ಜಿಲ್ಲಾ ಜೆಡಿಎಸ್ ಯುವ ಘಟಕ ಒತ್ತಾಯ: ಕಾಮಗಾರಿ ಆರಂಭ

0
38

ಕಲಬುರಗಿ: ನಗರದ ಹುಮನಾಬಾದ ಕ್ರಾಸ್‌ದಿಂದ ರಾಮ ಮಂದಿರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪೂರ್ಣ ಹದಗೆಟ್ಟಿದ್ದು, ಕೂಡಲೇ ಇದನ್ನು ದುರಸ್ತಿ ಮಾಡಬೇಕೆಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲಿಮುದ್ದೀನ್ ಇನಾಮದಾರ್ ನೇತೃತ್ವದಲ್ಲಿ ಇತ್ತೀಚಿಗೆ ರಾಪ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸೋಮವಾರದಿಂದ ನಗರದ ಟಿಪ್ಪು ಚೌಕ್ ಬಳಿ ಕಾಮಗಾರಿ ಕೂಡ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲಿಮುದ್ದೀನ್ ಇನಾಮದಾರ್ ನೇತೃತ್ವದ ತಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮತ್ತೆ ಕಳಪೆ ಕಾಮಗಾರಿ ಮಾಡದಂತೆ ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಪ್ರವೀಣ ಜಾಧವ, ಅರವಿಂದ ರಂಜೇರಿ, ಶಾದಾಬ್ ಮಲ್ಲೀಕ್, ಶಫಿ ಪಟೇಲ್, ನಜೀರ್ ಮೌಲಾನಾ, ನಾಗರಾಜ ರೇವಣಕರ್, ಸುಲೇಮಾನ್ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here