ಆಳಂದ: ಅಮರ್ಜಾ ನೀರಾವರಿ ಯೋಜನೆಯಿಂದ ಸಾವಿರಾರು ಏಕರೆಗೆ ಬೆಳೆಗಳಿಗೆ ನೀರು ಮತ್ತು ಆಳಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ದೊರೆತಿದೆ ಹೀಗಾಗಿ ಅಮರ್ಜಾ ಆಳಂದ ಕ್ಷೇತ್ರದ ಜೀವನಾಡಿಯಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಶನಿವಾರ ಕೊರಳ್ಳಿ ಸಮೀಪದ ಅಮರ್ಜಾ ಅಣೆಕಟ್ಟಿನಲ್ಲಿ ಅಮರ್ಜಾ ಅಣೆಕಟ್ಟು ತುಂಬಿದ ಪ್ರಯುಕ್ತ ಡ್ಯಾಂಗೆ ಬಾಗಿನ ಅರ್ಪಿಸಿ ಮಾತನಾಡಿದರು. ಅಮರ್ಜಾ ಯೋಜನೆಯ ಆರಂಭಿಕ ವೆಚ್ಚ ಕೇವಲ ೩ ಕೋಟಿಯಿತ್ತು ಆದರೆ ಬರು ಬರುತ್ತಾ ಅದು ೫೦೦ಕ್ಕೂ ಕೋಟಿಗೂ ಮಿಕ್ಕಿ ಖರ್ಚು ಆಗಿ ಈಗ ಜನ ಸೇವೆಗೆ ಲಭ್ಯವಾಗಿದೆ ಎಂದರು.
ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಉತ್ತಮ ಮಳೆಯಾಗಿದೆ ಅದರಿಂದ ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಯಾವತ್ತೂ ಅಮರ್ಜಾ ತುಂಬಿರಲಿಲ್ಲ ಸುದೈವವಶಾತ ಈ ವರ್ಷ ಡ್ಯಾಂ ಭರ್ತಿಯಾಗಿದೆ ಹೀಗಾಗಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ಆದರೂ ಕೂಡ ತಾಲೂಕಿನ ಕೆಲವು ಕಡೆ ಹೆಚ್ಚು ಮಳೆ ಬಂದು ಬೆಳೆ ಹಾನಿಯಾಗಿದೆ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ನುಡಿದರು.
ಅಮರ್ಜಾ ಅಣೆಕಟ್ಟಿನ ನಿರ್ಮಾಣದ ಹಿಂದೆ ಮಾಜಿ ಶಾಸಕರಾದ ಅಣ್ಣಾರಾವ ಪಾಟೀಲ ಕೊರಳ್ಳಿ ಹಾಗೂ ಅಣ್ಣಾರಾವ ವೀರಭದ್ರಪ್ಪ ಪಾಟೀಲ ಶ್ರಮ ಅಡಗಿದೆ ಅದಕ್ಕೆ ನೀರೆರದು ಪೋಷಿಸಿದವರು ಅಂದಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು. ಭೀಮಾದಿಂದ ಅಮರ್ಜಾ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ ಅದು ಈ ಅವಧಿಯಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗುರುಶಾಂತ ಪಾಟೀಲ ನಿಂಬಾಳ, ಹಿರಿಯ ಮುಖಂಡರಾದ ವೀರಣ್ಣ ಮಂಗಾಣೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ತಹಸೀಲ್ದಾರ ದಯಾನಂದ ಪಾಟೀಲ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್‌ಐ ಮಹಾಂತೇಶ ಪಾಟೀಲ, ಕೆಎನ್‌ಎನ್‌ಎಲ್ ನಿಗಮದ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಪಾಟೀಲ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಪುರಸಭೆ ಸದಸ್ಯರಾದ ವೀರಣ್ಣ ಹತ್ತರಕಿ, ಸೋಮು ಹತ್ತರಕಿ, ಸಂತೋಷ ಹೂಗಾರ, ಶ್ರೀಶೈಲ ಪಾಟೀಲ, ಸಿದ್ದು ಪೂಜಾರಿ, ಮೃತ್ಯುಂಜಯ ಆಲೂರೆ, ಸಂದೀಪ ಪಾತ್ರೆ, ಮೀರು ಶೇಖ, ರಮ್ಮು ಅನ್ಸಾರಿ, ಮಹಿಬೂಬ್ ತೇಲಾಕುಣಿ ಸೇರಿದಂತೆ ಇತರರು ಇದ್ದರು.
ಬಾಕ್ಸ್: ಭೀಮಾದಿಂದ ಅಮರ್ಜಾ ತುಂಬಿಸುವಾಗ ಮಧ್ಯದಲ್ಲಿ ಸಿಗುವ ಏಳೆಂಟು ಕೆರೆಗಳನ್ನು ತುಂಬಿಸುವ ಯೋಜನೆ ಚಾಲ್ತಿಯಲ್ಲಿದೆ ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿವೆ- ಸುಭಾಷ್ ಆರ್ ಗುತ್ತೇದಾರ, ಶಾಸಕರು, ಆಳಂದ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…