ಬಿಜೆಪಿ ಸರಕಾರ ಕೋವಿಡ್ ಹೆಸರಲ್ಲಿ ಭ್ರಷ್ಟಾಚರ: ನ್ಯಾಯಂಗ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

ಕಲಬುರಗಿ: ಬಿಜೆಪಿ ಸರಕಾರವು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವ, ಕೋವಿಡ್‌-19 ಸೋಂಕು ನಿಯಂತ್ರಣ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರದ ನ್ಯಾಯಂಗ ತನಿಖೆ ಮತ್ತು ರಾಜ್ಯದ ಬಹುಭಾಗವನ್ನು ಬಾದಿಸುತ್ತಿರುವ ಅತೀವೃಷ್ಟಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜನಧ್ವನಿ ಘೋಷ ವಾಕ್ಯದೊಂದಿಗೆ ಧರಣಿ ಸತ್ಯಾಗ್ರಹ ನಡೆಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿದರು.

ಸಮಿತಿಯ ಜಿಲ್ಲಾಧ್ಯಕ್ಷರಾದ ಜಗದೇವ್ ಗುತ್ತೇದಾರ ಮಾತನಾಡಿ, ಕೊರೋನಾ ದಾಳಿಗೆ ಸಿಕ್ಕಿ ರಾಜ್ಯದ ಜನರು ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ ವಿಷಯದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ರಾಜ್ಯದ ಆರೋಗ್ಯ ಸೇವೆ ಕುಸಿದು ಕೊರೋನಾ ಬಾಧಿತ ರೋಗಿಗಳು ಆಸ್ಪತ್ರೆಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.  ಕೋವಿಡ್‌-19 ನಿಯಂತ್ರಿಸಲು ಸರ್ಕಾರ ಖರೀದಿಯಲ್ಲಿ ವ್ಯಾಪಕ ಭ್ರಷ್ಟುಚಾರ ನಡೆದಿದೆ. ಕೇಂದ್ರ ಸರ್ಕಾರ, ತಮಿಳುನಾಡು ಮತ್ತು ತೆಲಂಗಾಣ ಸ್ಟಿರಗಳು ವೆಂಟಿಲೇಟರ್ಸ್‌ಗಳನ್ನು ಒಂದಕ್ಕೆ ತಲಾ ನಾಲ್ಕು ಲಕ್ಷ ರೂ. ದರದಲ್ಲಿ ಕೊಂಡಿದ್ದರೆ, ರಾಜ್ಯ ಸರ್ಕಾರ 5.6 ಲಕ್ಷದಿಂದ್ನ ಓದು 18.8 ಲಕ್ಷ ರೂ. ವರೆಗೆ ದರವನ್ನು ನೀಡಿದೆ, ಪಿ.ಪಿ. ಕಿಟ್‌ಗಳನ್ನು ಕೊಳ್ಳುವಾಗ ಮಾರುಕಟ್ಟೆ ದರ 300ರೂ, ಇದ್ದರೂ, 1444.80 ರಿಂದ 2049.84 ರೂ. ವರೆಗೆ ಅಧಿಕ ದರ ನೀಡಿ ಖರೀದಿಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರ ಅತಿವೃಷ್ಟಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ. ಸತತ ಎರಡು ವರ್ಷ ವಿಫಲವಾಗಿರುವುದ್ದು, ಪರಿಹಾರದ ಪೊತ್ತವೆಷ್ಟು? ಎಷ್ಟು ಜನರಿಗೆ ವಿತರಿಸಲಾಗಿದೆ? ಬಿದ್ದುಹೋದ ಎಷ್ಟು ಮನೆಗಳನ್ನು ಕಟ್ಟಲಾಗಿದೆ? ಎಷ್ಟು ಜನ ಕೃಷಿಕರಿಗೆ ಪರಿಹಾರ ನೀಡಲಾಗಿದೆ, ಮತ್ತಿತರ ಎಲ್ಲಾ ವಿವರಗಳ ಲೆಕ್ಕ ಕೊಡಬೇಕೆಂದು ಕಾಂಗ್ರೆಸ್‌ ಸಮಿತಿ ಒತ್ತಾಯಿಸಿದೆ.

ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಮತ್ತು ಎ.ಪಿ.ಎಂ.ಸಿ, ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ವಾಪಾಸ್ಸು ತೆಗೆದುಕೊಳ್ಳಬೇಕೆಂದು ‘ಕೂರೋನ’ ನಿಯಂತ್ರಣದಲ್ಲಿ ನಡೆಯುವ ವ್ಯಾಹಾಶ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ಸ್ಯಾಯಾಧೀಶರಿಂದ ಸ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗ್ಲೌರು: ಬೆಳೆಗಳಾದ ತೋಗರಿ, ಹೆಸರು, ಉದ್ದು, ಎಳ್ಳು, ಹತ್ತಿ ಇನ್ನೀತರ ಬೆಳೆಗಳು ಹಾನಿಯಾಗಿದ್ದು ಈ ಭಾಗದಳ್ಚೆ ಕೂಡಲೇ ಸರಕಾರ ಸಮಿಕ್ಷೆ ಮಾಡಿ ವರದಿ ತರಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕ್ಕು’ ಅದೇ ರೀತಿ ಅತೀವೃಷ್ಟಿಯಿ೦ದ ಹಾಳಾಗಿ ಉಳಿದ ಹೆಸರು, ಉದ್ದು ಬೆಳೆಗಳಿಗೆ ಸರಕಾರ ಖರೀದಿ ಕೇಂದ್ರಶ್ಕಳನ್ನು ಕೂಡಲೇ ಪ್ರಾರಂಭಿಸಿ ಹೆಸರಿಗೆ ರೂ. 8000ನಿಗದಿಪಡಿಸಿ ಉದ್ದಿಗೆ ರೂ. 7000ನಿಗದಿಪಡ್ಡೆಸಿ ಸರಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಿಲಕಂಠರಾವ ಮೂಲಗೆ, ಅಲ್ಪಸಂಖ್ಯಾತರ ಕಾರ್ಯನಿರ್ವಾಹ ಸದಸ್ಯರಾದ ಸಾಜಿದ್ ಅಲಿ ರಂಜೋಳ್ವಿ, ಸಂತೋಷ ಪಾಟೀಲ ಧಣ್ಣೂರ, ಅಬ್ದುಲ್ ಜಬ್ಬರ್ ಗೋಲಾ, ದಿಲೀಪ ಪಾಟೀಲ, ನ್ಯಾಯವಾದಿ ಶಾಬುದ್ದೀನ್, ಈರಣ್ಣ ಝಲಕಿ ಶಕೀಲ್, ಚೇತನ್ ಗೊನಾಯಕ್, ಸಚೀನ್ ಸಿರ್ವಳ್, ಸಿದ್ದಣ್ಣ ಗೌಡ, ಮೋದಿನ್ ಪಟೇಲ್ ಅಣಬಿ, ಸಹೇರಾ ಬಾನು, ಗೀತಾ ಮುದಗಲ್, ಕಾರ್ತಿಕ್ ನಾಟಿಕರ್ ಸೇರಿದಂತೆ ಹಲವಾರು ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 hour ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420