ಸುರಪುರ: ಕಳೆದ ಎರಡು ಮೂರು ವರ್ಷಗಳಿಂದ ನಾಡಿನಲ್ಲಿ ನಿರಂತರವಾಗಿ ಬರಗಾಲ ಆವರಿಸುತ್ತಿದ್ದು ಈ ವರ್ಷ ಉತ್ತಮವಾಗಿ ಮಳೆ ಹಾಗು ಬೆಳೆ ಬಂದು ನಾಡಿನ ಜನರು ಸಂತೋಷದಿಂದ ಬದುಕುವಂತಾಗಲಿ ಹಾಗು ಜಗತ್ತಿಗೆ ಪಿಡುಗಾಗಿ ಬಾಧಿಸುತ್ತಿರುವ ಕೊರೊನಾ ವೈರಸ್ ನಿರ್ಮೂಲನೆಯಾಗಲಿ ಎಂದು ತಾಲೂಕಿನ ಜಾಲಿಬೆಂಚಿ ಗ್ರಾಮದ ಜನರು ಗ್ರಾಮದ ಬೆಟ್ಟದಲ್ಲಿರುವ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ಪರುವು ಮಾಡಿ ಹರಕೆ ಸಲ್ಲಿಸಿದರು.
ಬೆಳಿಗ್ಗೆ ೮ ಗಂಟೆ ಸುಮಾರಿಗೆ ಗ್ರಾಮದ ಎಲ್ಲಾ ಜನರು ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಅಡುಗೆ ತಯ್ಯಾರಿಸಿಕೊಂಡು ಭಾಜಾ ಬಜಂತ್ರಿಯೊಂದಿಗೆ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಇಡೀ ದಿನ ಭಜನೆ ಮಾಡುತ್ತಾ ದೇವರನ್ನು ಧ್ಯಾನಿಸಿದರು.
ಈ ಸಂದರ್ಭದಲ್ಲಿ ಅರ್ಚಕ ಅಮರಯ್ಯಸ್ವಾಮಿ ಮಾತನಾಡಿ,ದಂಡಗುಂಡ ಬಸವೇಶ್ವರನಿಗೆ ಪರುವು ಮಾಡುವ ಸಂಪ್ರದಾಯ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು,ನಾಡಿನಲ್ಲಿ ಸರಿಯಾಗಿ ಮಳೆಯಾಗದ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಬಂದು ಪರುವು ಮಾಡುವುದರಿಂದ ಸಂಜೆ ಮರಳಿ ಮನೆಗೆ ಹೋಗುವಾಗ ಮಳೆ ಬಂದಿರುವ ಉದಾಹರಣೆ ಅನೇಕ ಬಾರಿ ನಡೆದಿದೆ.ಅದರಂತೆ ಈ ವರ್ಷವು ಬಂದಿದ್ದು ನಾಡಿಗೆ ಉತ್ತಮ ಮಳೆ ಬೆಳೆ ದೊರೆಯಲಿ ಹಾಗು ಜಗತ್ತಿಗೆ ಮಹಾ ಮಾರಿಯಾಗಿರುವ ಕೊರೊನಾ ನಿರ್ಮೂಲನೆಯಾಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ,ರಾಜಾ ವೆಂಕಟಪ್ಪ ನಾಯಕ ಜಹಾಗಿರದಾರ,ಭೀಮಣ್ಣ ನಾಗನಟಿಗಿ,ಭೀಮಣ್ಣ ಬಿರಾದಾರ್,ರಾಜಾ ನರಸಿಂಹ ನಾಯಕ ಜಹಾಗಿರದಾರ್,ಬಸವರಾಜ ಅಚ್ಚರಡ್ಡಿ,ಶರಣಪ್ಪ ಅಚ್ಚರಡ್ಡಿ,ಅಂಬ್ರೇಶ ಸಾಹುಕಾರ,ಗಂಗಾಧರ ಬಡಿಗೇರ,ಮಾನಪ್ಪ ಚಲುವಾದಿ ಸೇರಿದಂತೆ ಅನೇಕ ಜನರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…