ಮೂಲಭೂತ ಸೌಕರ್ಯಕ್ಕೆ ಒತ್ತಾಯ: ಮನವಿಗೆ ಆಯುಕ್ತರಿಂದ ಸ್ಪಂದನೆ

0
159

ಕಲಬುರಗಿ: ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ್‌ ಬಡಾವಣೆಯ ಮೂಲಭೂತ ಸೌಕರ್ಯ ಹಾಗೂ ಪಾಲಿಯಿಂದ ಸೇವೆ ಒದಗಿಸಲು ಒತ್ತಾಯಿಸಿ ಬಡಾವಣೆಯ ಮುಖಂಡರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬಡಾವಣೆಯಲ್ಲಿ ಕಸ ವಿಲೇವಾರಿ, ಬೀದಿ ದೀಪ ಅಳವಡಿಸುವುದು, ಬಿದ್ದು ಹೋದ ಕಾಂಪೌಂಡ್ ಗೋಡೆ ನಿರ್ಮಿಸುವುದು ಹಾಗೂ ಅಚ್ಚುಕಟ್ಟಾಗಿ ಬಡಾವಣೆಯ ನಿರ್ವಹಣೆಗೆ ಮನವಿಯಲ್ಲಿ ಒತ್ತಾಯಿಸಲಾಯಿತು.

Contact Your\'s Advertisement; 9902492681

ಆಯುಕ್ತರು ಮನವಿಗೆ ಸ್ಪಂದಿಸಿ ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆಸಿ ದಿನ ನಿತ್ಯ ಕಸ ವಿಲೇವಾರಿಗೆ ಸೂಚಿಸಿದರು.

ಕತ್ತಲಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಮೂರು ದಿನಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಈ ವೇಳೆಯಲ್ಲಿ ಬರವಸೆ ನೀಡಿದರು.

ಇತ್ತಿಚೆಗೆ ಬಾರಿ ಮಳೆಯಿಂದ ಕುಸಿದು ಬಿದ್ದ ಬಡಾವಣೆಯ ಕಾಂಪೌಂಡ್ ಗೋಡೆಯನ್ನು ಮುಖ್ಯ ಕಛೇರಿಯ ಅನುಮೋದನೆ ಸಿಕ್ಕ ಬಳಿಕ ಗೋಡೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಬಡಾವಣೆಯ ಮುಖಂಡರಾದ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ನಾಗೇಂದ್ರಪ್ಪ ದಂಡೋತಿಕರ, ಡಿ.ವಿ ಕುಲಕರ್ಣಿ, ರೇವಣಸಿದ್ದಪ್ಪ ರುದ್ರವಾಡಿ, ಹಣಮಂತ್ರಾಯ ಅಟ್ಟುರ, ಚಂದ್ರಕಾಂತ ತಳವಾರ, ರಾಜಶೇಖರ ಜಕ್ಕಾ, ಕೆ.ವಿ ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಬಾಲಕೃಷ್ಣ ಕುಲಕರ್ಣಿ, ಸಿದ್ದಾರೂಡ ಅಷ್ಟಗಾ, ವಿರೇಶ ಬೋಳಶೆಟ್ಟಿ, ಲೋಕಯ್ಯ ಸ್ವಾಮಿ, ಶಂಬುಲಿಂಗ ವಾಡಿ ಹಾಗೂ ಮುಂತಾದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here