ಕಲಬುರಗಿ: ಕೊರೊನಾ ವೈರಸ್ ನಿಯಮಗಳನ್ನು ಮುಂದಿಟ್ಟು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿ ನಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಎಸಿಸಿಯ ಲಾಭದಾಯಕ ಮನಸ್ಥಿಯಿಂದಾಗಿ 3000 ಗುತ್ತಿಗೆ ಕಾರ್ಮಿಕರ ಭವಿಷ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ನೆಲ, ಜಲ, ಕಲ್ಲು ಪಡೆದು ನಮ್ಮನ್ನೇ ಕತ್ತು ಹಿಡಿದು ಹೊರ ತಳ್ಳುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ತಿಂಗಳಿಗೆ 26 ಹಾಜರಿ ಕೆಲಸ ನೀಡುವ ಬದಲು ಪುರುಷ ಕಾರ್ಮಿಕರಿಗೆ ಹತ್ತು ದಿನ, ಮಹಿಳಾ ಕಾರ್ಮಿಕರಿಗೆ ನಾಲ್ಕು ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕೂಡಬೇಕಾದ ದುಸ್ಥಿತಿ ಬಂದಿದೆ. ಸಿಮೆಂಟ್ ಉತ್ಪಾದನೆ ಮೊದಲಿಗಿಂತಲೂ ಉತ್ತಮವಾಗಿದೆ. ದೇಶದ ನಾಲ್ಕು ಕಂಪನಿಗಳಿಗೆ ಕ್ಲಿಂಕರ್ ಸಾಗಾಣಿಕೆಯಾಗುತ್ತಿದೆ. ಪ್ರತಿದಿನ 50 ಬೋಗಿಯುಳ್ಳ ಎರಡು ಗೂಡ್ಸ್ ರೈಲುಗಳ ಮೂಲಕ ಸಿಮೆಂಟ್ ರಫ್ತು ಮಾಡಲಾಗುತ್ತಿದೆ. ಆದಾಯಕ್ಕೇನು ಕೊರತೆಯಿಲ್ಲ. ಕಂಪನಿ ನಷ್ಟದಲ್ಲಿದೆ ಎಂದು ಹೇಳುವ ಮೂಲಕ ಎಸಿಸಿ ಆಡಳಿತ ಕಾರ್ಮಿಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ. ಕಾರ್ಮಿಕರಿಗೆ ಸಿಗಬೇಕಾದ ಕಾನೂನಾತ್ಮಕ ಸೌಲಭ್ಯಗಳನ್ನು ನೀಡುವಲ್ಲಿ ಎಸಿಸಿ ಕಂಪನಿ ವಿಫಲವಾಗಿದೆ ಎಂದರು.
ಬೆವರು ಸುರಿಸಿ ಕಂಪನಿ ಕಟ್ಟಿರುವ ಕಾರ್ಮಿಕರನ್ನೇ ಕಂಪನಿ ಕಾಲುಕಸದಂತೆ ಕಾಣುತ್ತಿದೆ. ನ್ಯಾಯಬದ್ಧ ಬೇಡಿಕೆಯಿಟ್ಟು ಹೋರಾಡಿದರೆ ನಾನಾ ರೀತಿಯ ಬೆದರಿಕೆ ಹಾಕುತ್ತಿದೆ. ಕಾರ್ಮಿಕರು ಎಸಿಸಿಯಿಂದ ಶೋಷಣೆಗೊಳಗಾಗಿದ್ದಾರೆ. ಬಡ ಕಾರ್ಮಿಕರ ಬದುಕಿನ ಮೇಲೆ ಎಸಿಸಿ ಅಧಿಕಾರಿಗಳು ಕಾಲಿಟ್ಟಿದ್ದಾರೆ. ನಮಗೆ ಕಾರ್ಮಿಕರ ಅವಶ್ಯಕತೆ ಇಲ್ಲ. ಎಷ್ಟು ಬೇಕು ಅಷ್ಟು ಮಂದಿಯನ್ನು ಕೆಲಸಕ್ಕೆ ಕರಿಯುತ್ತೇವೆ. ಬಂದ್ರೆ ಬನ್ನಿ ಬರದಿದ್ದರೆ ಬಿಡಿ. ಕಾರ್ಮಿಕರಿಲ್ಲದೆಯೂ ಕಂಪನಿ ನಡೆಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಧರ್ಪದಿಂದ ಹೇಳುತ್ತಾರೆ ಎಂದು ಆರೋಪಿಸಿ, ಎಸಿಸಿಗೆ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂದು ಗುತ್ತಿಗೆ ಕಾರ್ಮಿಕರು ಕಿಡಿಕಾರಿದರು. ಕೂಡಲೇ ನಮಗೆ ಪ್ರತಿ ನಿತ್ಯ ಕಡ್ಡಾಯವಾಗಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಸಾವಿರಾರು ಜನ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…