ಕವಿಯಾಗುವ ಮೊದಲು ಕಿವಿಯಾಗೋಣ ಬನ್ನಿ: ಕೆ.ಎಂ.ವಿಶ್ವನಾಥ ಮರತೂರ

0
97

ಕಲಬುರಗಿ: ಪ್ರಜ್ಞಾ ದಿ ಇನ್ಸ್‌ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಕಲಬುರಗಿ ವತಿಯಿಂದಕಾವ್ಯ ಓದು ಸಂಭ್ರಮ ಕವಿತೆ ಓದಿ, ಬಹುಮಾನ ಗೆಲ್ಲಿ ವಿಶೇಷ ಕಾವ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮವು ಆನ್ ಲೈನ್ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಸಂಸ್ಥೆಯ ಸಂಸ್ಥಾಪಕ ಕೆ.ಎಂ.ವಿಶ್ವನಾಥ ಮರತೂರ ಅವರು ಕಾವ್ಯ ನಮ್ಮೊಳಗೆ ಅವಿತುಕುಳಿತ ಅನುಭವದ ಅಕ್ಷರ ರೂಪವಾಗಿದೆ. ನಾವು ನಮ್ಮ ಭಾವನೆಗಳನ್ನು ಬರೆಯುವ ಪ್ರಕ್ರಿಯೆಯಾಗಿದೆ. ಹಿರಿಯ ಸಾಹಿತಿಗಳ ಅಧ್ಯಯನ ಅವಶ್ಯಕ. ಕವನ ವಾಚನವೂ ಒಂದು ಉತ್ತಮವಾದ ಅವಕಾಶ ನಾವು ಹಿರಿಯ ಸಾಹಿತಿಗಳ ಕವನ ವಾಚನ ಶೈಲಿಯನ್ನು ಕಲಿಯಬೇಕು. ನಾವು ಕವಿಗಳಾಗುವ ಮೊದಲು ಕಿವಿಗಳಾಗಬೇಕು. ಇನ್ನೊಬ್ಬರ ಕವಿತೆಗಳನ್ನು ಕೇಳಿ ಆಸ್ವಾದಿಸುವ ಗುಣವನ್ನು ಹೊಂದಬೇಕು ನಾವೆಲ್ಲರೂ ಕಾವ್ಯ ಸಾಹಿತ್ಯದೊಳಗೆ ಮಾಗಬೇಕು ಕಾವ್ಯ ಬೀಜ ಕಾಯಿಯಾಗಿ ಹಣ್ಣಾಗಬೇಕು ಅಂದಾಗ ಮಾತ್ರ ಕಾಡುವ ಕಾವ್ಯ ಕಟ್ಟಲು ಸಾಧ್ಯವಾಗುತ್ತದೆ ಎಂದರು.

Contact Your\'s Advertisement; 9902492681

ಉಪನ್ಯಾಸ ನೀಡಿದ ಖ್ಯಾತ ಸಾಹಿತಿ ಪತ್ರಕರ್ತ ಮಹಿಪಾರೆಡ್ಡಿ ಮುನ್ನೂರ ಅವರು ಕಾವ್ಯ ಪ್ರಾಂಜಲ ಮನಸ್ಸಿನ ಆಸ್ವಾದನೆ. ಕಟ್ಟಬೇಕಿರುವದು ಮನಸ್ಸುಗಳ ಕಾವ್ಯ. ಕನ್ನಡ ಸಾಹಿತ್ಯದ ಅಧ್ಯಯನದ ಪರಿಧಿಯೊಳಗೆ ನಾವೆಲ್ಲರೂ ತೇಲಿ ಹೋಗದೇ ಮುಳಗಬೇಕಿದೆ. ಇನ್ನಾರದೋ ಅನುಕರಣೆ ಮಾಡಿದೇ ನನ್ನ ಕವಿತೆ ಹೇಗೆ ವಿಶಿಷ್ಠತೆ ಮತ್ತು ವಿಭಿನ್ನತೆಗಳ ಕೂಡಿರಬೇಕು ಎಂಬುವುದು ಮುಖ್ಯವಾಗುತ್ತದೆ. ಕಾವ್ಯ ಸಾಹಿತ್ಯದ ಅಧ್ಯಯನ ಮಾಡುವ ಮೂಲಕ ಹೊಸ ಕಾವ್ಯ ಸಾಹಿತ್ಯವನ್ನು ಕಟ್ಟುವುದು ಸಾಧ್ಯವಾಗುತ್ತದೆ ಹೀಗಾಗಿ ಯುವ ಕವಿಮನಸ್ಸುಗಳು ಸಾಹಿತ್ಯದ ಅಧ್ಯಯನದಲ್ಲಿ ತೊಡಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.

ಇನ್ನೋರ್ವ ಉಪನ್ಯಾಸಕರಾದ ಪ್ರಕಾಶ ಖಾಡೆ ಮಾತನಾಡಿ ಸಾಹಿತ್ಯ ಒಂದು ಅತ್ಯದ್ಭುತವಾದ ಅನುಭವ ಇದನ್ನು ನಮ್ಮ ಜಾನಪದರು ಕಟ್ಟು ಪದಗಳ ಮೂಲಕ ಪ್ರಾರಂಭವಾಗಿದೆ. ನಾವು ಜನಜೀವನದ ಜೊತೆಗೆ ಬದುಕಬೇಕು ಅದರ ಮಧ್ಯದಲ್ಲಯೇ ಕಾವ್ಯ ಸಾಹಿತ್ಯ ಚಲನಶೀಲವಾಗಿ ಹೊರಬರಬೇಕು ನಮ್ಮ ಕಾವ್ಯ ಪರಂಪರೆ ಹಾಗೂ ಜಾನಪದದ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯ ರಚನೆ ಮಾಡಬೇಕು ಹೆಚ್ಚಾಗಿ ಕವಿ ಪ್ರಸ್ತುತ ವಿಷಯ ವಸ್ತುಗಳ ಸಾಮಾಜಿಕ ಧ್ವನಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಲವು ಜಿಲ್ಲೆಗಳಿಂದ ೭೦ಕ್ಕು ಹೆಚ್ಚು ಕವಿಗಳು ಭಾಗವಹಿಸಿದ್ದರು ಪ್ರಜ್ಞಾ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ ಮರತೂರ ಅಧ್ಯಕ್ಷತೆ ವಹಿಸಿದ್ದರು.  ಭಾಗವಹಿಸಿದ ಎಲ್ಲಾ ಕವಿಗಳಿಗೆ ಭಾಗವಹಿಸಿದ ಇಪ್ರಮಾಣ ಪತ್ರ ಕೊಡಲಾಯಿತು.

ಬಹುಮಾನ ಪಡೆದ ವಿವರ: ಪ್ರಥಮ ಬಹುಮಾನ ಯಾದಗಿರಿ ಜಿಲ್ಲೆ ಶಹಾಪುರನ ಗೌರೀಶ ಅವಟಿ, ದ್ವಿತೀಯ ಬಹುಮಾನ ಧಾರವಾಡದ ಈರಣ್ಣ ಅಗಳಗಟ್ಟಿ, ತೃತೀಯ ಬಹುಮಾನ ವಿಜಯಪೂರ ಜಿಲ್ಲೆಯ ಶೃತಿ ಚಂದ್ರಕಾಂತ ಕಾಜಗಾರ್, ಸಮಾಧಾನಕರ ಬಹುಮಾನವನ್ನು ವರ್ಷಿಣಿ ಆರ್ ಬೆಂಗಳೂರು, ಧೀಕ್ಷಿತ ಕೆ.ಎಂ. ಮಂಡ್ಯ, ವೆಂಕಟೇಶ ಜನಾದ್ರಿ ಕಲಬುರಗಿ ಪಡೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here