ವಾಡಿ: ನಿರುದ್ಯೋಗ ಸಮಸ್ಯೆ ವಿರುದ್ಧ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ಫೆ.18 ರಂದು ಬೆಳಗ್ಗೆ ೧೦:೦೦ ಗಂಟೆಗೆ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಸಹಿ ಸಂಗ್ರಹ ಚಳುವಳಿ ಏರ್ಪಡಿಸಲಾಗಿದೆ.
ಹೋರಾಟಗಾರ್ತಿ ದಿಶಾ ಬಂಧನ: ಎಸ್ಯುಸಿಐ ಖಂಡನೆ
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೆಗಾಂವ ನೇತೃತ್ವ ವಹಿಸಲಿದ್ದಾರೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊಸದಾಗಿ ಉದ್ಯೋಗಗಳನ್ನು ಸೃಷ್ಠಿಸಬೇಕು ಹಾಗೂ ಉದ್ಯೋಗ ಮೂಲಭೂತ ಹಕ್ಕು ಎಂದು ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ನಡೆಯುತ್ತಿದೆ ಎಂದು ಸಂಘಟನೆಯ ನಗರ ಸಮಿತಿ ಉಪಾಧ್ಯಕ್ಷ ರಾಜು ಒಡೆಯರ ತಿಳಿಸಿದ್ದಾರೆ.