ನವ ದೆಹಲಿ: ದೆಹಲಿಯಲ್ಲಿಂದು ಜನನಾಟ್ಯ ಮಂಚ, ಸಹಮತ್ ಮೊದಲಾದ ಜನಪರ ಸಂಘಟನೆಗಳು ಕಾರ್ನಾಡರಿಗೆ ಗೌರವ ಸೂಚಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು. ಸಂಘಟನೆಗೆ ಕನ್ನಡ ಪೀಠವೂ ಸಹಾಯಮಾಡಿತ್ತು. IIC ಯ ತುಂಬಿದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ನಾಡರ ಬಗ್ಗೆ ಅನೇಕ ಮಾತುಗಳು ಕೇಳಿಬಂದುವು. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ-
ಇಂಗ್ಲಿಷನ್ನು ಅದ್ಭುತವಾಗಿ ಮಾಡಬಲ್ಲ ಕಾರ್ನಾಡರು ಬರೆಯಲು ಕನ್ನಡವನ್ನೇ ಆಯ್ದುಕೊಂಡರು ಎಂಬುದು ಬಹಳ ಮುಖ್ಯ’ -ಗೀತಾ ಹರಿಹರನ್, ಲೇಖಕಿ
‘ಉತ್ಸವವೇ ಪ್ರಧಾನವಾಗಿದ್ದ ಭಾರತೀಯ ರಂಗಭೂಮಿಗೆ ಪ್ರಶ್ನೆ ಕೇಳಲು ಕಲಿಸಿದವರು ಕಾರ್ನಾಡರು’
– ಅಶೋಕ ವಾಜಪೇಯಿ, ಕವಿ
‘ತುಘಲಕ್ ನಾಟಕವು ಭಾರತೀಯ ರಂಗಭೂಮಿಯ ಶಾಶ್ವತ ನಾಟಕಗಳಲ್ಲಿ ಒಂದು: ಜನನಾಟ್ಯ ಮಂಚ್
‘ಗಿರೀಶರ ಕನ್ನಡ ನಾಟಕಗಳು ಹಿಂದೀ ರಂಗಭೂಮಿಯ ವ್ಯಾಕರಣವನ್ನೇ ಬದಲಾಯಿಸಿದುವು’: -ಎಂ ಕೆ ರೈನಾ, ನಿರ್ದೇಶಕ
‘ಇತಿಹಾಸ ಮತ್ತು ಪುರಾಣಗಳು ಶಾಶ್ವತವೆಂದು ಡಂಗುರ ಬಾರಿಸುತ್ತಿರುವ ಹೊತ್ತಲ್ಲಿ ಕಾರ್ನಾಡರು ಅದರ ವಿರುದ್ಧ ದಿಕ್ಕಿನಲ್ಲಿ ಹೊರಟು ಅವೆಷ್ಟು ಫ್ಲೆಕ್ಸಿಬಲ್ ಎಂಬುದನ್ನು ತೋರಿಸಿಕೊಟ್ಟರು: ಅನುರಾಧಾ ಕಪೂರ್, NSD
‘ಕನ್ನಡದ ಲೇಖಕರು ಇಷ್ಟೊಂದು ಶಕ್ತಿಶಾಲಿಗಳಾಗಲು ಅವರಿಗಿರುವ ವಚನ ಚಳುವಳಿಯ ಹಿನ್ನೆಲೆಯೇ ಕಾರಣ’
– ಸಚ್ಚಿದಾನಂದನ್, ಕವಿ
‘ಅತ್ಯುತ್ಕೃಷ್ಟವಾದ ಪ್ರಾಮಾಣಿಕ ಹುಡುಕಾಟವನ್ನು ಕೊನೆವರೆಗೆ ಕಾರ್ನಾಡರು ಉಳಿಸಿಕೊಂಡಿದ್ದರು, ಇದು ಸುಲಭವಾದ ಕೆಲಸವಲ್ಲ’: ಟಿ ಎಂ ಕೃಷ್ಣ, ಕಲಾವಿದ (ಕೃಷ್ಣ ಅವರು ಕಳಬೇಡ ಕೊಲಬೇಡ ವಚನವನ್ನೂ ಮನಮುಟ್ಟುವಂತೆ ಹಾಡಿದರು)
ಒಬ್ಬ ಲೇಖಕ ನಾಡು ನುಡಿಗೆ ಗೌರವ ತಂದುಕೊಡುವುದೆಂದರೆ ಹೀಗೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…