ಸುರಪುರ: ಇಂದು ಕೊರೊನಾ ಲಾಕ್‍ಡೌನ್ ಘೋಷಣೆಯಿಂದಾಗಿ ಅನೇಕ ವರ್ಗದ ಅನೇಕ ವಲಯಗಳಲ್ಲಿನ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.ಇದನ್ನು ಅರಿತ ಮಾನ್ಯ ಮುಖ್ಯಮಂತ್ರಿಗಳು ಅನೇಕ ವರ್ಗದ ಕಾರ್ಮಿಕರಿಗೆ ಸಹಾಯ ಧನ ಘೋಷಣೆ ಮಾಡಿದ್ದಾರೆ.ಅದರಂತೆ ಸಂವಿಧಾನದ ನಾಲ್ಕನೆ ಅಂಗವೆಂದು ಕರೆಯುವ ಮಾದ್ಯಮ ರಂಗದ ಶ್ರಮಿಕರಿಗೂ ಸಹಾಯ ಧನ ಘೋಷಣೆ ಮಾಡುವಂತೆ ಬಿಜೆಪಿ ಯುವ ಮುಖಂಡ ರಂಗನಗೌಡ ಪಾಟೀಲ ದೇವಿಕೇರಾ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಪತ್ರಿಕಾ ಮತ್ತು ದೃಶ್ಯ ಮಾದ್ಯಮಗಳ ವರದಿಗಾರರು ಅನೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿ ಮಾಡಿದ್ದಾರೆ.ಅನೇಕರು ಇಂತಹ ಸಂದರ್ಭದ ಅಪಾಯಕ್ಕೆ ಸಿಲುಕಿರುವ ಉದಾಹರಣೆಗಳು ಪಕ್ಕದ ರಾಜ್ಯ ಮತ್ತು ನಮ್ಮ ರಾಜ್ಯದಲ್ಲಿಯೂ ಕಾಣಬಹುದಾಗಿದೆ.
ಆದರೆ ಈ ಮಾದ್ಯಮಗಳಲ್ಲಿ ಹಗಲಿರಳು ಜನ ಜಾಗೃತಿ ಮೂಡಿಸಲು ದುಡಿಯುವವರ ಜೀವನಕ್ಕೆ ಯಾವುದೇ ಭದ್ರತೆ ಇಲ್ಲದಂತಿದೆ.ಇದನ್ನು ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ.ನಮ್ಮೆಲ್ಲರ ಒಳಿತಿಗಾಗಿ ಹಗಲಿರಳು ಶ್ರಮಿಸುತ್ತಿರುವ ಮಾದ್ಯಮಗಳ ವರಿದಗಾರರಿಗೂ ಮುಖ್ಯಮಂತ್ರಿಗಳು ಸಹಾಯ ಧನ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…