ವೀಕ್ಷಕರಿಂದ ಗ್ರಾಪಂ ಚುನಾವಣೆ ಸಿದ್ಧತೆ ಕಾರ್ಯ ಪರಿಶೀಲನೆ

0
31

ಆಳಂದ: ಡಿ.೨೨ರಂದು ನಡೆಯಲಿರುವ ಗ್ರಾಪಂ ಸಾರ್ವತ್ರಿಕ ಪ್ರಥಮ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆ ವೀಕ್ಷಕರಾದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಅನೀಲಕುಮಾರು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದು.

ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ನೀಡುವ ಅಂತಿಮ ತರಬೇತಿ ಸಿದ್ಧತಾ ಕಾರ್ಯವನ್ನು ವೀಕ್ಷಕಿಸಿದರು. ಅಲ್ಲದೆ, ಇದೇ ಸ್ಥಳದಿಂದ ಗ್ರಾಪಂಗಳ ಮತಗಟ್ಟೆಗಳಿಗೆ ರವಾನೆಗೊಳ್ಳುವ ಮತಯಂತ್ರ ಹಾಗೂ ಮುಂದೆ ಕೈಗೊಳ್ಳುವ ಸ್ಟ್ರಾಂಗರೋಂ ಪರಿಶೀಲಿಸಿ ಸಿದ್ಧತಾ ಕಾರ್ಯದ ಮೆಚ್ಚಿಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಚುನಾವಣೆ ಸಿದ್ಧತೆ ಕಾರ್ಯದ ಕುರಿತು ಸಮಗ್ರವಾದ ಮಾಹಿತಿ ನೀಡಿದ ಅವರು, ಒಟ್ಟು ಚುನಾವಣೆ ನಡೆಯಬೇಕಿರುವ ೩೬ ಗ್ರಾಪಂಗಳಲ್ಲಿ ೬೦೦ ಸ್ಥಾನಗಳಿದ್ದು, ಈ ಪೈಕಿ ೧೯೭೩ ಮಂದಿ ನಾಮಪತ್ರ ಸಲ್ಲಿಸಿದ್ದರು, ೪೦ ಸ್ಥಾನಗಳಲ್ಲಿ ಸದಸ್ಯರ ಅವಿರೋಧ ಆಯ್ಕೆಯಾದ ಮೇಲೆ ಬಾಕಿ ಉಳಿದ ೫೬೦ ಸ್ಥಾನಗಳಿಗೆ ಮಾತ್ರ ನಡೆಯುವ ಚುನಾವಣೆಗೆ ೧೪೬೨ ಮಂದಿ ಕಣದಲ್ಲಿದ್ದಾರೆ. ೨೬೭ ಮತಗಟ್ಟೆಗಳು ಸ್ಥಾಪಿಸಲಾಗಿದೆ. ಒಟ್ಟು ೧೯೭೩೫೯ ಮತದಾರರಿದ್ದಾರೆ. ಚುನಾವಣೆಗೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಸೇರಿ ೭೨ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ ೧, ಎಂಸಿಸಿ ಅಧಿಕಾರಿಗಳು ಐದು ಜನರಿಗೆ ನಿಯೋಜಿಸಿದ್ದು, ಪಟ್ಟಣದ ಬಾಲಕರ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ. ಮಸ್ಟರಿಂಗ ಹಾಗೂ ಕೌಟಿಂಗ್ ಸ್ಥಳವಾಗಿದೆ ಎಂದು ಹೇಳಿದರು.

ನೋಡಲ್ ಅಧಿಕಾರಿ ಆನಂದ ತೀರ್ಥ, ಪ್ರಭುಲಿಂಗ ತಳಕೇರಿ ಆಗಮಿಸಿದ್ದರು. ಚುನಾವಣೆ ಶಾಖೆ ಶಿರಸ್ತೆದಾರ ಮನೋಜ್ ಲಾಡೆ, ಎಫ್‌ಡಿಎ ವೀಣಾಶ್ರೀ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ವಿಎ ಆನಂದ ಪೂಜಾರಿ ಹಾಗೂ ಮುನ್ನೋಳ್ಳಿ, ಸಂಗೋಳಗಿ ಗ್ರಾಮ ಲೇಕ್ಕಾಧಿಕಾರಿಗಳು ಹಾಜರಿದ್ದರು.

ಬಳಿಕ ವೀಕ್ಷಣಾಧಿಕಾರಿಗಳ ನೇತೃತ್ವದ ತಂಡವು ತಹಸೀಲ್ ಕಚೇರಿ, ಮುನ್ನೋಳ್ಳಿ, ತಡಕಲ್, ಸಂಗೋಳಗಿ ಜಿ. ಗ್ರಾಮದ ಮತದಾನ ಕೇಂದ್ರ ಪರಿಶೀಲಿಸಿ ಭದ್ರತೆ, ಮೂಲಸೌಕರ್ಯಗಳನ್ನು ವೀಕ್ಷಕಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here