ಬಿಸಿ ಬಿಸಿ ಸುದ್ದಿ

ಸಮಗ್ರ ಕೃಷಿ ಅಳವಡಿಸಲು ರೈತರಿಗೆ ಡಾ.ಸುರೇಶ ಪಾಟೀಲ್ ಸಲಹೆ

ಕಲಬುರಗಿ: ಕೃಷಿ ಮಹಾವಿದ್ಯಾಲಯ, ಧಾರವಾಡ ಅಂತಿಮ ವರ್ಷ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿಗಳು, ರೈತ ಸಂಪರ್ಕ ಕೇಂದ್ರ, ಫರತಾಬಾದ, ಕೆ.ವಿ.ಕೆ., ಕೃಷಿ ಮಹಾವಿದ್ಯಾಲಯ, ಸಂಯುಕ್ತಾಶ್ರಯದಲ್ಲಿ ತಾಲೂಕಿನ ಫರತಾಬಾದ ಗ್ರಾಮದಲ್ಲಿರೈತರಿಗೆ ಸಮಗ್ರ ಕೃಷಿ, ಸಮೃದ್ಧ ಕೃಷಿ ಶೀರ್ಷಿಕೆಯಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಕೃಷಿ ಮಹಾವಿದ್ಯಾಲಯ, ಡೀನ್‌ರಾದ ಡಾ.ಸುರೇಶ ಪಾಟೀಲ್, ಪ್ರಸ್ತುತ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿರುವ ಕೃಷಿ ಭೂಮಿಗಳ ಫಲವತ್ತತೆ ಕಾಪಾಡಿ, ಸೂಕ್ತ ಬೆಳೆಗೆ ಸಮಗ್ರ ಪೋಷಕಾಂಶ ನೀಡಿ, ಏಕಬೆಳೆ ಬದಲು ಸಮಗ್ರ ಬೆಳೆ ಕೃಷಿ ಪದ್ಧತಿ ಅಳವಡಿಸಲು ರೈತರಿಗೆ ಸಲಹೆ ನೀಡಿದರು.ಕೃಷಿ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು ರೈತರು ಆಧುನಿಕ ತಂತ್ರಜ್ಞಾನವನ್ನುಕೃಷಿ ವಿಜ್ಞಾನಿಗಳಿಂದ ಪಡೆಯಬಹುದಾಗಿದೆ. ಧಾರವಾಡ ಕೃಷಿ ಕಾಲೇಜು ವಿಸ್ತರಣಾ ವಿಭಾಗ ಪ್ರಾಧ್ಯಾಪಕರಾದಡಾ. ಎಸ್.ಎಸ್.ಡೊಳ್ಳಿ, ಕೃಷಿ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಗಳ ಮೂಲಕ ತೋರಿಸಿದ್ದಲ್ಲಿ ಹಾಗೂ ಯಶಸ್ವಿ ತಂತ್ರಜ್ಞಾನ ಹೊಲದಲ್ಲಿ ಅಳವಡಿಸಿದಲ್ಲಿ ಸಾರ್ಥಕ ಕೃಷಿ ಲಾಭದಾಯವಾಗಲಿದೆ ಎಂದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯಹಾಗೂಕೃಷಿ ಮಹಾವಿದ್ಯಾಲಯ, ಕಲಬುರಗಿಯ ವಿಸ್ತರಣಾ ವಿಭಾಗ ಮುಖ್ಯಸ್ಥರಾದಡಾ. ಶಿವಶರಣಪ್ಪ ಗೌಡಪ್ಪ ಮಾತನಾಡಿ ಈ ವರ್ಷಉತ್ತಮ ಮಳೆಯಾಗಿದ್ದು ಬೇಸಿಗೆಯಲ್ಲಿ ಕೃಷಿ ತೋಟಗಾರಿಕೆ ಬೆಳೆ ಬೆಳೆಯಬಹುದು. ಹಳ್ಳಿಗಳಲ್ಲಿ ಬೆಳೆದ ತರಕಾರಿ ಹಣ್ಣುಗಳಿಗೆ ಕೋವಿಡ್ ಸನ್ನಿವೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮನುಷ್ಯನದೈನಂದಿನ ಆರೋಗ್ಯಕ್ಕೆ ಸಮತೋಲನ ಆಹಾರ ಮುಖ್ಯವಾದುದ್ದುಎಂದರು.

ಪ್ರಗತಿಪರರೈತರಾದ ಶ್ರೀ.ಚಿತ್ರಶೇಖರ ಉಪಸ್ಥಿತರಿದ್ದರು. ಕೆ.ವಿ.ಕೆ ಮುಖ್ಯಸ್ಥರಾದಡಾ.ರಾಜು ತೆಗ್ಗಳ್ಳಿ ಸಮಗ್ರಕೀಟ ಹತೋಟಿ, ಪರಿಸರ ಸ್ನೇಹಿ ಕೃಷಿ ಉದಾಹರಣೆಯೊಂದಿಗೆ ವಿರಿಸದರು. ಸಸ್ಯರೋಗತಜ್ಞರಾದಜಹೀರ್‌ಅಹಮದ್, ಮಾತನಾಡಿ ಕೃಷಿ ವಿದ್ಯಾರ್ಥಿಗಳು ಹಾಗೂ ರೈತರ ನಡುವೆ ವಿಚಾರ ವಿನಿಮಯಗಳು, ಕೃಷಿ ಕಲಿಕೆ ನಿರಂತ್ರರವಾಗಿ ನಡೆಯಬೇಕು.ತೊಗರಿ, ಕಡಲೆ ಹಾಗೂ ಇತರ ಮುಖ್ಯ ಬೆಳೆಗಳ ಸಸ್ಯರೋಗ ಹತೋಟಿ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಶ್ರೀಮತಿ ಸುಜಾತಾ, ಪ್ರಿಯಂಕಾಕುಲಕರ್ಣಿ ಹಾಗೂ ಶೃತಿ ಹೊಸಮನಿ ಉಪಸ್ಥಿತರಿದ್ದರು. ಫರತಾಬಾದಗ್ರಾಮಸ್ಥರು ಕೃಷಿ ವಿದ್ಯಾರ್ಥಿಗಳು ಏರ್ಪಡಿಸಿದ ವಿವಿಧ ವಸ್ತು ಪ್ರದರ್ಶನ ವೀಕ್ಷಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago