ಕೆಲಸ ಕಸಿದ ಎಸಿಸಿ ಕಂಪನಿ ವಿರುದ್ಧ ಪ್ರತಿಭಟನೆ

0
30

ಕಲಬುರಗಿ: ಕೊರೊನಾ ವೈರಸ್ ನಿಯಮಗಳನ್ನು ಮುಂದಿಟ್ಟು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿ ನಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಎಸಿಸಿಯ ಲಾಭದಾಯಕ ಮನಸ್ಥಿಯಿಂದಾಗಿ 3000 ಗುತ್ತಿಗೆ ಕಾರ್ಮಿಕರ ಭವಿಷ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ನೆಲ, ಜಲ, ಕಲ್ಲು ಪಡೆದು ನಮ್ಮನ್ನೇ ಕತ್ತು ಹಿಡಿದು ಹೊರ ತಳ್ಳುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳಿಗೆ 26 ಹಾಜರಿ ಕೆಲಸ ನೀಡುವ ಬದಲು ಪುರುಷ ಕಾರ್ಮಿಕರಿಗೆ ಹತ್ತು ದಿನ, ಮಹಿಳಾ ಕಾರ್ಮಿಕರಿಗೆ ನಾಲ್ಕು ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕೂಡಬೇಕಾದ ದುಸ್ಥಿತಿ ಬಂದಿದೆ. ಸಿಮೆಂಟ್ ಉತ್ಪಾದನೆ ಮೊದಲಿಗಿಂತಲೂ ಉತ್ತಮವಾಗಿದೆ. ದೇಶದ ನಾಲ್ಕು ಕಂಪನಿಗಳಿಗೆ ಕ್ಲಿಂಕರ್ ಸಾಗಾಣಿಕೆಯಾಗುತ್ತಿದೆ. ಪ್ರತಿದಿನ 50 ಬೋಗಿಯುಳ್ಳ ಎರಡು ಗೂಡ್ಸ್ ರೈಲುಗಳ ಮೂಲಕ ಸಿಮೆಂಟ್ ರಫ್ತು ಮಾಡಲಾಗುತ್ತಿದೆ. ಆದಾಯಕ್ಕೇನು ಕೊರತೆಯಿಲ್ಲ. ಕಂಪನಿ ನಷ್ಟದಲ್ಲಿದೆ ಎಂದು ಹೇಳುವ ಮೂಲಕ ಎಸಿಸಿ ಆಡಳಿತ ಕಾರ್ಮಿಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ. ಕಾರ್ಮಿಕರಿಗೆ  ಸಿಗಬೇಕಾದ ಕಾನೂನಾತ್ಮಕ ಸೌಲಭ್ಯಗಳನ್ನು ನೀಡುವಲ್ಲಿ ಎಸಿಸಿ ಕಂಪನಿ ವಿಫಲವಾಗಿದೆ ಎಂದರು.

Contact Your\'s Advertisement; 9902492681

ಬೆವರು ಸುರಿಸಿ ಕಂಪನಿ ಕಟ್ಟಿರುವ ಕಾರ್ಮಿಕರನ್ನೇ ಕಂಪನಿ ಕಾಲುಕಸದಂತೆ ಕಾಣುತ್ತಿದೆ. ನ್ಯಾಯಬದ್ಧ ಬೇಡಿಕೆಯಿಟ್ಟು ಹೋರಾಡಿದರೆ ನಾನಾ ರೀತಿಯ ಬೆದರಿಕೆ ಹಾಕುತ್ತಿದೆ. ಕಾರ್ಮಿಕರು ಎಸಿಸಿಯಿಂದ ಶೋಷಣೆಗೊಳಗಾಗಿದ್ದಾರೆ. ಬಡ ಕಾರ್ಮಿಕರ ಬದುಕಿನ ಮೇಲೆ ಎಸಿಸಿ ಅಧಿಕಾರಿಗಳು ಕಾಲಿಟ್ಟಿದ್ದಾರೆ. ನಮಗೆ ಕಾರ್ಮಿಕರ ಅವಶ್ಯಕತೆ ಇಲ್ಲ. ಎಷ್ಟು ಬೇಕು ಅಷ್ಟು ಮಂದಿಯನ್ನು ಕೆಲಸಕ್ಕೆ ಕರಿಯುತ್ತೇವೆ. ಬಂದ್ರೆ ಬನ್ನಿ ಬರದಿದ್ದರೆ ಬಿಡಿ. ಕಾರ್ಮಿಕರಿಲ್ಲದೆಯೂ ಕಂಪನಿ ನಡೆಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಧರ್ಪದಿಂದ ಹೇಳುತ್ತಾರೆ ಎಂದು ಆರೋಪಿಸಿ, ಎಸಿಸಿಗೆ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂದು ಗುತ್ತಿಗೆ ಕಾರ್ಮಿಕರು ಕಿಡಿಕಾರಿದರು. ಕೂಡಲೇ ನಮಗೆ ಪ್ರತಿ ನಿತ್ಯ ಕಡ್ಡಾಯವಾಗಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಸಾವಿರಾರು ಜನ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here