲ್ಕು ಗಂಟೆಯೊಳಗಾಗಿ ಅವರ ಮನೆ ಬಾಗಲಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.
ಪೊಲೀಸರು ಕಾನೂನು ಪಾಲನೆಯ ಜೊತೆಗೆ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೀದಿನಾಟಕ, ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮಾಡಿಸುತ್ತಿದ್ದು, ಇದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಎನ್.ವಿ ಪ್ರಸಾದ, ನಗರ ಪೊಲೀಸ್ ಆಯುಕ್ತ ಸತೀಶ ಕುಮಾರ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿ.ಸಿ.ಪಿ. ಕಿಶೋರ ಬಾಬು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಪಿಇ ಕಿಟ್ ನೀಡಿಕೆ: ಇದೇ ಸಂದರ್ಭದಲ್ಲಿ ಪಿಪಿಇ ಕಿಟ್ ಕಲಬುರಗಿ ರೋಟರಿ ಕ್ಲಬ್ ಅಧ್ಯಕ್ಷ ಕಿರಣಕುಮಾರ ಶೆಟ್ಟಕಾರ್ ಇವರು 10 ಪಿಪಿಇ ಕಿಟ್ ಹಾಗೂ 1000 ಮಾಸ್ಕ್‍ಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೇಣಿಗೆಯಾಗಿ ನೀಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…