ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಗೆ ಕಠಿಣ ಶಿಕ್ಷೆಗೆ ಆಗ್ರಹ

0
43

ಕಲಬುರಗಿ: ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮತ್ತು ಪೋಸ್ಟ್ ಹಾಕುವ ಮೂಲಕ ಸಮಾಜದಲ್ಲಿ ಕೋಮುಸೌಹರ್ದತೆಗೆ ಧಕ್ಕೆತರಲು ಯತ್ನಿಸಿದ ವ್ಯಕ್ತಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಎಂದು ನಯಾ ಸವೇರಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿದ್ದಾರೆ.

ಭಾರತೀಯ ಸಂಪ್ರದಾಯ ಸಂಸ್ಕೃತಿ ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರೂ ಒಂದೇ. ಕೆಲವು ಕಿಡಿಗೇಡಿಗಳು ಈ ರೀತಿ ಪೋಸ್ಟ್ ಹಾಕಿ ಸಂಸ್ಕೃತಿಯನ್ನು ಕೆಡಿಸುತ್ತಿದ್ದಾರೆ. ಕಿಡಿಗೇಡಿಗಳು ವಾತಾವರಣ ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯಲು ಅವಕಾಶ ನೀಡಬಾರದೆಂದು ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಘಟನೆಯಲ್ಲಿ ಮೂರು ಅಮಾಯಕರು ಮೃತಪಟ್ಟಿದ್ದು, ಸರಕಾರದ ವತಿಯಿಂದ ಪರಿಹಾರ ಘೋಷಿಸಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಲೀಮ್ ಅಹಮದ್ ಚಿತಾಪುರ್, ಶೇಕ್ ಯುನುಸ್ ಅಲಿ, ಸೈಯದ್ ಏಜಾಜ್ ಅಲಿ ಇನಾಮ್ದಾರ್, ಸಾಜಿದ್ ಅಲಿ ರಂಜೋಳವಿ, ಶೇಕ್ ಸಿರಾಜ್ ಪಾಷಾ, ಹೈದರ್ ಅಲಿ ಇನಾಮ್ದಾರ್, ಕಾಲಿಕ್ ಅಹಮದ್, ಶೇಕ್ ಜಿಲಾನ್ ಪಷಾ, ಸೈರಾ ಬಾನು,  ಗೀತಾ ಮುದ್ಗಲ್, ರಾಬಿಯಾ ಶಿಕಾರಿ, ರಾಫಿಯ ಸೀರಿನ್,  ಸಾದಿಕ್ ಪಟೇಲ್,  ಫಯಾಜ್ ಪಟೇಲ್,  ಮಕ್ಬುಲ್ ಅಹ್ಮದ್ ಸಗರಿ, ಉಸ್ಮಾನ್ ಪಟೇಲ್, ಅಬ್ದುಲ್ ಜಾವಿದ್,  ಸಿಂದಗಿ ಮಹಿಬೂಬ್ ಖಾನ್,  ಬಾಬಾ ಫಕ್ರುದ್ದಿನ್ ಅನ್ಸಾರಿ,  ಡಾಕ್ಟರ್ ರಫೀಕ್ ಕಮಲಪುರಿ, ಮೋಬಿನ್ ಅನ್ಸಾರಿ,  ಯುನುಸ್ ಪಟೇಲ್ ಹಡಗಿಲ, ಮೈಬು ಪಟೇಲ್, ಮೌಲಾನಾ ಅಬ್ದುಲ್ ವಾಹಿದ್ ಸಾಬ್, ಅಕ್ರಮ್ ಖಾನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here