ಕಲಬುರಗಿ: ಗುಲಬರ್ಗಾ ಲೋಕಸಭಾ ಹಾಗೂ ೪೨-ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಬ್ಲಾಕ್‌ಗಳಲ್ಲಿ ಮೇ ೨೩ರಂದು ಬೆಳಗ್ಗೆ ೮ ಗಂಟೆಯಿಂದ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲಾ ಪೂರ್ವಸಿದ್ಧತೆಗಳು ಕೈಗೊಂಡಿದೆ. ಎಣಿಕೆ ಕಾರ್ಯ ಸುಸೂತ್ರವಾಗಿ ಜರುಗಲು ಸಿ.ಪಿ.ಎಂ.ಎಫ್., ಕೆ.ಎಸ್.ಆರ್.ಪಿ, ಡಿ.ಎ.ಆರ್ ಸೇರಿದಂತೆ ಒಟ್ಟು ೧೯೫೦ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಅವರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ, ಸಿ.ಐ.ಎಸ್.ಎಫ್. ಕಮಾಂಡರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ ಎಣಿಕೆ ಪೂರ್ವ ಸಿದ್ಧತಾ ಕಾರ್ಯ ಹಾಗೂ ಭದ್ರತೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಮತ ಎಣಿಕೆ ಕೇಂದ್ರದ ಭದ್ರತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಎಸ್.ಪಿ., ೧೦ ಜನ ಡಿವೈಎಸ್ಪಿ, ೨೫ ಪೊಲೀಸ್ ಇನ್ಸಪೆಕ್ಟರ್, ೫೦ ಪಿ.ಎಸ್.ಐ., ೧೩೦ ಎ.ಎಸ್.ಐ., ಸಿ.ಪಿ.ಎಂ.ಎಫ್ ೧೮೦ ಜವಾನರು, ೪ ಕೆ.ಎಸ್.ಆರ್.ಪಿ. ತುಕಡಿ, ೧೫ ಡಿಎಆರ್ ತುಕಡಿ, ೫ ಸ್ಟ್ರಾಟಿಜಿಕ್ ಭದ್ರತಾ ಪಡೆ ಹಾಗೂ ೧೦೦೦ ಸಿವಿಲ್ ಪೊಲೀಸ್ ಸೇರಿದಂತೆ ಒಟ್ಟಾರೆ ೧೯೫೦ ಜನ ಭದ್ರತಾ ಸಿಬ್ಬಂದಿಗಳು ಅಂದು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಲಬುರಗಿ ನಗರದಿಂದ ಸೇಡಂ ಕಡೆಗೆ ಹೋಗುವಾಗ ಸಿಗುವ ವಿಶ್ವವಿದ್ಯಾಲಯದ ಮೊದಲನೇ ಗೇಟ್‌ನಲ್ಲಿ ಅಭ್ಯರ್ಥಿ, ಕೌಂಟಿಂಗ್ ಏಜೆಂಟ್ ಹಾಗೂ ಚುನಾವಣಾ ಎಜೆಂಟ್‌ಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಎರಡನೇ ಗೇಟ್‌ನಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶವಿರುತ್ತದೆ. ಅಭ್ಯರ್ಥಿ, ಚುನಾವಣಾ ಏಜೆಂಟ್ ಅಥವಾ ಕೌಂಟಿಂಗ್ ಏಜೆಂಟರ ವಾಹನಗಳಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರವೇಶಾವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿ ಹಾಗೂ ಪೊಲಿಂಗ್ ಏಜೆಂಟ್ಗಳಿಗೆ ಪ್ರತಿ ವಿಧಾನಸಭಾ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿದ್ದಲ್ಲಿ ತಾತ್ಮಲಿಕ ಶೌಚಾಲಯದ ವ್ಯವಸ್ಥೆ ಸಹ ಮಾಡಬೇಕು. ಇದಲ್ಲದೆ ಕೇಂದ್ರಗಳ ಪಕ್ಕದಲ್ಲಿ ಅಧಿಕಾರಿಗಳ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವಿಶ್ವವಿದ್ಯಾಲಯದ ಆವರಣ ಪ್ರವೇಶಿಸುತ್ತಲೆ ನಿಗಧಿತ ಸ್ಥಳಕ್ಕೆ ಹೋಗಲು ಅನುಕೂಲವಾಗುವಂತೆ ಸಂಕೇತ ಬೋರ್ಡುಗಳು ಅಲ್ಲಲ್ಲಿ ಅಳವಡಿಸಬೇಕು ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಮೊಬೈಲ್, ಮ್ಯಾಚ್ ಬಾಕ್ಸ್ ನಿಷೇಧ:- ಮತ ಎಣಿಕೆ ನಡೆಯುವ ಕೇಂದ್ರದಲ್ಲಿ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿ, ಚುನಾವಣಾ ಏಜೆಂಟ್ ಮತ್ತು ಕೌಂಟಿಂಗ್ ಏಜೆಂಟಗಳು ಮೊಬೈಲ್, ವಾಟರ್ ಬಾಟಲ್, ಬೆಂಕಿ ಪೊಟ್ಟಣ, ಸಿಗರೇಟ್, ಮ್ಯಾಚ್ ಬಾಕ್ಸ್, ಫೌಂಟೇನ್ ಪೆನ್ ಸೇರಿದಂತೆ ಹರಿತವಾದ ಹಾಗೂ ನಿಷೇಧಿತ ವಸ್ತುಗಳನ್ನು ತರುವುದು ನಿಷೇಧಿಸಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೊಬೈಲನ್ನು ತರಕೂಡದು ಎಂದು ಅವರು ಹೇಳಿದ್ದಾರೆ.
ಎರಡು ಹಂತದ ತಪಾಸಣೆ:- ಪ್ರತಿ ಮತ ಎಣಿಕೆ ಕೇಂದ್ರದ ಹೊರ ಗೇಟ್ ಹಾಗೂ ಎಣಿಕೆ ಹಾಲ್ ಪ್ರವೇಶದ ಮುಂಭಾಗದಲ್ಲಿ ಭದ್ರತಾ ಸಿಬ್ಬಂದಿಯಿಂದ ಪ್ರತ್ಯೇಕವಾಗಿ ತಪಾಸಣೆ ಮಾಡಲಾಗುತ್ತದೆ. ಇದಕ್ಕಾಗಿ ಮೆಟಲ್ ಡಿಟಕ್ಟರ್ ಸಹ ಅಳವಡಿಸಲಾಗಿದೆ.
ರಸ್ತೆ ಮಾರ್ಗದಲ್ಲಿ ಬದಲಾವಣೆ:- ಮತ ಎಣಿಕೆ ದಿನದಂದು ಸುರಕ್ಷತಾ ದೃಷ್ಠಿಯಿಂದ ಸೇಡಂನಿಂದ ಕಲಬುರಗಿ ನಗರಕ್ಕೆ ಆಗಮಿಸುವ ವಾಹನಗಳು ಬುದ್ಧ ವಿಹಾರ ಬಳಿ ಎಡಕ್ಕೆ ತಿರುವು ಪಡೆದು, ವಿಶ್ವವಿದ್ಯಾಲಯದ ಹಿಂಭಾಗದ ಕುಸನೂರ ರಸ್ತೆ ಮೂಲಕ ಕಲಬುರಗಿ ನಗರಕ್ಕೆ ಒಳಬರಬಹುದು ಎಂದು ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಮಹಾನಗರ ಪಾಲಿಕೆಯ ಆಯುಕ್ತೆ ಫೌಜಿಯಾ ಬಿ. ತರನ್ನುಮ, ಸಿ.ಐ.ಎಸ್.ಎಫ್. ಕಂಪನಿ ಕಮಾಂಡರ್ ಅಶ್ವನ ಕುಮಾರ, ಉಪ ಸಹಾಯಕ ಕಮಾಂಡರ್ ಟಿ.ಡಿ.ವಿನ್ಸೆಂಟ್, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್.ಎಸ್.ಜಿ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಶೋಕ ದುಡಗುಂಟಿ ಸೇರಿದಂತೆ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು, ಇನ್ನಿತರ ಜಿಲ್ಲಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…