ನಿರ್ಗತಿಕರಿಗೆ ಸಹಾಯ ಮಾಡುವ ಕೈಗಳು ಮುಂದೆ ಬರಲಿ: ತಹಶೀಲ್ದಾರ್ ವರ್ಮಾ

ಶಹಾಬಾದ: ಲಾಕ್‌ಡೌನ್ ಆಗಿದ್ದಾಗಿನಿಂದಲೂ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗದಂತೆ ಸರ್ಕಾರ ಎಲ್ಲಾ ರಿತೀಯ ಕ್ರಮಕೈಗೊಂಡಿದೆ. ಅದರ ಜತೆಗೆ ನೀಡುವ ಕೈಗಳು ಮುಂದೆ ಬಂದರೆ ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ನಗರದ ಸಮಾಜ ಕಲ್ಯಾಣ ಇಲಾಖೆಯ ಪ್ರಿಮೆಟ್ರಿಕ್ ವಸತಿ ನಿಲಯದಲ್ಲಿ ದಾನಿಗಳು ನೀಡಿದ ಆಹಾರವನ್ನು ಸ್ವೀಕರಿಸಿ ಮಾತನಾಡಿದರು.

ಕೆಲವರು ಸ್ವಯಂ ಪ್ರೇರಿತರಾಗಿ ಆಹಾರವನ್ನು, ತರಕಾರಿಗಳನ್ನು ವಿತರಣೆ ಮಾಡುತ್ತಿದ್ದಾರೆ.ಇನ್ನೂ ಕೆಲವರು ತಮ್ಮ ಮಕ್ಕಳ ಜನ್ಮದಿನದಂದು ಆಹಾರ ಪದಾರ್ಥಗಳನ್ನು ಕೊಡುತ್ತಿದ್ದಾರೆ.ಇನ್ನೂ ಉದ್ದಿಮೆದಾರರು ಉದಾರ ಹಸ್ತ ಚಾಚುತ್ತಿದ್ದಾರೆ.ಇದೇ ರೀತಿ ನೀಡುವ ಕೈಗಳು ಮುಂದೆ ಬರಬೇಕು.ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ  ನಿರ್ಗತಿಕರಿಗೆ ಮತ್ತು ಕಡುಬಡವರ ಕುಟುಂಬಕ್ಕೆ ಮಾನವೀಯತೆಯಿಂದ ಆಹಾರವನ್ನು ಒದಗಿಸಿ, ಅವರಲ್ಲೇ ದೇವರನ್ನು ಕಾಣಬಹುದು ಎಂದರು.

ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಮ್ಮ.ಎಸ್.ಬಬಲಾದ, ಪೌರಾಯುಕ್ತ ವೆಂಕಟೇಶ, ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ಜೆಇ ಬಸವರಾಜ,ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಾಯಿಬಣ್ಣ ಸುಂಗಲಕರ್ ಸೇರಿದಂತೆ ಇತರರು ಇದ್ದರು.

emedialine

Recent Posts

ಒಂದು ತಿಂಗಳೊಳಗೆ ವಕ್ಫ್ ಆಸ್ತಿ ಖಾತಾ ಅಪಡೇಷನ್ ಕಾರ್ಯ ಮುಗಿಸಲು ಗಡುವು

ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಂದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನೆ ಕಲಬುರಗಿ; ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗೆ…

23 mins ago

ಕಲ್ಯಾಣದ ರಚನಾತ್ಮಕ ಅಭಿವೃದ್ಧಿಗೆ ಸಮಿತಿಯಿಂದ ಮುಖ್ಯಮಂತ್ರಿಗೆ ಪ್ರಸ್ತಾವನೆ

ಕಲಬುರಗಿ.ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಸೆಪ್ಟೆಂಬರ್ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ಮತ್ತು ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕಲಬುರಗಿ ಭೇಟಿಯ…

24 mins ago

ಮಹಾದೇವಿಯಕ್ಕಗಳ ಸಮ್ಮೇಳನ; ಸೆ. 21 ರಿಂದ

ಕಲಬುರಗಿ: ಇಲ್ಲಿನ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಸೆ. 21ರಿಂದ ಎರಡು ದಿನಗಳ ಕಾಲ 14ನೇ ಮಹಾದೇವಿಯಕ್ಕಳ ಸಮ್ಮೇಳನ…

1 hour ago

ಶೇ.100 ರಷ್ಟು ಫಲಿತಾಂಶ ಸಾಧಿಸಿದ ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ

ಕಲಬುರಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಫಲಿತಾಂಶದ ಪಟ್ಟಿಯಲ್ಲಿ ಗೋದುತಾಯಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು…

2 hours ago

ರಾವೂರ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ: ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವೇಕಾನಂದ ಪ್ರಾಥಮಿಕ ಮತ್ತು ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕ…

4 hours ago

ಜೀ಼ ಕನ್ನಡದ ಸರಿಗಮಪ ಆಡಿಷನ್ ಕಲಬುರಗಿಯಲ್ಲಿ ಇದೇ ಶನಿವಾರದಂದು

  ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ನಿಮ್ಮೂರಿಗೂ ಬರ್ತಿದೆ ಸರಿಗಮಪ ಆಡಿಷನ್, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420