ನಿರ್ಗತಿಕರಿಗೆ ಸಹಾಯ ಮಾಡುವ ಕೈಗಳು ಮುಂದೆ ಬರಲಿ: ತಹಶೀಲ್ದಾರ್ ವರ್ಮಾ

0
81

ಶಹಾಬಾದ: ಲಾಕ್‌ಡೌನ್ ಆಗಿದ್ದಾಗಿನಿಂದಲೂ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗದಂತೆ ಸರ್ಕಾರ ಎಲ್ಲಾ ರಿತೀಯ ಕ್ರಮಕೈಗೊಂಡಿದೆ. ಅದರ ಜತೆಗೆ ನೀಡುವ ಕೈಗಳು ಮುಂದೆ ಬಂದರೆ ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ನಗರದ ಸಮಾಜ ಕಲ್ಯಾಣ ಇಲಾಖೆಯ ಪ್ರಿಮೆಟ್ರಿಕ್ ವಸತಿ ನಿಲಯದಲ್ಲಿ ದಾನಿಗಳು ನೀಡಿದ ಆಹಾರವನ್ನು ಸ್ವೀಕರಿಸಿ ಮಾತನಾಡಿದರು.

Contact Your\'s Advertisement; 9902492681

ಕೆಲವರು ಸ್ವಯಂ ಪ್ರೇರಿತರಾಗಿ ಆಹಾರವನ್ನು, ತರಕಾರಿಗಳನ್ನು ವಿತರಣೆ ಮಾಡುತ್ತಿದ್ದಾರೆ.ಇನ್ನೂ ಕೆಲವರು ತಮ್ಮ ಮಕ್ಕಳ ಜನ್ಮದಿನದಂದು ಆಹಾರ ಪದಾರ್ಥಗಳನ್ನು ಕೊಡುತ್ತಿದ್ದಾರೆ.ಇನ್ನೂ ಉದ್ದಿಮೆದಾರರು ಉದಾರ ಹಸ್ತ ಚಾಚುತ್ತಿದ್ದಾರೆ.ಇದೇ ರೀತಿ ನೀಡುವ ಕೈಗಳು ಮುಂದೆ ಬರಬೇಕು.ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ  ನಿರ್ಗತಿಕರಿಗೆ ಮತ್ತು ಕಡುಬಡವರ ಕುಟುಂಬಕ್ಕೆ ಮಾನವೀಯತೆಯಿಂದ ಆಹಾರವನ್ನು ಒದಗಿಸಿ, ಅವರಲ್ಲೇ ದೇವರನ್ನು ಕಾಣಬಹುದು ಎಂದರು.

ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಮ್ಮ.ಎಸ್.ಬಬಲಾದ, ಪೌರಾಯುಕ್ತ ವೆಂಕಟೇಶ, ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ಜೆಇ ಬಸವರಾಜ,ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಾಯಿಬಣ್ಣ ಸುಂಗಲಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here