ಬಿಸಿ ಬಿಸಿ ಸುದ್ದಿ

ಈದ್ಗಾಗಳಲ್ಲಿ ಬಕ್ರೀದ್ ನಮಾಜ್ ನಿಷೇಧ: ಸಿಪಿಐ

ವಾಡಿ: ಕೋರೊನಾ ವೈರಸ್ ತಡೆಗಟ್ಟು ಉದ್ದೇಶದಿಂದ ಈ ಬಾರಿ ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ಆಚರಣೆ ವೇಳೆ ಈದ್ಗಾ ಮೈದಾನಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದ್ದು, ಮುಸ್ಲಿಂ ಬಂಧುಗಳು ಸಹಕರಿಸಬೇಕು ಎಂದು ಸಿಪಿಐ ಕೃಷ್ಣಪ್ಪ ಕಲ್ಲದೇವರು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.

ಬಕ್ರೀದ್ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಬಲಿ ನೀಡುವುದು ಬಕ್ರೀದ್ ಹಬ್ಬದ ಸಾಂಪ್ರದಾಯಿಕ ಆಚರಣೆಯಾಗಿದ್ದರಿಂದ ಕುರಿ ಮತ್ತು ಕೋಳಿಗಳನ್ನು ಬಲಿ ಕೊಡಲು ಅಭ್ಯಂತರವಿಲ್ಲ. ಆದರೆ ಹಸು, ಎತ್ತು, ಎಮ್ಮೆ ಹಾಗೂ ಒಂಟೆಗಳನ್ನು ಹಬ್ಬದ ಹೆಸರಿನಲ್ಲಿ ಬಲಿ ಕೊಡುವಂತಿಲ್ಲ. ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮೇಲೆ ನಿಗಾವಹಿಸಲು ಎಲ್ಲೆಡೆ ಚಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕೃಷಿಗೆ ಸಂಬಂದಿಸಿದ ಜಾನುವಾರು ಸಾಗಾಣಿಕೆದಾರರು ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ಪತ್ರ ಪಡೆದಿರಬೇಕು. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಹರಡದಂತೆ ತಡೆಯಲು ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ನಮಾಜ್ ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದಯಕೊಂಡು ನಿರ್ಧಿಷ್ಟ ಸಂಖ್ಯೆಯಲ್ಲಿ ಪಾಲ್ಗೊಂಡು ಪರಸ್ಪರ ಆರು ಅಡಿ ಅಂತರವಿಟ್ಟು ನಮಾಜ್ ಮಾಡಬಹುದು.

ಹೊರಗಿನಿಂದ ಬಂದವರು ಮಸೀದಿಯೊಳಗಿನ ಧರ್ಮ ಗ್ರಂಥಗಳನ್ನು ಯಾವೂದೇ ಕಾರಣಕ್ಕೂ ಮುಟ್ಟಬಾರದು. ೬೦ ವಯೋಮಾನದ ವೃದ್ಧರು ಮತ್ತು ೧೦ ವರ್ಷದೊಳಗಿನ ಮಕ್ಕಳು ನಮಾಜ್ ಮಾಡಲು ಮಸೀದಿಗೆ ಬರುವಂತಿಲ್ಲ. ಖಾಸಗಿ ಸ್ಥಳಗಳಲ್ಲೂ ನಮಾಜ್ ನಡೆಸುವಂತಿಲ್ಲ. ಪರಸ್ಪರ ಹಸ್ತಲಾಘವ ಮತ್ತು ಅಲಿಂಗನ ಮಾಡಕೂಡದು. ನಮಾಜ್ ಪೂರ್ವ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಚವಾಗಿ ಕೈತೊಳೆದುಕೊಳ್ಳುವ ಮೂಲಕ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ ಕೋಮು ಸೌಹಾರ್ಧತೆಯಿಂದ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.

ಪಿಎಸ್‌ಐ ವಿಜಯಕುಮಾರ ಭಾವಗಿ ಮಾತನಾಡಿ, ಪರವಾನಿಗೆ ಹೊಂದಿದ ಗೋವುಗಳ ಸಾಗಾಣಿಕೆಯನ್ನು ಯಾರಾದರೂ ತಡೆದರೆ ತಕ್ಷಣಕ್ಕೆ ಉದ್ರಿಕ್ತಗೊಂಡು ಕಾನೂನು ಕೈಗೆತ್ತಿಕೊಳ್ಳಬೇಡಿ. ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು. ನಾವು ದಾಖಲೆಗಳನ್ನು ಪರಿಸೀಲಿಸುತ್ತೇವೆ. ಗೋವು ಸಾಗಾಣಿಕೆ ಅಧಿಕೃತವಾಗಿದ್ದರೆ ಬಿಡುಗಡೆಗೊಳಿಸುತ್ತೇವೆ. ಗೋವುಗಳ ಸಾಗಾಣಿಕೆ ಹೆಸರಲ್ಲಿ ಯಾರಾದರೂ ಸಮಾಜದಲ್ಲಿ ಅಶಾಂತ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಗುವುದು. ಕಾನೂನು ಪಾಲಿಸಿದರೆ ಮಾತ್ರ ನಾವು ನೀವು ಸ್ನೇಹಿತರು. ಕಾನೂನು ಕೈಗೆತ್ತಿಕೊಂಡರೆ ನಾವು ಪೊಲೀಸರು, ನೀವು ಅಪರಾಧಿಗಳಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಮುಸ್ಲಿಂ ಸಮಾಜದ ಮುಖಂಡರಾದ ಫೆರೋಜ್ ಖಾನ್, ಬಾಬುಮಿಯ್ಯಾ, ಶಿಕ್ಷಕ ಶೇಖ ಅನ್ವರ್, ಭಾಯ್ ಭಾಯ್ ಗ್ರೂಪ್ ಮುಖಂಡ ಶಮಶೀರ್ ಅಹ್ಮದ್ ಮಾತನಾಡಿದರು. ಪುರಸಭೆ ಸದಸ್ಯ ಮಹ್ಮದ್ ಗೌಸ್, ಯುವ ಮುಖಂಡರಾದ ದಾವೂದ್ ಪಟೇಲ, ಮಹ್ಮದ್ ಅಶ್ರಫ್, ಭಶೀರ್ ಖುರೇಶಿ, ರಾಜಾ ಪಟೇಲ, ಚಾಂದ್‌ಮಿಯ್ಯಾ, ನಾಸೀರ್ ಹುಸೇನ ಪಾಲ್ಗೊಂಡಿದ್ದರು. ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ ವಂದಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

4 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

4 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

4 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

4 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

4 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

4 hours ago