ಬಿಸಿ ಬಿಸಿ ಸುದ್ದಿ

ಪತ್ರಕರ್ತ ಶರಣ ಸಾಹಿತಿ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ  ಕೇಸ್ ವಾಪಸ್ ಪಡೆಯಲು ಆಗ್ರಹ

ಶಹಾಪುರ: ಶರಣ ಚಿಂತಕ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆಯವರ ವಿರುದ್ಧ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ಕರಾದವಿಒ ಶಹಾಪುರ ತಾಲ್ಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ನಮ್ಮ ನಾಡಿನ ಚಿಂತಕ ಶರಣ ಸಾಹಿತ್ಯ ಪತ್ರಕರ್ತ ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೇಲೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ೧೨೦/೨೦೨೦ ಐ.ಪಿ.ಸಿ. ಕಲಂ ನ  ಹಾಗೂ ೫೦೫ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಇದು ನಿಜಕ್ಕೂ ದುರುದ್ದೇಶ ಪೂರಿತವಾದ ಕೇಸ್ ಆಗಿರುತ್ತದೆ.

ಪ್ರಸ್ತುತ ವಿಶ್ವಾರಾಧ್ಯ ಸತ್ಯಂಪೇಟೆ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯಾಗಿದ್ದು, ನಾಡಿನಾದ್ಯಂತ ಬಸವ ತತ್ವವನ್ನು ಪ್ರಸಾರ ಮಾಡುವವರಾಗಿದ್ದಾರೆ. ಅಲ್ಲದೆ ನಾಡಿನಲ್ಲಿ ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜನ ಸಾಮಾನ್ಯರನ್ನು ಮೌಡ್ಯ ಮುಕ್ತ ಸಮಾಜದ ಕಡೆಗೆ ಕರೆದುಕೊಂಡು ಹೋಗುವ ಸದುದ್ದೇಶ ಹೊಂದಿದ್ದಾರೆ. ಸಮ ಸಮಾಜದ ಕನಸುಗಳನ್ನು ಕಂಡ ಮಹಾತ್ಮ ಬುದ್ಧ ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ಜನ ಮಾನಸದಲ್ಲಿ ಬಿತ್ತಬೇಕು ಎಂಬ ಅಭಿಕ್ಷೆ ಉಳ್ಳವರಾಗಿದ್ದಾರೆ.

ಹೀಗಾಗಿ ಅವರು ಈಗಾಗಲೇ ಸಾಕಷ್ಟು ಪತ್ರಿಕೆಗಳ ಮೂಲಕ ಸಹಸ್ರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಈಗಲೂ ಬಸವಮಾರ್ಗ.ಕಾಮ್ ಎಂಬ ವೆಬ್ ಮೂಲಕ ಸುಮಾರು ಆರು ಲಕ್ಷ ಜನ ಓದುಗರನ್ನು ಹೊಂದಿದ್ದಾರೆ.

ಇದೆಲ್ಲ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶ್ರೀ. ವಿಶ್ವೇಶ್ವರಯ್ಯ ಶಿವಚಾರ್ಯ ಸ್ವಾಮಿಯ ಮೇಲೆ ಬರೆದ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ದೊಡ್ಡದಾಗಿ ಮಾಡಿಕೊಂಡು ವಿಶ್ವಾರಾಧ್ಯನನ್ನು ಹಣಿಯುವ ತಂತ್ರ ಅನುಸರಿಸುತ್ತಾರೆ. ಇದು ನಿಜಕ್ಕೂ ಗಂಭೀರವಾದ ಪ್ರಮಾದವಾಗಿದೆ. ಆರೋಗ್ಯಕರ ಸಮಾಜಕ್ಕೆ ಸಕಾರಾತ್ಮಕ ಟೀಕೆ ಟಿಪ್ಪಣಿಗಳು ಅವಶ್ಯ. ಅವೇ ಬೇಡವೆಂದರೆ ಪ್ರಜಾಪ್ರಭುತ್ವದ ನಾಶವೆಂದರ್ಥ.

ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೇಲೆ ಅನಾವಶ್ಯಕ ಕಿರುಕುಳ ಆರಂಭಿಸಿದರೆ ನಾಡಿನಾದ್ಯಂತ ಉಗ್ರ ಹೋರಾಟಕ್ಕೆ ನಮ್ಮ ಸಂಘಟನೆ ಮುಂದಡಿ ಇಡಬೇಕಾಗುತ್ತದೆ ಎಂದು ಈ ಮೂಲ ವಿನಮ್ರವಾಗಿ ತಿಳಿಸಲು ಬಯಸುತ್ತದೆ. ಈಗಾಗಲೇ ದಾಖಲಾದ ಕೇಸ್ ವಾಪಸ್ ಪಡೆಯುವ ಮೂಲ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಸರಕಾರ ಎತ್ತಿ ಹಿಡಿಯಬೇಕೆಂದು ಬಯಸುತ್ತದೆ.

ಈ ಸಂದರ್ಭದಲ್ಲಿ ಕರಾದಸಸ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಶಿವಕುಮಾರ ತಳವಾರ, ಬಾಲರಾಜ, ಮಲ್ಲಪ್ಪ ಪೂಜಾರಿ ಕುರಕುಂದಾ ಶರಣಪ್ಪ ಕೋಟಿ , ಮಲ್ಲಿಕಾರ್ಜುನ ಹೊಸ್ಮನಿ ಜಿ.ಸಂಚಾಲಕ, ಲಕ್ಷ್ಮಮಣ, ಸಂತೋಷ ಗುಂಡಹಳ್ಳಿ ಬಸಪ್ಪ ಕುರಕುಂದಿ ಸೇರಿದಂತೆ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago