ಬಿಸಿ ಬಿಸಿ ಸುದ್ದಿ

ಖರ್ಗೆ ಸೋಲಿಸಿ ಕಲಬುರಗಿ ಜನ ಪಶ್ಚಾತಾಪ: ಶಂಕ್ರಯ್ಯ

ವಾಡಿ: ಅಭಿವೃದ್ಧಿಯನ್ನೆ ಜೀವಾಳವಾಗಿಸಿಕೊಂಡು ಕಲಬುರಗಿಯ ಚಿತ್ರಣ ಬದಲಿಸಿದ್ದ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿಯ ಜನರು ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಶಂಕ್ರಯ್ಯಸ್ವಾಮಿ ಮದ್ರಿ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್-೨೨ರ ಅಂಬೇಡ್ಕರ್ ವೃತ್ತದಿಂದ ರೈಲ್ವೆ ಪೋರ್ಟ್‌ರ್ ಚಾಳಿ ವರೆಗೆ ಪಿಡಬ್ಲುಡಿ ಇಲಾಖೆಯ ೭೦ ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ

ಕಲಬುರಗಿಯಿಂದ ಲೋಕಸಭೆಗೆ ಚುನಾಯಿತರಾಗಿ ಕೇಂದ್ರ ಸಚಿವರಾಗಿದ್ದ ಖರ್ಗೆ ಅವರು ದೊಡ್ಡ ಆಸ್ಪತ್ರೆಗಳನ್ನು, ವಸತಿನಿಲಯಗಳು, ಕಾಲೇಜುಗಳು, ರಾಷ್ಟ್ರೀಯ ಹೆದ್ದಾರಿ ಹೀಗೆ ಅನೇಕ ಸೌಲಭ್ಯಗಳನ್ನು ಜನರಿಗಾಗಿ ದೊರಕಿಸಿಕೊಟ್ಟಿದ್ದಾರೆ. ರೈಲ್ವೆ ಮಂತ್ರಿಯಾಗಿದ್ದಾಗ ದೇಶದ ಅನೇಕ ರಾಜ್ಯದ ರೈಲು ನಿಲ್ದಾಣಗಳು ಅಭಿವೃದ್ಧಿ ಕಂಡಿವೆ. ಜಿಲ್ಲೆಯ ಜನರ ಆರೋಗ್ಯ ಕಾಳಜಿ ಹೊಂದಿದ್ದ ಖರ್ಗೆ ಅವರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅಭಿವೃದ್ಧಿಯ ವಿರುದ್ಧ ಜಾತಿ ಮತ್ತು ಕೋಮು ರಾಜಕಾರಣ ಕೆಲಸ ಮಾಡಿದ್ದರಿಂದ ಮತದಾರರು ಖರ್ಗೆ ಅವರನ್ನು ಸೋಲಿಸಿದ್ದರು. ಬಹು ನಿರೀಕ್ಷಿತ ಬಿಜೆಪಿ ಸಂಸದರಿಂದ ಜಿಲ್ಲೆಯಲ್ಲಿ ಯಾವೂದೇ ಅಭಿವೃದ್ಧಿ ಕಾಣದ ಜನತೆ ಖರ್ಗೆ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.

ಕಲಬುರಗಿ: ಫೆಬ್ರವರಿ 24 ರಂದು ಉದ್ಯೋಗ ಮೇಳ

ಪುರಸಭೆ ಸದಸ್ಯ ಶರಣು ನಾಟೀಕಾರ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರತಿಯೊಂದು ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿಗಳು ಅಭಿವೃದ್ಧಿ ಕಂಡಿವೆ. ಈ ಹಿಂದೆ ವಾಡಿ ಎಂದರೆ ರಾಡಿ ಊರು ಎಂಬ ಅಪವಾದವಿತ್ತು. ಈಗ ಯಾವೂದೇ ಬಡಾವಣೆಗೆ ಹೋದರೂ ಉತ್ತಮ ರಸ್ತೆ, ಚರಂಡಿ, ಬೀದಿದೀಪಗಳನ್ನು ಕಾಣಬಹುದಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಮುಖಂಡ ಟೋಪಣ್ಣ ಕೋಮಟೆ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಪುರಸಭೆ ಸದಸ್ಯರಾದ ಮಲ್ಲಯ್ಯ ಗುತ್ತೇದಾರ, ದೇವಿಂದ್ರ ಕರದಳ್ಳಿ, ಮಹ್ಮದ್ ಗೌಸ್, ಮರಗಪ್ಪ ಕಲಕುಟಗಿ, ಮುಖಂಡರಾದ ಅಶ್ರಫ್ ಖಾನ್, ವಿಜಯಕುಮಾರ ಸಿಂಗೆ, ಹಾಜಪ್ಪ ಲಾಡ್ಲಾಪುರ, ಶ್ರೀರಾಮ ರಾಠೋಡ, ಅನೀಲ ದಾಸ ಪಾಲ್ಗೊಂಡಿದ್ದರು.

ನಿರುದ್ಯೋಗ ಸಮಸ್ಯೆ: ಎಐಡಿವೈಒ ಸಹಿ ಸಂಗ್ರಹ 18 ರಂದು

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago