ಜನಪರ ಸಂಘಟನೆಗಳಿಂದ ಕಾರ್ನಾಡರಿಗೆ ಗೌರವ ಶೃದ್ಧಾಂಜಲಿ

0
55

ನವ ದೆಹಲಿ: ದೆಹಲಿಯಲ್ಲಿಂದು ಜನನಾಟ್ಯ ಮಂಚ, ಸಹಮತ್ ಮೊದಲಾದ ಜನಪರ ಸಂಘಟನೆಗಳು ಕಾರ್ನಾಡರಿಗೆ ಗೌರವ ಸೂಚಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು.‌ ಸಂಘಟನೆಗೆ ಕನ್ನಡ ಪೀಠವೂ ಸಹಾಯಮಾಡಿತ್ತು. IIC ಯ ತುಂಬಿದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ನಾಡರ ಬಗ್ಗೆ ಅನೇಕ ಮಾತುಗಳು ಕೇಳಿಬಂದುವು. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ-

ಇಂಗ್ಲಿಷನ್ನು ಅದ್ಭುತವಾಗಿ ಮಾಡಬಲ್ಲ ಕಾರ್ನಾಡರು ಬರೆಯಲು ಕನ್ನಡವನ್ನೇ ಆಯ್ದುಕೊಂಡರು ಎಂಬುದು ಬಹಳ ಮುಖ್ಯ’ -ಗೀತಾ ಹರಿಹರನ್, ಲೇಖಕಿ

Contact Your\'s Advertisement; 9902492681

 ‘ಉತ್ಸವವೇ ಪ್ರಧಾನವಾಗಿದ್ದ ಭಾರತೀಯ ರಂಗಭೂಮಿಗೆ ಪ್ರಶ್ನೆ ಕೇಳಲು ಕಲಿಸಿದವರು ಕಾರ್ನಾಡರು’

– ಅಶೋಕ ವಾಜಪೇಯಿ, ಕವಿ

 ‘ತುಘಲಕ್ ನಾಟಕವು ಭಾರತೀಯ ರಂಗಭೂಮಿಯ ಶಾಶ್ವತ ನಾಟಕಗಳಲ್ಲಿ ಒಂದು: ಜನನಾಟ್ಯ ಮಂಚ್

 ‘ಗಿರೀಶರ ಕನ್ನಡ ನಾಟಕಗಳು ಹಿಂದೀ ರಂಗಭೂಮಿಯ ವ್ಯಾಕರಣವನ್ನೇ ಬದಲಾಯಿಸಿದುವು’: -ಎಂ ಕೆ ರೈನಾ, ನಿರ್ದೇಶಕ

‘ಇತಿಹಾಸ ಮತ್ತು ಪುರಾಣಗಳು ಶಾಶ್ವತವೆಂದು ಡಂಗುರ  ಬಾರಿಸುತ್ತಿರುವ ಹೊತ್ತಲ್ಲಿ ಕಾರ್ನಾಡರು ಅದರ ವಿರುದ್ಧ ದಿಕ್ಕಿನಲ್ಲಿ ಹೊರಟು ಅವೆಷ್ಟು ಫ್ಲೆಕ್ಸಿಬಲ್ ಎಂಬುದನ್ನು ತೋರಿಸಿಕೊಟ್ಟರು: ಅನುರಾಧಾ ಕಪೂರ್, NSD

 ‘ಕನ್ನಡದ ಲೇಖಕರು ಇಷ್ಟೊಂದು ಶಕ್ತಿಶಾಲಿಗಳಾಗಲು ಅವರಿಗಿರುವ ವಚನ ಚಳುವಳಿಯ ಹಿನ್ನೆಲೆಯೇ ಕಾರಣ’

– ಸಚ್ಚಿದಾನಂದನ್, ಕವಿ

ಅತ್ಯುತ್ಕೃಷ್ಟವಾದ ಪ್ರಾಮಾಣಿಕ ಹುಡುಕಾಟವನ್ನು ಕೊನೆವರೆಗೆ ಕಾರ್ನಾಡರು ಉಳಿಸಿಕೊಂಡಿದ್ದರು, ಇದು ಸುಲಭವಾದ ಕೆಲಸವಲ್ಲ’: ಟಿ ಎಂ ಕೃಷ್ಣ, ಕಲಾವಿದ (ಕೃಷ್ಣ ಅವರು ಕಳಬೇಡ ಕೊಲಬೇಡ ವಚನವನ್ನೂ ಮನಮುಟ್ಟುವಂತೆ ಹಾಡಿದರು)

ಒಬ್ಬ ಲೇಖಕ ನಾಡು ನುಡಿಗೆ ಗೌರವ ತಂದುಕೊಡುವುದೆಂದರೆ ಹೀಗೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here