ಕಲಬುರಗಿ: ಮನಿಷಾಳ ಚಿತೆಯ ಬೂದಿಯಿಂದ ಎದ್ದ ಬೀಜ ಮರವಾಗಿ ಸಿಡಿಯಲಿ. ಹಸಿ ಕಂದಮ್ಮಗಳ ಬದುಕು ಕಸಿದುಕೊಂಡವರಾರು?. ರೋಗಿಯ ರಾಜ್ಯದಲ್ಲಿ ನಿತ್ಯ ಸೀತೆಯರ ಶೀಲ ಹರಣ. ಧಿಕ್ಕಾರ. ಅರಿಶಿಣ ಹಚ್ಚಬೇಕಿದ ಮಗಳಿಗೆ. ಬೆಳಗುವ ದೀಪ ಆರದಿರಲಿ. ದೇವರಿಗೊಂದು ಪತ್ರ. ನೋಡುವ ದೃಷ್ಠಿಕೋನ. ಬೀದಿಯಲ್ಲಿ ತಿರುಗುವ ಕೊಬ್ಬಿದ ವೀರ್ಯಗಳ ವಿರುದ್ಧ ಸಿಡಿಯೋಣ. ವ್ಯತ್ಯಾಸ ಉಂಟೆ. ಸಂತಾಪ. ಸಿಡಿದೇಳಬೇಕು ಇಲ್ಲ ನಮ್ಮ ಸಮಾದಿ ನಾವೇ ಕಟ್ಟಿಕೊಳ್ಳಬೇಕು. ಹೀಗೆ ಆಕ್ರೋಶಭರಿತ ಕಾವ್ಯಾಕ್ಷರಗಳನ್ನು ಸಿಡಿಸುವ ಮೂಲಕ ಕವಿಗಳು ತಮ್ಮ ಸಿಟ್ಟು ಹೊರಹಾಕಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂಂದ ಸೋಮವಾರ ಏರ್ಪಡಿಸಲಾಗಿದ್ದ ಹತ್ರಾಸ್ ಯುವತಿಯ ಅತ್ಯಾಚಾರ-ಕೊಲೆ ಹಾಗೂ ಮಹಿಳಾ ದೌರ್ಜನ್ಯಗಳ ವಿರುದ್ಧ ಆನ್‍ಲೈನ್ ಪ್ರತಿರೋಧ ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನಗಳನ್ನು ಪ್ರತಿಭಟನಾತ್ಮಕ ಮನೋಭಾವದಿಂದ ವಾಚಿಸಿದ 19 ಜನ ಕವಿಗಳು, ಆವಿಷ್ಕಾರ ವೇದಿಕೆ ಆರಂಭಿಸಿದ ಸಾಹಿತ್ಯ ಮತ್ತು ಸಾಂಸ್ಕøತಿಕ ಚಳುವಳಿಗೆ ದನಿಯಾದರು. ಕುಸಂಸ್ಕøತಿಯನ್ನು ಕಾಪಾಡುತ್ತಿರುವ ಪ್ರಭುತ್ವದ ವಿರುದ್ಧ ಕವಿತೆಗಳನ್ನು ರಚಿಸಿ ಧಿಕ್ಕಾರ ಮೊಳಗಿಸಿದರು.
ಒಂದೊಂದು ಕಾವ್ಯಗಳು ಮತ್ತದರ ಪ್ರತಿ ಸಾಲುಗಳು ಉತ್ತರ ಪ್ರದೇಶದ ಹತ್ರಾಸ್‍ನ ಮನೀಷಾಳ ಅತ್ಯಾಚಾರ ಘಟನೆಯ ವಿರುದ್ಧ ಗುಡುಗಿದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯ ತುಮಕೂರ ಜಿಲ್ಲಾಧ್ಯಕ್ಷ ಎಸ್.ಎನ್.ಸ್ವಾಮಿ, ನಿಂತ ನೀರು ಕೊಳೆತು ಪಾಚಿಗಟ್ಟಿ ಕ್ರಿಮಿಗಳಿಗೆ ಜನ್ಮ ನೀಡುವಂತೆ ಸಮಾಜ ಪ್ರಗತಿ ಕಾಣದಿದ್ದಾಗ ಸಾಂಸ್ಕøತಿಕ ಅಧಃಪತನ ಉಂಟಾಗುತ್ತದೆ. ಸಮಾಜಘಾತುಕ ಶಕ್ತಿಗಳು ಹುಟ್ಟುತ್ತವೆ. ಮಾನವ ಸಂಬಂಧಗಳು ಕುಲಗೆಟ್ಟು ಹೋಗುತ್ತವೆ. ಬದುಕು ದುಃಖಮಯವಾಗಿ ಅಸಹನೀಯ ಎನ್ನಿಸುತ್ತದೆ. ನವೋದಯದ ಕಾಲದಲ್ಲೂ ಕಂಡು ಬಂದಿರುವ ಧಾರ್ಮಿಕ ಅಂಧಶ್ರದ್ಧೆ ಮತ್ತು ಅನ್ಯಾಯಗಳನ್ನು ನಾವು ಇಂದಿಗೂ ಕಾಣುವಂತಾಗಿದೆ. ಧಾರ್ಮಿಕ ಸಂಸ್ಥೆಗಳು ಹೆಣ್ಣನ್ನು ಪುರುಷನ ಅಡಿಯಾಳಾಗಿ ನೋಡುತ್ತಿವೆ.
ಇವು ಎಂದಿಗೂ ಹೆಣ್ಣನ್ನು ಕಾಪಾಡುವುದಿಲ್ಲ. ಸ್ತ್ರೀ ಸ್ವಾತಂತ್ರ್ಯದ ವಿರೋಧಿಗಳು ಸಮಾನತೆ ಸಹಿಸುವುದಿಲ್ಲ. ಪ್ರಭುತ್ವ ನೊಂದವರಿಗೆ ನ್ಯಾಯ ಕೊಡುವ ಬದಲು ಕೊಲ್ಲುವವರಿಗೆ ರಕ್ಷಣೆ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಸ್.ಎನ್.ಸ್ವಾಮಿ, ಈ ಸಮಾಜ ಮುಂದಕ್ಕೆ ಹೋಗುತ್ತಾ ಎಂಬ ಆಂತಕ ಎಲ್ಲರನ್ನೂ ಕಾಡುತ್ತಿದೆ. ಮನಸ್ಸು ಉಲ್ಲಾಸಗೊಳಿಸುವ ಮತ್ತು ಆಹ್ಲಾದಕರ ಎನ್ನಿಸುವ ಕವಿತೆಗಳ ಮಧ್ಯೆಯೇ ಪ್ರತಿಭಟನೆಯ ದನಿಯಾಗಿ ಹೆಚ್ಚೆಚ್ಚು ಕವಿತೆಗಳು ಹುಟ್ಟಬೇಕಿದೆ.ಕವಿಗಳ ಮನಸ್ಸಿನ ಕಿಚ್ಚು ಜನತೆಯನ್ನು ಬಡಿದೆಚ್ಚರಿಸುವಂತಿರಬೇಕು ಎಂದರು.
ಆವಿಷ್ಕಾರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಜಿ.ದೇಸಾಯಿ, ಸಂಘಟಕ ಪುಟ್ಟರಾಜ ಲಿಂಗಶೆಟ್ಟಿ, ಶ್ರೀಶರಣ ಹೊಸಮನಿ ಪಾಲ್ಗೊಂಡಿದ್ದರು. ಕವಿಗಳಾದ ಲಿಂಗಾರೆಡ್ಡಿ ಶೇರಿ, ಸಂಧ್ಯಾ ಹೊನಗುಂಟೀಕರ್, ಶಿಲ್ಪಾ ಜ್ಯೋಶಿ, ವೆಂಕಟೇಶ ಜನಾದ್ರಿ, ರಾಜಶೇಖರ ಯಾಳಗಿ, ಮಡಿವಾಳಪ್ಪ ಹೇರೂರ, ಜ್ಯೋತಿ ದೇಸಾಯಿ, ಡಾ.ಮಲ್ಲಿನಾಥ ಎಸ್.ತಳವಾರ, ಕೆ.ಎಂ.ವಿಶ್ವನಾಥ ಮರತೂರ, ಪರ್ವೀನ್ ಸುಲ್ತಾನಾ, ಮಹಾದೇವಿ ನಾಗೂರ, ಭವಾನಿಪ್ರಸಾದ, ಡಾ.ಗೀತಾ ಪಾಟೀಲ, ವಿಕ್ರಮ ನಿಂಬರ್ಗಾ, ಪೂಜಾ ಸಿಂಗೆ, ಬಸವರಾಜೇಶ್ವರಿ ಪಾಟೀಲ, ತಮ್ಮಣ್ಣ ಸುರಪೂರ, ರವಿ ಕೋಳಕೂರ, ಬಾಬುಪಠಾಣ ಸ್ವರಚಿತ ಕವಿತೆಗಳನ್ನು ಪ್ರತಿಭಟನೆಯ ದನಿಯಾಗಿ ವಾಚಿಸಿದರು. ಆವಿಷ್ಕಾರ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯೆ, ಉಪನ್ಯಾಸಕಿ ಶ್ರೀಮತಿ ಅಶ್ವಿನಿ ನಿರೂಪಿಸಿ, ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…