ಬಿಸಿ ಬಿಸಿ ಸುದ್ದಿ

ಉತ್ತರ ಪ್ರದೇಶ ಮನೀಷಾಳ ಅತ್ಯಾಚಾರ ಖಂಡಿಸಿ SFI, DYFI ಪ್ರತಿಭಟನೆ

ರಾಯಚೂರು: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪಗಳಿಗೆ ಸೂಕ್ತ ಶಿಕ್ಷೆಗೆ ಆಗ್ರಹಿಸಿ ಕವಿತಾಳ ಗ್ರಾಮದ ನಾಡತಹಶಿಲ್ದಾರ ಸಿಬ್ಬಂದಿ ಸದಾಕಲಿಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ದೇಶದಾದ್ಯಂತ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಕ್ರೌರ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದನ್ನು ನಿಯಂತ್ರ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ.

ದೆಹಲಿ ನಿರ್ಭಯಾ ಪ್ರಕರಣ, ಆಶೀಫಾಳ ಕಥುವಾ ಪ್ರಕರಣ, ಉತ್ತರ ಪ್ರದೇಶದ ಉನ್ನಾವೋ ಮತ್ತು ಹೈದ್ರಾಬಾದಿನ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನೆವೇ ಇಡೀ ನಾಗರಿಕ ಸಮಾಜವೆ ತಲೆ ತಗ್ಗಿಸುವಂತ ಅಮಾನವೀಯ ಮತ್ತು ಕ್ರೂರ ವಾದ ಅತ್ಯಾಚಾರ ಮಾಡಿ ಕೊಲೆ ಪ್ರಕರಣವು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ದಲಿತ ಸಮುದಾಯಕ್ಕೆ ಸೇರಿದ ಮನೀಶಾ ಎಂಬ 19 ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರ ಹಿಂಸೆ ನೀಡಿ ಸಾಕ್ಷಿ ನಾಶಕ್ಕಾಗಿ ನಾಲಿಗೆಯನ್ನು ಕತ್ತರಿಸಿ ಕೊಲೆಗೆ ಯತ್ನವನ್ನು ಮಾಡಿದ್ದಾರೆ.

ವಾರದ ಬಳಿಕ ನಿನ್ನೆ ಮನೀಶಾ ದೆಹಲಿಯ ಆಸ್ಪತ್ರೆ ಯಲ್ಲಿ ಸಾವನ್ನು ಅಪ್ಪಿದ್ದಾರೆ. ಇದು ಅತ್ಯಂತ ದುರಂತ ಮತ್ತು ಖಂಡನೀಯ. ಕೂಡಲೇ ಪ್ರಕರಣವನ್ನು ಕುರಿತಂತೆ ಸಮಗ್ರವಾದ ತನಿಖೆ ಯನ್ನು ನಡೆಸಿ ಆರೋಪಗಳಿಗೆ ಸೂಕ್ತ ಶಿಕ್ಷೆಗೆ ಗುರುತಿಸಬೇಕು. ಹಾಗೂ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು. ರಾಜ್ಯದಲ್ಲಿ ವಿ ಎಸ್ ಉಗ್ರಪ್ಪ ಸಮಿತಿ ಶಿಪಾರಸ್ಸುಗಳನ್ನ ಜಾರಿಗೊಳಿಸಬೇಕು, ಶಾಲಾ ಕಾಲೇಜುಗಳಲ್ಲಿ ಮತ್ತು ದುಡಿಯುವ ಸ್ಥಳದಲ್ಲಿ ಲೈಂಗೀಕ ವಿರೋಧಿ ಸಮಿತಿ ರಚಿಸಬೇಕು,& ಇಡೀ ದೇಶ ವ್ಯಾಪಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ರಕ್ಷಣೆಯನ್ನು ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ SFI ಜಿಲ್ಲಾಕಾರ್ಯದರ್ಶಿ ಲಿಂಗರಾಜ ಕಂದಗಲ್, ವಲಯ ಘಟಕ ಕಾರ್ಯದರ್ಶಿ ವೆಂಕಟೇಶ ವಡ್ಡಟ್ಟಿ, ಉಪಾಧ್ಯಕ್ಷ ನಾಗಮೋಹನ್ ಸಿಂಗ್, ಸಹಕಾರ್ಯದರ್ಶಿ ಕುಪ್ಪಣ್ಣ, ಪ್ರೇಮ್ ಕುಮಾರ ಮಲ್ಲಿಕಾರ್ಜುನ DYFI ವಲಯ ಘಟಕ ಅಧ್ಯಕ್ಷರಾದ ಮಹಮ್ಮದ್ ರಫೀ ಬೋದೆಲ್, DYFI ಮುಖಂಡ ಮಹಾದೇವ SFI DYFI ಮುಖಂಡರಾದ ಮೂಕಪ್ಪ, ಶರಭಯ್ಯ, ಬಸವಲಿಂಗ ಹಣಗಿ, ಮತ್ತು AIKSನ MD ಮೈಬೂಬ್ ಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

3 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

7 mins ago

ನಿಧನ ವಾರ್ತೆ: ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್

ಚಿಂಚೋಳಿ: ತಾಲೂಕಿನ‌ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…

10 mins ago

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

5 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

16 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago