ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ

5
47

ಕಲಬುರಗಿ: ಲಾರಿಗಳ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಸಿಮೆಂಟ್ ಸಾಗಾಣಿಕೆ ಮಾಡುವವರಿಗೆ ಎಸಿಸಿ ಕಂಪನಿ ಅಧಿಕಾರಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅನ್ಯಾಯ ಪ್ರಶ್ನಿಸಿ ಬೇಡಿಕೆಗಳಿಗೆ ಆಗ್ರಹಿಸಿದರೆ ಪರವಾನಿಗೆ ರದ್ದುಗೊಳಿಸಲಾಗುತ್ತಿದೆ. ಸಣ್ಣಪುಟ್ಟ ತಪ್ಪುಗಳನ್ನು ಮುಂದಿಟ್ಟು ಟ್ರಾನ್ಸ್‌ಪೋರ್ಟ್ ವೆಂಡರ್ ಬ್ಲಾಕ್ ಲಿಸ್ಟ್‌ಗೆ ಹಾಕುವ ಮೂಲಕ ಪ್ರಾಮಾಣಿಕವಾಗಿ ದುಡಿಯುವವರ ಹೊಟ್ಟೆಯ ಮೇಲೆ ಒದ್ದು ಬೀದಿಪಾಲು ಮಾಡಲಾಗುತ್ತಿದೆ ಎಂದು ನಗರ ಟ್ರಾನ್ಸ್‌ಪೋರ್ಟ್ ಮಾಲೀಕರ ಸಂಘದ ಅಧ್ಯಕ್ಷ ಶಂಕರಸಿಂಗ್ ರಾಠೋಡ ಆರೋಪಿಸಿದ್ದಾರೆ.

ಟ್ರಾನ್ಸ್‌ಪೋರ್ಟ್ ಮಾಲೀಕರ ಸಂಘ, ಒಕ್ಕೂಟ ಲಾರಿ ಮಾಲೀಕರ ಸಂಘ, ವಾಡಿ ಲಾರಿ ಮಾಲೀಕರ ಸಂಘ ಹಾಗೂ ಸಿಂಡಿಕೇಟ್ ಟ್ರಾನ್ಸ್‌ಪೋರ್ಟ್ ಕಂಪನಿ ಜಂಟಿಯಾಗಿ ಬುಧವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅವರು ಮಾತನಾಡಿದರು. ಡೀಸೆಲ್ ಬೆಲೆ ಇಳಿಕೆಯಾದಾಗ ಕಂಪನಿಯವರು ತಕ್ಷಣವೇ ಟ್ರಾನ್ಸ್‌ಪೋರ್ಟ್ ಬಾಡಿಗೆ ದರ ಕಡಿತಗೊಳಿಸುತ್ತಾರೆ. ತೈಲ ಬೆಲೆ ಏರಿಕೆಯಾದಾಗ ಲಾರಿ ಬಾಡಿಗೆ ದರ ಹೆಚ್ಚಿಸದೆ ಅನ್ಯಾಯ ಮಾಡಲಾಗುತ್ತಿದೆ.

Contact Your\'s Advertisement; 9902492681

ಎಲ್ಲಾ ಗೂಡ್ಸ್ ವಾಹನಗಳಿಗೂ ಏಕರೂಪದ ಬಾಡಿಗೆ ದರ ಜಾರಿಗೊಳಿಸದೆ ಮೋಸ ಮಾಡಲಾಗುತ್ತಿದೆ. ಕಂಪನಿ ಅಧಿಕಾರಿಗಳ ತಾರತಮ್ಯ ಧೋರಣೆ ಪ್ರಶ್ನೆ ಮಾಡಿದ್ದಕ್ಕೆ ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ವೆಂಡರ್ ರದ್ದುಗೊಳಿಸಿ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ. ಅಲ್ಲದೆ ಎಸಿಸಿಯಲ್ಲಿ ನೌಕರಿ ಮಾಡುತ್ತಿರುವ ಆ ಟ್ರಾನ್ಸ್‌ಪೋರ್ಟ್ ಮಾಲೀಕರ ಪುತ್ರನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸಿಸಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸಿಸಿ ಸಿಮೆಂಟ್ ಕಂಪೆನಿ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು

ಗೋಕುಲಕೃಷ್ಣ ಎಂಬ ಭ್ರಷ್ಟ ಮ್ಯಾನೇಜರ್ ಎಸಿಸಿಗೆ ಕಾಲಿಟ್ಟ ನಂತರ ಟ್ರಾನ್ಸ್‌ಪೋರ್ಟ್ ಮಾಲೀಕರ ಮೇಲಿನ ಕಿರುಕುಳ ಹೆಚ್ಚಾಗಿದೆ. ತನಗೆ ಲಕ್ಷಾಂತರ ರೂಪಾಯಿ ಲಂಚ ಕೊಡುವ ಹೊರ ಜಿಲ್ಲೆಗಳ ೨೦ ಟ್ರಾನ್ಸ್‌ಪೋರ್ಟ್‌ಗಳಿಗೆ ಗುಪ್ತವಾಗಿ ಸಿಮೆಂಟ್ ಸಾಗಾಣಿಕೆಯ ಪರವಾನಿಗೆ ನೀಡಿರುವ ಗೋಕುಲಕೃಷ್ಣ, ಕಳೆದ ೨೫ ವರ್ಷಗಳಿಂದ ಎಸಿಸಿಗೆ ನೆರವಾಗಿರುವ ಸ್ಥಳೀಯ ಟ್ರಾನ್ಸ್‌ಪೋರ್ಟ್ ಮಾಲೀಕರನ್ನು ಮೂಲೆಗುಂಪು ಮಾಡಲು ಮುಂದಾಗಿದ್ದಾನೆ. ಅಲ್ಲದೆ ಕಂಪನಿ ಚೇಲಾಗಳಿಂದ ಬೆದರಿಕೆಯೊಡ್ಡುತ್ತಿದ್ದಾನೆ.

ಇಂಥಹ ಭ್ರಷ್ಟ ವ್ಯವಸ್ಥಾಪಕನ ವಿರುದ್ಧ ಕ್ರಮಕೈಗೊಳ್ಳಬೇಕಾದ ಎಸಿಸಿ ಆಡಳಿತ, ಜನವಿರೋಧಿ ಆಡಳಿತವನ್ನು ಮೆಚ್ಚಿ ಬೆನ್ನುತಟ್ಟುತ್ತಿದೆ ಎಂದು ಟೀಕಿಸಿದ ರಾಠೋಡ, ಎಸಿಸಿಯ ಲಾಜೆಸ್ಟಿಕ್ ವಿಭಾಗದ ಮಹಾಭ್ರಷ್ಟ ಮುಖ್ಯಸ್ಥ ಗೋಕುಲಕೃಷ್ಣನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಟ್ರಾನ್ಸ್‌ಪೋರ್ಟ್ ಬಾಡಿಗೆ ದರ ಹೆಚ್ಚಿಸಬೇಕು.

೧೨, ೧೬ ಹಾಗೂ ೧೮ ಟೈಯರ್ ಲಾರಿಗಳೆಂದು ಭಿನ್ನತೆ ಅನುಸರಿಸದೆ ಏಕರೂಪದ ಬಾಡಿಗೆ ದರ ನಿಗದಿಪಡಿಸಬೇಕು. ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ವಿರುದ್ಧದ ಬ್ಲಾಕ್‌ಲಿಸ್ಟ್ ಕ್ರಮ ಕೈಬಿಡಬೇಕು. ತಂದೆಯ ಮೇಲಿನ ಸೇಡಿಗಾಗಿ ಮಗನನ್ನು ನೌಕರಿಯಿಂದ ವಜಾ ಮಾಡಿರುವ ಆದೇಶ ಹಿಂಪಡೆಯಬೇಕು. ಗೋಕುಲಕೃಷ್ಣ ಎಂಬ ಎಸಿಸಿ ಅಧಿಕಾರಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಂಪನಿಗೆ ೪೮ ಗಂಟೆಗಳ ಗಡುವು ನೀಡುತ್ತೇವೆ. ನಿರ್ಲಕ್ಷ್ಯ ವಹಿಸಿದರೆ ಸಿಮೆಂಟ್ ಸಾಗಾಣಿಕೆಯನ್ನೆ ಸಂಪೂರ್ಣ ತಡೆಹಿಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ

ಟ್ರಾನ್ಸ್‌ಪೋರ್ಟ್ ಮಾಲೀಕರ ಸಂಘದ ಗೌರವಾಧ್ಯಕ್ಷ ವಾಲ್ಮೀಕ ರಾಠೋಡ, ಉಪಾಧ್ಯಕ್ಷ ಸದಾಶಿವ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಭೀಮರಾವ ದೊರೆ, ವಿವಿಧ ಟ್ರಾನ್ಸ್‌ಪೋರ್ಟ್ ಮಾಲೀಕರಾದ ಮಲ್ಲಯ್ಯಸ್ವಾಮಿ ಮಠಪತಿ, ಗಣೇಶ ಚವ್ಹಾಣ, ಕಲ್ಯಾಣಿ ಚಿಂಚನಸೂರ, ಅನ್ವರ್ ಪಟೇಲ, ಮೋಹಸೀನ್ ಪಟೇಲ, ವಿಷ್ಣು ಮಹಾರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ನ್ಯಾಯಮೂರ್ತಿ ಡಾ. ಎಂ.ರಾಮ ಜೋಯಿಸ್ ಗೆ ಶ್ರದ್ಧಾಂಜಲಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here