ಸುರಪುರ: ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಸವ ಜಯಂತಿ ಅಂಗವಾಗಿ ನಗರದ ವಾರ್ಡ್ ಸಂಖ್ಯೆ ೧೫ರ ಪಾಳದಕೇರಿಯಲ್ಲಿನ ವಯೋವೃಧ್ಧ ಮಹಿಳೆಯೊಬ್ಬರ ಮನೆ ದುರಸ್ಥಿಗೊಳಿಸಿ ಕೊಟ್ಟು ಜೊತೆಗೆ ಗೃಹ ಪ್ರವೇಶ ನಡೆಸಿ ವಿಶೇಷವಾಗಿ ಬಸವ ಜಯಂತಿ ಆಚರಿಸಿದರು.
ವಯೋವೃಧ್ಧ ಮಹಿಳೆ ಗುರುಬಾಯಿ ಎಂಬುವವರು ಕಳೆದ ಐದಾರು ವರ್ಷದ ಹಿಂದೆ ಮನೆಯ ಮೇಲ್ಛಾವಣಿ ಬಿದ್ದಿದ್ದರಿಂದ ನಾಲ್ಕು ಫೀಟ್ ಸುತ್ತಳತೆಯ ಗುಡಿಸಲಲ್ಲಿ ವಾಸಿಸುತ್ತಿದ್ದರು.ಈ ಮಹಿಳೆಯ ಕರುಣಾಜನಕ ಕತೆಯನ್ನು ಟೀಂ ರಾಜುಗೌಡ ಸೇವಾ ಸಮಿತಿಯು ಲಾಕ್‌ಡೌನ್ ಅಂಗವಾಗಿ ಅನ್ನ ವಿತರಣೆ ಸಂದರ್ಭ ಗುರುತಿಸಿದ ಸಂಗತಿ ತಿಳಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೃಧ್ಧ ಮಹಿಳೆಯ ಮನೆಯನ್ನು ದುರಸ್ಥಿ ಮಾಡಿಸಿ ಕೊಡುವುದಾಗಿ ತಿಳಿಸಿದ್ದರು.
ಅದರಂತೆ ಕಳೆದ ಒಂದು ವಾರದಿಂದ ಮನೆಯ ದುರಸ್ಥಿ ಕಾರ್ಯ ನಡೆಸಿ ಇಂದು ಮನೆಯ ಗೃಹ ಪ್ರವೇಶ ನಡೆಸುವ ಮೂಲಕ ವಿಶೇಷವಾಗಿ ಬಸವ ಜಯಂತಿಯನ್ನು ಆಚರಿಸಿದರು.ಬೆಳಿಗ್ಗೆ ೧೦ ಗಂಟೆಗೆ ನಡೆದ ಗೃಹ ಪ್ರವೇಶ ಸಮಾರಂಭದಲ್ಲಿ ಮೊದಲಿಗೆ ಬಸವೇಶ್ವರರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ,ನಂತರ ಆರಕ್ಷಕ ನಿರೀಕ್ಷಕ ಎಸ್.ಎಮ.ಪಾಟೀಲ್ ಗೃಹ ಪ್ರವೇಶ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಟೀಂ ರಾಜುಗೌಡ ಸೇವಾ ಸಮಿತಿಯಿಂದ ಮಹಿಳೆಯ ಕರುಣಾಜನಕ ಸ್ಥಿತಿಯ ಬಗ್ಗೆ ತಿಳಿಯಿತು.ಅದರಿಂದ ಇಂದು ಮಹಿಳೆಯ ಮನೆ ದುರಸ್ಥಿ ಮಾಡಿಸಿಕೊಡಲು ಮುಂದೆ ಬಂದೆವು.ಇದರಿಂದ ಆ ತಾಯಿಯ ಮುಖದಲ್ಲಿನ ಸಂತೋಷ ಕಂಡು ಖುಷಿಯಾಗಿದೆ ಎಂದರು.ಅಲ್ಲದೆ ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ ಎಂದರು.
ನಂತರ ಆರಕ್ಷಕ ನಿರೀಕ್ಷಕ ಎಸ್.ಎಂ.ಪಾಟೀಲ್ ಮಾತನಾಡಿ,ಮಠಮಾನ್ಯಗಳೆಂದರೆ ಕೇವಲ ಧರ್ಮ ಪ್ರಸಾರ ಮಾತ್ರ ಮಾಡುವುದಲ್ಲ.ಅದರಜೊತೆಗೆ ಕಷ್ಟದಲ್ಲಿರುವವರ ನೆರವಿಗೆ ಬರುವುದು ಎಂಬುದನ್ನು ವೃಧ್ಧೆಗೆ ಸೂರು ಕಲ್ಪಿಸುವ ಮೂಲಕ ದೇವಾಪುರದ ಶ್ರೀಗಳು ತೋರಿಸಿಕೊಟ್ಟಿದ್ದಾರೆ.ಇಂತಹ ಸಮಾಜಮುಖಿ ಕಾರ್ಯ ಎಲ್ಲಾ ಮಠ ಮಾನ್ಯಗಳಿಗೂ ಮಾದರಿಯಾಗಿದೆ.ಟೀಂ ರಾಜುಗೌಡ ಸೇವಾ ಸಮಿತಿಯು ನಗರದಾದ್ಯಂತ ಎಲ್ಲ ಬಡ ನಿರ್ಗತಿಕರಿಗೆ ನಿತ್ಯವು ಅನ್ನ ನೀರು ವಿತರಣೆಯ ಸೇವೆ ಅಮೋಘವಾಗಿದೆ ಎಂದರು.
ನಂತರ ಮನೆಯ ದುರಸ್ಥಿಗೆ ಶ್ರಮಿಸಿದ ಕಾರ್ಮಿಕರಿಗೆ,ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರಿಗೆ ಗೌರವ ಸನ್ಮಾನ ನೆರವೇರಿಸಿದರು.ಈ ಸಂದರ್ಭದಲ್ಲಿ ಕೆಂಭಾವಿ ಠಾಣೆ ಪಿಎಸ್‌ಐ ಸುದರ್ಶನ್ ರಡ್ಡಿ,ಟೀಂ ರಾಜುಗೌಡ ಸೇವಾ ಸಮಿತಿಯ ಲಕ್ಷ್ಮೀಕಾಂತ ದೇವರಗೋನಾಲ,ಗಂಗಾಧರ ನಾಯಕ,ಪರಶುರಾಮ ನಾಟೇಕಾರ್,ಸಂತೋಷ ಕುಂಬಾರ ಮುಖಂಡರಾದ ವಿರುಪಾಕ್ಷಿ ಕೋನಾಳ,ಮಂಜುನಾಥ ಜಾಲಹಳ್ಳಿ,ಜಗದೀಶ ಪಾಟೀಲ್,ಚಂದ್ರಶೇಖರ ಡೊಣೂರ ಪೇದೆಗಳಾದ ಮನೋಹರ ರಾಠೋಡ,ಮಂಜುನಾಥ ಹಿರೇಮಠ,ಮಹಾಂತೇಶ ಬಿರಾದಾರ್ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…