ಅವ್ವ ಹಾಲು ಕರೆದು ಒಂದೊಂದು ಚರಗಿಯಲ್ಲಿ ಹಾಕಿ ಕೊಡುತ್ತಿದ್ದಳು. ಅದನ್ನು ನಾನು ಮನೆ ಮನೆಗೆ ಹೋಗಿ ಹಾಕಿ ಬರುತ್ತಿದ್ದೆ.
ತಿಂಗಳ ನಂತರ ಅವರು ಹಾಲಿನ ದುಡ್ಡು ಕೊಡುತ್ತಿದ್ದರು ಕೆಲವರು ವಾರಕ್ಕೆ ಒಮ್ಮೆ ಕೊಡುತ್ತಿದ್ದರು. ಅವ್ವಾ ಮೇವಿಗೆ ಹೋದಾಗ ನಾನು ನಮ್ಮ ಐದು ಆರು ಗೆಳೆಯರು ನಮ್ಮ ಮನೆಗೆ ಊಟಕ್ಕೆ ಬರುವರು. ಮೊಸರು, ಮಜ್ಜಿಗೆ, ನೆಲವಿನ ಮೇಲಿನ ಕೆನೆ ಜೊತೆಗೆ ಕಟಿ ರೊಟ್ಟಿ ಶೇಂಗಿನಕಾರ ಹುಣಿಚಿಕಾರ ಹಾಕಿಕೊಂಡು ಊಟಮಾಡಿ ಆಟ ಆಡಲು ಹೋಗುತ್ತಿದೆವು. ಮರುದಿನ ಅವ್ವಾ ನೆಲವಿನ ಮೇಲಿನ ಕೆನಿ ಯಾರಾದರು ಉಂಡಿರೆನು? ಅಂತ ಕೇಳಿದರೆ ಇಲ್ಲಾ, ಬೆಕ್ಕು ಬಂದಿರಬೇಕು ಅಂತಹ ಸಬುಬು ಹೇಳುತ್ತಿದ್ದೆ. ಹೀಗೆ ದಿನ ನಿತ್ಯದ ನಮ್ಮ ಕಿತಾಪತಿ.
ಅವ್ವಾ ಮುಂಜಾನೆ ಮಜ್ಜಿಗೆ ಮಾಡಿ ಬೆಣ್ಣೆ ತಗೆದು ನೆಲವಿನ ಮೇಲೆ ಇಡುತ್ತಿದ್ದಳು. ವಾರಕ್ಕೆ ಒಮ್ಮೆ ತುಪ್ಪಾ ಕಾಯಿಸುತ್ತಿದ್ದಳು. ಕಾಯಿಸುವಾಗ ಅದರ ಪರಿಮಳ ಎಷ್ಟು ಸೊಗಸಾಗಿ ಇರುತ್ತಿತ್ತೆಂದರೆ ಅದನ್ನು ಹೇಳತಿರದು. ಇವುಗಳ ಮಧ್ಯೆ ಹಬ್ಬ ಹರಿದಿನಗಳಲ್ಲಿ ಮದುವೆ ಸೀಜನ್ ಗಳಲ್ಲಿ ಮಣ್ಣಿನ ಒಲೆಗಳು ಕೊಂಡು ಕೊಳ್ಳಲು ಜನರು ಬರುತ್ತಿದ್ದರು. ಖರೀದಿ ಮಾಡಿದ ಒಲೆಗಳನ್ನು ಬಸ್ ನಿಲ್ದಾಣಕ್ಕೆ ಹೊತ್ತುಕೊಂಡು ಹೋದರೆ ಒಂದು ಒಲೆಗೆ ನಮಗೆ ಐದು ರೂಪಾಯಿಕೊಡುತ್ತಿದರು.
ಇದರ ಮಧ್ಯೆ ಮಣ್ಣೆತ್ತಿನ ಅಮವಾಸ್ಯೆ ಬಂತೆಂದರೆ ಅವ್ವ ಮಣ್ಣೆತ್ತು ಮಾಡುತ್ತಿದ್ದಳು. ಅವುಗಳನ್ನು ನಾವು ಪುಟ್ಟಿಯಲ್ಲಿ ಹೊತ್ತುಕೊಂಡು ಓಣಿ ,ಓಣಿ ತಿರುಗಾಡಿ ಮಾರಾಟ ಮಾಡುತ್ತಿದ್ದೇವು. ಒಂದು ಜೋಡಿ ಎತ್ತುಗಳಿಗೆ 10 ರೂಪಾಯಿಂದ 15 ರೂ. ವರೆಗೆ ಮಾರಾಟ ಮಾಡುತ್ತಿದ್ದೇವು.
ಹೀಗೆ ಮಾರಾಟ ಮಾಡಿಕೊಂಡು ಬಂದ ಹಣದಲ್ಲಿ ನಮ್ಮಗೆ 5- 10 ರೂಪಾಯಿ ಅವ್ವಾ ಕೊಡುತ್ತಿದ್ದಳು. ಇನ್ನು ಶಿವರಾತ್ರಿ, ದೀಪಾವಳಿ ಬಂದರಂತೂ ಹಣತೆ (ಪಣತಿ) ಮಾರಲು ಮಚಿಗಾರಗಡ್ಡಿ ಮತ್ತು ಹನುಮಾನ್ ದೇವಾಲಯ ಹತ್ತಿರ ಕುಂತು ಪಣತಿ ಮಾರಾಟ ಮಾಡುತ್ತಿದ್ದೇವು. ಎರಡು ರೂಪಾಯಿ ಜೋಡಿ, ಐದು ರೂಪಾಯಿ ಜೋಡಿ ಮಾರುತ್ತಿದೆವು ಇವುಗಳಿಂದ ಬಂದ ಹಣವನ್ನು ಅವ್ವಾ ಮಣ್ಣಿ ಗಲ್ಲಾ ಪೆಟ್ಟಿಗೆಯಲ್ಲಿ ಕೂಡಿ ಇಡುತ್ತಿದ್ದಳು.
ಅಣ್ಣಾ BHMS ಧಾರವಾಡ ದಲ್ಲಿ ಓದುತ್ತಿದ್ದ.
ಸಹೋದರ ವಿಶ್ವಾರಾಧ್ಯ ಸತ್ಯಂಪೇಟೆ ಅಗ್ನಿ ಅಂಕುರ ಪತ್ರಿಕೆ ಕೆಲಸದ ನಿಮ್ಮಿತ್ಯ ಹುಬ್ಬಳ್ಳಿಗೆ ಹೋಗುತ್ತಿದ್ದರು. ಆಗ ಅವ್ವಾ ಅಣ್ಣನಿಗೆ ವಿಶ್ವಾರಾಧ್ಯ ರೊಂದಿಗೆ ಹಣ, ದಪಾಟಿ ಮಾಡುವ ಹಿಟ್ಟು ಕಳಿಸಿಕೊಡುತ್ತಿದ್ದಳು. ಸದಾ ಕಾಯಕದಲ್ಲಿ ಇರುವ ನಮ್ಮ ಅವ್ವ ಕೌದು ಒಲೆಯುವುದು, ಶೇಂಗಾ ಒಡೆಯುವುದು .ತೊಗರಿ ಬೆಳೆ ಒಡೆಯುವುದು ಹೀಗೆ ಏನಾದರೊಂದು ಕೆಲಸದಲ್ಲಿ ನಿರತಳಾಗಿರುತ್ತಿದ್ದಳು…
-ಸಾಯಿಕುಮಾರ ಇಜೇರಿ, ಶಹಾಪುರ
(ಮುಂದುವರಿಯುವುದು)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…