ಕಲಬುರಗಿ: ಬಿಜೆಪಿ ಸರಕಾರವು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವ, ಕೋವಿಡ್-19 ಸೋಂಕು ನಿಯಂತ್ರಣ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರದ ನ್ಯಾಯಂಗ ತನಿಖೆ ಮತ್ತು ರಾಜ್ಯದ ಬಹುಭಾಗವನ್ನು ಬಾದಿಸುತ್ತಿರುವ ಅತೀವೃಷ್ಟಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜನಧ್ವನಿ ಘೋಷ ವಾಕ್ಯದೊಂದಿಗೆ ಧರಣಿ ಸತ್ಯಾಗ್ರಹ ನಡೆಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿದರು.
ಸಮಿತಿಯ ಜಿಲ್ಲಾಧ್ಯಕ್ಷರಾದ ಜಗದೇವ್ ಗುತ್ತೇದಾರ ಮಾತನಾಡಿ, ಕೊರೋನಾ ದಾಳಿಗೆ ಸಿಕ್ಕಿ ರಾಜ್ಯದ ಜನರು ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ ವಿಷಯದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ರಾಜ್ಯದ ಆರೋಗ್ಯ ಸೇವೆ ಕುಸಿದು ಕೊರೋನಾ ಬಾಧಿತ ರೋಗಿಗಳು ಆಸ್ಪತ್ರೆಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಕೋವಿಡ್-19 ನಿಯಂತ್ರಿಸಲು ಸರ್ಕಾರ ಖರೀದಿಯಲ್ಲಿ ವ್ಯಾಪಕ ಭ್ರಷ್ಟುಚಾರ ನಡೆದಿದೆ. ಕೇಂದ್ರ ಸರ್ಕಾರ, ತಮಿಳುನಾಡು ಮತ್ತು ತೆಲಂಗಾಣ ಸ್ಟಿರಗಳು ವೆಂಟಿಲೇಟರ್ಸ್‌ಗಳನ್ನು ಒಂದಕ್ಕೆ ತಲಾ ನಾಲ್ಕು ಲಕ್ಷ ರೂ. ದರದಲ್ಲಿ ಕೊಂಡಿದ್ದರೆ, ರಾಜ್ಯ ಸರ್ಕಾರ 5.6 ಲಕ್ಷದಿಂದ್ನ ಓದು 18.8 ಲಕ್ಷ ರೂ. ವರೆಗೆ ದರವನ್ನು ನೀಡಿದೆ, ಪಿ.ಪಿ. ಕಿಟ್‌ಗಳನ್ನು ಕೊಳ್ಳುವಾಗ ಮಾರುಕಟ್ಟೆ ದರ 300ರೂ, ಇದ್ದರೂ, 1444.80 ರಿಂದ 2049.84 ರೂ. ವರೆಗೆ ಅಧಿಕ ದರ ನೀಡಿ ಖರೀದಿಸಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ಅತಿವೃಷ್ಟಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ. ಸತತ ಎರಡು ವರ್ಷ ವಿಫಲವಾಗಿರುವುದ್ದು, ಪರಿಹಾರದ ಪೊತ್ತವೆಷ್ಟು? ಎಷ್ಟು ಜನರಿಗೆ ವಿತರಿಸಲಾಗಿದೆ? ಬಿದ್ದುಹೋದ ಎಷ್ಟು ಮನೆಗಳನ್ನು ಕಟ್ಟಲಾಗಿದೆ? ಎಷ್ಟು ಜನ ಕೃಷಿಕರಿಗೆ ಪರಿಹಾರ ನೀಡಲಾಗಿದೆ, ಮತ್ತಿತರ ಎಲ್ಲಾ ವಿವರಗಳ ಲೆಕ್ಕ ಕೊಡಬೇಕೆಂದು ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಮತ್ತು ಎ.ಪಿ.ಎಂ.ಸಿ, ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ವಾಪಾಸ್ಸು ತೆಗೆದುಕೊಳ್ಳಬೇಕೆಂದು ‘ಕೂರೋನ’ ನಿಯಂತ್ರಣದಲ್ಲಿ ನಡೆಯುವ ವ್ಯಾಹಾಶ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ಸ್ಯಾಯಾಧೀಶರಿಂದ ಸ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗ್ಲೌರು: ಬೆಳೆಗಳಾದ ತೋಗರಿ, ಹೆಸರು, ಉದ್ದು, ಎಳ್ಳು, ಹತ್ತಿ ಇನ್ನೀತರ ಬೆಳೆಗಳು ಹಾನಿಯಾಗಿದ್ದು ಈ ಭಾಗದಳ್ಚೆ ಕೂಡಲೇ ಸರಕಾರ ಸಮಿಕ್ಷೆ ಮಾಡಿ ವರದಿ ತರಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕ್ಕು’ ಅದೇ ರೀತಿ ಅತೀವೃಷ್ಟಿಯಿ೦ದ ಹಾಳಾಗಿ ಉಳಿದ ಹೆಸರು, ಉದ್ದು ಬೆಳೆಗಳಿಗೆ ಸರಕಾರ ಖರೀದಿ ಕೇಂದ್ರಶ್ಕಳನ್ನು ಕೂಡಲೇ ಪ್ರಾರಂಭಿಸಿ ಹೆಸರಿಗೆ ರೂ. 8000ನಿಗದಿಪಡಿಸಿ ಉದ್ದಿಗೆ ರೂ. 7000ನಿಗದಿಪಡ್ಡೆಸಿ ಸರಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಿಲಕಂಠರಾವ ಮೂಲಗೆ, ಅಲ್ಪಸಂಖ್ಯಾತರ ಕಾರ್ಯನಿರ್ವಾಹ ಸದಸ್ಯರಾದ ಸಾಜಿದ್ ಅಲಿ ರಂಜೋಳ್ವಿ, ಸಂತೋಷ ಪಾಟೀಲ ಧಣ್ಣೂರ, ಅಬ್ದುಲ್ ಜಬ್ಬರ್ ಗೋಲಾ, ದಿಲೀಪ ಪಾಟೀಲ, ನ್ಯಾಯವಾದಿ ಶಾಬುದ್ದೀನ್, ಈರಣ್ಣ ಝಲಕಿ ಶಕೀಲ್, ಚೇತನ್ ಗೊನಾಯಕ್, ಸಚೀನ್ ಸಿರ್ವಳ್, ಸಿದ್ದಣ್ಣ ಗೌಡ, ಮೋದಿನ್ ಪಟೇಲ್ ಅಣಬಿ, ಸಹೇರಾ ಬಾನು, ಗೀತಾ ಮುದಗಲ್, ಕಾರ್ತಿಕ್ ನಾಟಿಕರ್ ಸೇರಿದಂತೆ ಹಲವಾರು ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.