ಕಲಬುರಗಿ; ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಬದಲಾವಣೆ ಸಲ್ಲ, ಕೊರೋನಾ ಸೋಂಕಿನ ಸಂಬಂಧಪಟ್ಟ ಪರಿಸ್ಥಿತಿಯನ್ನು ಎದುರಿಸಲು ಕೆಲವು ರಾಜ್ಯಸರಕಾರಗಳು ಹಲವು ದಶಕಗಳ ಹೋರಾಟದ ಫಲವಾಗಿ ದೊರಕಿಸಲ್ಪಟ್ಟ ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಬದಲಾವಣೆ ಮಾಡುತ್ತಿರುವುದು ಖಂಡನಾರ್ಹವಾಗಿದೆ ಎಂದು ಹೈ ಕೋರ್ಟ್‌ನ ನ್ಯಾಯವಾದಿ ಆರ್.ವಿ. ನಾಡಗೌಡ ಅವರು ತಿಳಿಸಿದ್ದಾರೆ.
ಕೊರೋನಾ ಸೋಂಕು ಸೃಷ್ಠಿಸಿದ ಆರ್ಥಿಕ ಪರಿಸ್ಥತಿಯನ್ನು ಎದುರಿಸಲು, ನಾಲ್ಕು ಕಾರ್ಮಿಕ ಸಂಭಂಧ ಪಟ್ಟ ಕಾನೂನು ಹೊರತಾಗಿ ಎಲ್ಲ ಕಾರ್ಮಿಕ ಕಾನೂನುಗಳನ್ನು ಕೆಲಕಾಲ ತಡೆಹಿಡಿಯುವ ಪ್ರಯತ್ನ, ಮಾನವೀಯ ಹಕ್ಕುಗಳನ್ನು ಕಸಿಕೊಳ್ಳುವ ಸರಕಾರದ ಯತ್ನ ಹಾಗೂ ಶ್ರೀಮಂತ ವರ್ಗದ ಷಡ್ಯಂತ್ರವಾಗಿದೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಇದೊಂದು ಪ್ರಮುಖ ಹೆಜ್ಜೆ ಎಂದು ಬಿಂಬಿಸುವುದು ದುರಂತವಾಗಿದೆ ಎಂದರು.
ಕಾನೂನು ಸುಧಾರಣೆಯ ಹೆಸರಲ್ಲಿ ಶ್ರಮಿಕ ವರ್ಗವನ್ನು ದಮನ ಮಾಡುವ ಒಂದು ಪ್ರಯತ್ನವಾಗಿದೆ. ಉದ್ಯೋಗಪತಿಗಳ ಪರವಾಗಿ ಇರುವ ಸರಕಾರದ ಮನಸ್ಥಿತಿಯಾಗಿದೆ.ಕಾರ್ಮಿಕರಿಗೆ ಕೊಟ್ಟ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳುವ ಕುತಂತ್ರ ನಡೆದಿದೆ. ಜೀವಿಸುವ ಹಕ್ಕನ್ನು ಮೊಟಕುಗೊಳಿಸುವ ಷಡ್ಯಂತ್ರ ನಡೆದಿದೆ. ಬಡ ಕಾರ್ಮಿಕರ ರಕ್ತದ ಮೇಲೆ ಔಧ್ಯೋಗಿಕರಣದ ಪುನರುಸ್ಥಾನ ಖಂಡನಿಯ, ಎಲ್ಲಾ ಪ್ರಜ್ಞಾವಂತ ನಾಗರೀಕರು ಈ ಪ್ರಯತ್ನವನ್ನು ಖಂಡಿಸಬೇಕು ಮತ್ತು ವಿರೋಧಿಸಬೇಕು ಎಂದು ಆರ್.ವಿ. ನಾಡಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…