ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಬದಲಾವಣೆ ಮಾಡುತ್ತಿರುವುದು ಖಂಡನೀಯ: ನಾಡಗೌಡ

0
74

ಕಲಬುರಗಿ; ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಬದಲಾವಣೆ ಸಲ್ಲ, ಕೊರೋನಾ ಸೋಂಕಿನ ಸಂಬಂಧಪಟ್ಟ ಪರಿಸ್ಥಿತಿಯನ್ನು ಎದುರಿಸಲು ಕೆಲವು ರಾಜ್ಯಸರಕಾರಗಳು ಹಲವು ದಶಕಗಳ ಹೋರಾಟದ ಫಲವಾಗಿ ದೊರಕಿಸಲ್ಪಟ್ಟ ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಬದಲಾವಣೆ ಮಾಡುತ್ತಿರುವುದು ಖಂಡನಾರ್ಹವಾಗಿದೆ ಎಂದು ಹೈ ಕೋರ್ಟ್‌ನ ನ್ಯಾಯವಾದಿ ಆರ್.ವಿ. ನಾಡಗೌಡ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕು ಸೃಷ್ಠಿಸಿದ ಆರ್ಥಿಕ ಪರಿಸ್ಥತಿಯನ್ನು ಎದುರಿಸಲು, ನಾಲ್ಕು ಕಾರ್ಮಿಕ ಸಂಭಂಧ ಪಟ್ಟ ಕಾನೂನು ಹೊರತಾಗಿ ಎಲ್ಲ ಕಾರ್ಮಿಕ ಕಾನೂನುಗಳನ್ನು ಕೆಲಕಾಲ ತಡೆಹಿಡಿಯುವ ಪ್ರಯತ್ನ, ಮಾನವೀಯ ಹಕ್ಕುಗಳನ್ನು ಕಸಿಕೊಳ್ಳುವ ಸರಕಾರದ ಯತ್ನ ಹಾಗೂ ಶ್ರೀಮಂತ ವರ್ಗದ ಷಡ್ಯಂತ್ರವಾಗಿದೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಇದೊಂದು ಪ್ರಮುಖ ಹೆಜ್ಜೆ ಎಂದು ಬಿಂಬಿಸುವುದು ದುರಂತವಾಗಿದೆ ಎಂದರು.

Contact Your\'s Advertisement; 9902492681

ಕಾನೂನು ಸುಧಾರಣೆಯ ಹೆಸರಲ್ಲಿ ಶ್ರಮಿಕ ವರ್ಗವನ್ನು ದಮನ ಮಾಡುವ ಒಂದು ಪ್ರಯತ್ನವಾಗಿದೆ. ಉದ್ಯೋಗಪತಿಗಳ ಪರವಾಗಿ ಇರುವ ಸರಕಾರದ ಮನಸ್ಥಿತಿಯಾಗಿದೆ.ಕಾರ್ಮಿಕರಿಗೆ ಕೊಟ್ಟ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳುವ ಕುತಂತ್ರ ನಡೆದಿದೆ. ಜೀವಿಸುವ ಹಕ್ಕನ್ನು ಮೊಟಕುಗೊಳಿಸುವ ಷಡ್ಯಂತ್ರ ನಡೆದಿದೆ. ಬಡ ಕಾರ್ಮಿಕರ ರಕ್ತದ ಮೇಲೆ ಔಧ್ಯೋಗಿಕರಣದ ಪುನರುಸ್ಥಾನ ಖಂಡನಿಯ, ಎಲ್ಲಾ ಪ್ರಜ್ಞಾವಂತ ನಾಗರೀಕರು ಈ ಪ್ರಯತ್ನವನ್ನು ಖಂಡಿಸಬೇಕು ಮತ್ತು ವಿರೋಧಿಸಬೇಕು ಎಂದು ಆರ್.ವಿ. ನಾಡಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here