ಸುರಪುರ: ಜಾನಪದ ಎಂಬುವುದು ಮಾನವಿಯ ಸಂಬಂಧದ ಮೂಲ ಸರಪಳಿ, ನಮ್ಮ ಮೂಲ ಬದುಕಿನ ಪ್ರತಿ ಹಂತದಲ್ಲು ಜಾನಪದ ಬಂದು ಹೊಗುತ್ತದೆ, ಇಂದಿನ ಬದಲಾದ ಸನ್ನಿವೇಶದಲ್ಲಿ ಜಾನಪದ ಸಂಸ್ಕೃತಿ ಆಧುನಿಕರಣದ ಹೊಡೆತಕ್ಕೆ ಮರೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ ಹೇಳಿದರು.
ಸಮೀಪದ ದೇವತ್ಕಲ್ ಗ್ರಾಮದಲ್ಲಿ ವಿನಾಯಕ ಜಾನಪದ ಯುವಕ ಸಂಘ ದೇವಾಪೂರ ಇವರು ಆಯೋಜಿಸಿದ್ದ ವಿಶ್ವ ಜಾನಪದ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಎಂಬುವುದು ಒಂದು ಸಂಸ್ಕೃತಿ ಅದು ನಮ್ಮ ನೈತಿಕತೆ, ವೈಚಾರಿಕೆ, ಪಾರದರ್ಶಕತೆ, ಪ್ರತಿನಿಧಿಸುತ್ತದೆ ಜಾನಪದಕ್ಕೆ ಹಿರಿದಾದ ಶಕ್ತಿ ಇದೆ, ಇದು ಮಾತೃ ಹೃದಯದ ಭಾಷೆ ಇದಕ್ಕೆ ತನ್ನದೆ ಆದ ಸಂಸ್ಕೃತಿ, ಸಂಸ್ಕಾರ ಹಿನ್ನೆಲೆ ಒಳಗೊಂಡಿಗೆ ಎಂದು ಹೇಳಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿ ಮಾತನಾಡಿ,ಜಾನಪದ ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಿದೆ ನಮ್ಮ ಬದುಕಿನ ಸಂಸ್ಕೃತಿಯೆ ಜಾನಪದವಾಗಿದೆ.ಇದಕ್ಕೆ ಹಿಂದೆ ಸಾಹಿತ್ಯವಿಲ್ಲದಿದ್ದರು ನಮ್ಮ ಹಿರಿಯರಿಂದ ಬಂದ ಬಳುವಳಿಯಂತೆ ಇಂದಿಗೂ ಅವು ಒಬ್ಬರ ಬಾಯಿಯಿಂದ ಮತ್ತೊಬ್ಬರಿಗೆ ತಲುಪಿವೆ.ಅಂತಹ ಜಾನಪದವನ್ನು ನಾವೆಲ್ಲರು ಉಳಿಸಿಕೊಂಡು ಹೋಗೊಣ ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ಸ್ಥಳಿಯ ಬಬುಲಾದಿ ಮಠದ ಸಾಯಬಣ್ಣ ಪೂಜಾರಿ ಹಾಗೂ ಲಿಂಗಣ್ಣ ಪೂಜಾರಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತಿ ಸದಸ್ಯ ನರಸಪ್ಪ ವಡವಡಗಿ ಹಾಗೂ ವಿವೇಕಾನಂದ ಶಾಲೆಯ ಮುಖ್ಯಸ್ಥ ನಾಗರಾಜ ಬಾಲವಡಗಿ ಪಾಲ್ಗೊಂಡಿದ್ದರು ಈದೆ ಸಂದರ್ಭದಲ್ಲಿ, ಜಾನಪದ ಕಲಾವಿಧರುಗಳಾದ ಮಹೇಬೂಬಸಾಬ ಬಡಿಗೇರ, ರಾಯಣ್ಣ ಬುರ್ಲಿ, ಬೀರಪ ದೊಡ್ಡಮನಿ, ಗಂಗಪ್ಪ ಕಮತಗಿ, ಬೀರಪ್ಪ ಹಾಲಭಾವಿ ಇವರುಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಹಣಮಂತ್ರಾಯ ಎಂ. ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿರೇಶ ಕುಮಾರ ದೇವತ್ಕಲ್ ಸ್ವಾಗತಿಸಿದರು, ಜೆಟ್ಟೆಪ್ಪ ಭಾವಿಹೊಲ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…