ಶಹಾಪುರ: ಶರಣ ಚಿಂತಕ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆಯವರ ವಿರುದ್ಧ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ಕರಾದವಿಒ ಶಹಾಪುರ ತಾಲ್ಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ನಮ್ಮ ನಾಡಿನ ಚಿಂತಕ ಶರಣ ಸಾಹಿತ್ಯ ಪತ್ರಕರ್ತ ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೇಲೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ೧೨೦/೨೦೨೦ ಐ.ಪಿ.ಸಿ. ಕಲಂ ನ ಹಾಗೂ ೫೦೫ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಇದು ನಿಜಕ್ಕೂ ದುರುದ್ದೇಶ ಪೂರಿತವಾದ ಕೇಸ್ ಆಗಿರುತ್ತದೆ.
ಪ್ರಸ್ತುತ ವಿಶ್ವಾರಾಧ್ಯ ಸತ್ಯಂಪೇಟೆ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯಾಗಿದ್ದು, ನಾಡಿನಾದ್ಯಂತ ಬಸವ ತತ್ವವನ್ನು ಪ್ರಸಾರ ಮಾಡುವವರಾಗಿದ್ದಾರೆ. ಅಲ್ಲದೆ ನಾಡಿನಲ್ಲಿ ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜನ ಸಾಮಾನ್ಯರನ್ನು ಮೌಡ್ಯ ಮುಕ್ತ ಸಮಾಜದ ಕಡೆಗೆ ಕರೆದುಕೊಂಡು ಹೋಗುವ ಸದುದ್ದೇಶ ಹೊಂದಿದ್ದಾರೆ. ಸಮ ಸಮಾಜದ ಕನಸುಗಳನ್ನು ಕಂಡ ಮಹಾತ್ಮ ಬುದ್ಧ ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ಜನ ಮಾನಸದಲ್ಲಿ ಬಿತ್ತಬೇಕು ಎಂಬ ಅಭಿಕ್ಷೆ ಉಳ್ಳವರಾಗಿದ್ದಾರೆ.
ಹೀಗಾಗಿ ಅವರು ಈಗಾಗಲೇ ಸಾಕಷ್ಟು ಪತ್ರಿಕೆಗಳ ಮೂಲಕ ಸಹಸ್ರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಈಗಲೂ ಬಸವಮಾರ್ಗ.ಕಾಮ್ ಎಂಬ ವೆಬ್ ಮೂಲಕ ಸುಮಾರು ಆರು ಲಕ್ಷ ಜನ ಓದುಗರನ್ನು ಹೊಂದಿದ್ದಾರೆ.
ಇದೆಲ್ಲ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶ್ರೀ. ವಿಶ್ವೇಶ್ವರಯ್ಯ ಶಿವಚಾರ್ಯ ಸ್ವಾಮಿಯ ಮೇಲೆ ಬರೆದ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ದೊಡ್ಡದಾಗಿ ಮಾಡಿಕೊಂಡು ವಿಶ್ವಾರಾಧ್ಯನನ್ನು ಹಣಿಯುವ ತಂತ್ರ ಅನುಸರಿಸುತ್ತಾರೆ. ಇದು ನಿಜಕ್ಕೂ ಗಂಭೀರವಾದ ಪ್ರಮಾದವಾಗಿದೆ. ಆರೋಗ್ಯಕರ ಸಮಾಜಕ್ಕೆ ಸಕಾರಾತ್ಮಕ ಟೀಕೆ ಟಿಪ್ಪಣಿಗಳು ಅವಶ್ಯ. ಅವೇ ಬೇಡವೆಂದರೆ ಪ್ರಜಾಪ್ರಭುತ್ವದ ನಾಶವೆಂದರ್ಥ.
ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೇಲೆ ಅನಾವಶ್ಯಕ ಕಿರುಕುಳ ಆರಂಭಿಸಿದರೆ ನಾಡಿನಾದ್ಯಂತ ಉಗ್ರ ಹೋರಾಟಕ್ಕೆ ನಮ್ಮ ಸಂಘಟನೆ ಮುಂದಡಿ ಇಡಬೇಕಾಗುತ್ತದೆ ಎಂದು ಈ ಮೂಲ ವಿನಮ್ರವಾಗಿ ತಿಳಿಸಲು ಬಯಸುತ್ತದೆ. ಈಗಾಗಲೇ ದಾಖಲಾದ ಕೇಸ್ ವಾಪಸ್ ಪಡೆಯುವ ಮೂಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರಕಾರ ಎತ್ತಿ ಹಿಡಿಯಬೇಕೆಂದು ಬಯಸುತ್ತದೆ.
ಈ ಸಂದರ್ಭದಲ್ಲಿ ಕರಾದಸಸ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಶಿವಕುಮಾರ ತಳವಾರ, ಬಾಲರಾಜ, ಮಲ್ಲಪ್ಪ ಪೂಜಾರಿ ಕುರಕುಂದಾ ಶರಣಪ್ಪ ಕೋಟಿ , ಮಲ್ಲಿಕಾರ್ಜುನ ಹೊಸ್ಮನಿ ಜಿ.ಸಂಚಾಲಕ, ಲಕ್ಷ್ಮಮಣ, ಸಂತೋಷ ಗುಂಡಹಳ್ಳಿ ಬಸಪ್ಪ ಕುರಕುಂದಿ ಸೇರಿದಂತೆ ಇತರರು ಇದ್ದರು.