ಕಾಲೇಜು ಆರಂಭಕ್ಕೆ ಅವಸರ ಬೇಡ: ಆನಂದ ತೆಗನೂರ

0
58

ಕಲಬುರಗಿ: ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ನವೆಂಬರ್ 17 ರಿಂದ ಆರಂಭಿಸಲು ಸರಕಾರ ತೀರ್ಮಾನಿಸಿದೆ. ಕಲಿಕೆಯ ಪರಿಪೂರ್ಣತೆಗೆ ನಿರಂತರತೆ ಮುಖ್ಯ ಎಂಬುವುದು ನಿಜ. ಆದರೆ ಕಾಲೇಜು ಆರಂಭದಿಂದ ಆಗಬಹುದಾದ ಪರಿಣಾಮಗಳನ್ನು ಗಮನಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಗಳು ಒಬ್ಬರೊಡನೊಬ್ಬರು ಆತ್ಮೀಯವಾಗಿ ಬೆಳೆಯುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರು ಹಾಸ್ಟೆಲ್ ನಲ್ಲಿ ಒಂದಾಗಿ ವಾಸಿಸುತ್ತಾರೆ. ಕ್ಯಾಂಟೀನ್ ನಲ್ಲಿ ಉಂಡು ನಲಿಯುತ್ತಾರೆ , ಮೈದಾನದಲ್ಲಿ ಒಟ್ಟಿಗೆ ಆಡುತ್ತಾರೆ ಇವೆಲ್ಲವೂ ಯುವಜನರ ಸಹಜ ಮನಸ್ಥಿತಿ ಇವನ್ನು ನಿಯಂತ್ರಿಸುವುದು ಅಧ್ಯಾಪಕರಿಂದ ಸಾಧ್ಯವಾಗುವುದಿಲ್ಲ ಹೀಗಾಗಿ ಕಾಲೇಜು ಆರಂಭಕ್ಕೆ ಅವಸರ ಸರಿಯೇ ? ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ತಜ್ಞ ವೈದ್ಯರ ಅಭಿಪ್ರಾಯದಂತೆ ಡಿಸೆಂಬರ್‌ ಕೊನೆಯ ವೇಳೆಗೆ ಕೊರೊನಾ ಸೊಂಕು ನಿಯಂತ್ರಣಕ್ಕೆ ಬರಬಹುದು. ಆದರೆ ಈಗ ಪರಸ್ಪರ ಬೆರೆಯುವುದು ಹೆಚ್ಚಿದರೆ ಸೊಂಕು ಹಬ್ಬುವಿಕೆ ಪ್ರಮಾಣ ಮತ್ತೆ ಹೆಚ್ಚುತ್ತದೆ. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಈಗ ಇಂತಹುದೇ ಪರಿಸ್ಥಿತಿ ತಲೆದೂರಿದೆ. ಕೆಲವು ರಾಷ್ಟ್ರಗಳು ಮತ್ತೆ ಲಾಕ್ ಡೌನ್ ಘೋಷಿಸಿವೆ. ಹೀಗಾಗಿ ಕಾಲೇಜು ಪುನರಾರಂಭವನ್ನು ಡಿಸೆಂಬರ್ ಕೊನೆಯವರೆಗೂ ಮುಂದೂಡುವುದು ಒಳ್ಳೆಯದು ಎಂದರು.

ಒಂದೆರೆಡು ತಿಂಗಳಲ್ಲಿ ಕಳೆದುಕೊಳ್ಳುವುದುಕ್ಕಿಂತ ಗಳಿಸುವುದೇ ಹೆಚ್ಚು . ಹೀಗಾಗಿ ಸರಕಾರ ಕೂಡಲೇ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here