ಬಿಸಿ ಬಿಸಿ ಸುದ್ದಿ

ಶ್ರೀಪ್ರಭು ಕಾಲೇಜುನಲ್ಲಿ ನಗರ ಸಭೆಯ ನೂತನ ಅಧ್ಯಕ್ಷರಿಗೆ ಸನ್ಮಾನ

ಸುರಪುರ: ನಗರದ ಶ್ರೀ ಪ್ರಭು ಕಲಾ, ವಿಜ್ಞಾನ & ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಗರಸಭೆ ನೂತನ ಅಧ್ಯಕ್ಷರಿಗೆ ಸನ್ಮಾಸ ಸಮಾರಂಭ ನಡೆಸಲಾಯಿತು.

ನಗರ ಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಸುಜಾತ ವೇಣುಗೋಪಾಲ ನಾಯಕ ಜೇವರ್ಗಿ ದಂಪತಿಗಳಿಗೆ ಸನ್ಮಾನಿಸಿ ನಂತರ, ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೋ. ಎಂ. ವಿಶ್ವನಾಥ ಅವರು, ನಗರ ಸ್ಥಳಿಯ ಸಂಸ್ಥೆಗಳಿಗೆ ಅಧಿಕಾರದ ವಿಕೇಂದ್ರಿಕರಣ ವರದಾನವಾಗಿದ್ದು, ಪ್ರಯುಕ್ತ ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗುವಂತಾಯಿತು ಹೆಣ್ಣು ಅಬಲೆಯಲ್ಲ ಸಬಲಳು ಎನ್ನುವ ಹಾಗೆ ಅನೇಕ ರಚನಾತ್ಮಕ ಕೆಲಸಗಳು ಮಹಿಳೆಯರಿಂದ ಮುಡಿಬಂದಿರುವುದು ನಾವು ಗಮನಿಸಿದ್ದೇವೆ. ಈ ದಿಸೆಯಲ್ಲಿ ನಗರ ಸಭೆಯ ನೂತನ ಅಧ್ಯಕ್ಷರು ಅರ್ಥಪೂರ್ಣ ಕಾರ್ಯಗಳ ಮೂಲಕ ಕಾರ್ಯರಂಭ ಮಾಡಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಾಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಪ್ರೊ. ವೇಣುಗೋಪಾಲ ಜೇವರ್ಗಿಯವರು, ಅಧಿಕಾರವು ಕೇಂದಿಕೃತವಾಗುವುದರಿಂದ ಸಮಾಜದ ಸಣ್ಣ ಸಣ್ಣ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾದ್ಯವಾಗುವುದಿಲ್ಲ. ಈ ದಿಶೆಯಲ್ಲಿ ಅಧಿಕಾರ ವಿಕೇಂದ್ರಿಕರಣವು ಸಮಾಜದ ಎಲ್ಲ ವರ್ಗಗಳ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅಧಿಕಾರದ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಇದರ ಪ್ರತಿಫಲವೇ ಇಂದು ಶ್ರೀಮತಿ ಸುಜಾತ ಅವರು ನಗರಸಭೆ ಅಧ್ಯಕ್ಷರಾಗಲು ಕಾರಣವಾಯಿತು ಎಂದು ನುಡಿದರು.

ಗಾಂಧಿ ಶರಣ ಹರ್ಡೇಕರ ಮಂಜಪ್ಪನವರ ಜಯಂತಿ

ಅದ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎಸ್.ಎಚ್. ಹೊಸಮನಿ ಅವರು ಮಾತನಾಡಿ ಮಹಿಳಾ ಸಮುದಾಯ ಇಂದು ರಾಜಕಿಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ರಾಜಕೀಯ ರಂಗದಲ್ಲಿ ಮಹಿಳಾ ಸಾಧಕೀಯರ ಸಾಧನೆ ಅನನ್ಯವಾದುದು ಈ ದಿಶೆಯಲ್ಲಿ ನೂತನ ನಗರ ಸಭಾ ಅಧ್ಯಕ್ಷರು ಹಲವು ಅಭಿವೃದ್ಧಿ ಕಾರ್ಯಕ್ರಗಳನ್ನು ಹಮ್ಮಿಕೊಳ್ಲುವುದರ ಮೂಲಕ ಇಂದಿನ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಯಾಗಿದ್ದ ಪ್ರೊ. ಎಮ್.ಡಿ. ವಾರಿಸ್, ಸಹಾಯಕ ಪ್ರಾಧ್ಯಾಪಕರು ಪ್ರಾಣಿಶಾಸ್ತ್ರ ವಿಭಾಗ ಅವರೂ ತಮ್ಮ ಅನಿಸಿಕೆ ಹಂಚಿಕೊಂಡರು

ವೇದಿಕೆಯ ಮೇಲೆ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ವೈಜಿನಾಥ ಎ. ವರ್ಮಾ ಉಪಸ್ಥತರಿದ್ದರು ಕಾರ್ಯಕ್ರಮವನ್ನು ಡಾ. ಸಾಯಿಬಣ್ಣ ಎಮ್. ನಿರ್ವಹಿಸಿದರೆ, ಗುರುರಾಜ ಕುಲ್ಕರ್ಣಿ ಸ್ವಾಗತಿಸಿದರು ಹಾಗೂ ವಿಜಯಕುಮಾರ ಬಣಗಾರ ವಂದಿಸಿದರು.

ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago