ಬಿಸಿ ಬಿಸಿ ಸುದ್ದಿ

ಗ್ರಾಮೀಣ ಕ್ವಾರಂಟೈನಲ್ಲಿರುವವರಿಗೆ ರಾಜುಗೌಡ ಸೇವಾ ಸಮಿತಿಯಿಂದ ಫಲಹಾರದ ಕಿಟ್ ವಿತರಣೆ

ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಾರಾಷ್ಟ್ರ ಗೋವಾ ರಾಜ್ಯಗಳಿಗೆ ಗುಳೆ ಹೋಗಿ ಬಂದವರು ಉಳಿದುಕೊಳ್ಳಲು ತೆರೆಯಲಾದ ಕ್ವಾರಂಟೈನಲ್ಲಿರುವವರಿಗೆ ಎಲ್ಲಾ ರೀತಿಯ ನೆರವನ್ನು ರಾಜುಗೌಡ ಸೇವಾ ಸಮಿತಿಯಿಂದ ನೀಡಲಾಗುತ್ತಿದೆ ಎಂದು ಸಮಿತಿ ಮುಖಂಡ ಪರಶುರಾಮ ನಾಟೇಕಾರ್ ತಿಳಿಸಿದರು.

ತಾಲೂಕಿನ ದೇವರಗೋನಾಲ ಪೇಠ ಅಮ್ಮಾಪುರ ಮಂಗಳೂರು ದೇವತ್ಕಲ್ ಕಕ್ಕೇರಾ ತಿಂಥಣಿ ದೇವಾಪುರ ಆಲ್ದಾಳ ಸೂಗುರು ಹೆಮನೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ತೆರೆಯಲಾದ ಕೋವಿಡ್-೧೯ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕೊರೊನಾ ಶಂಕಿತರಿಗೆ ಸಂಜೆ ಸಮಯದಲ್ಲಿ ಸೇವಿಸಲು ನೀಡಲಾಗುತ್ತಿರುವ ಬೂಂದಿ ಚೋಡಾ ಬಿಸ್ಕೆಟ್ ಮತ್ತಿತರೆ ಫಲಹಾರಗಳ ಕಿಟ್ ವಿತರಿಸಿ ಮಾಹಿತಿ ನೀಡಿ,ಶಾಸಕರಾದ ರಾಜುಗೌಡರು ಕ್ಷೇತ್ರದ ಜನರ ಶ್ರೇಯಸ್ಸಿಗಾಗಿ ಹಗಲಿರಳು ಶ್ರಮಿಸುತ್ತಿದ್ದು,ಇಂದು ಅವರ ಮಾರ್ಗದರ್ಶನದಂತೆ ರಾತ್ರಿ ಊಟ ವಿತರಿಸುವುದು ಸ್ವಲ್ಪ ಸಮಯದ ವ್ಯತ್ಯಾಸವಾದರು ಜನರು ಹಸಿವಿನಿಂದ ನರಳದಿರಲೆಂದು ಫಲಹಾರ ವಿತರಿಸಿ ಸಂಜೆ ವೇಳೆ ಸೇವಿಸಲು ನೀಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಿಗಳಪ್ಪ ಕವಡಿಮಟ್ಟಿ,ಪ್ರವೀಣ ವಿಭೂತೆ,ಪವನ ವಿಭೂತೆ,ಚೇತನ್,ರಾಜು ಇತರರಿದ್ದರು.s

emedialine

Recent Posts

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

46 seconds ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

59 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

20 hours ago