ಶಹಾಬಾದ: ನಾಡಿನಲ್ಲಿ ಬಸವಜಯಂತಿಯನ್ನು ಮೊದಲು ಆಚರಣೆಗೆ ತಂದು ಆ ಮೂಲಕ ಬಸವತತ್ವದ ನಿಜಾಚರಣೆಯನ್ನು ಸಮಾಜಕ್ಕೆ ತಿಳಿಸಿದವರು ಹರ್ಡೇಕರ ಮಂಜಪ್ಪನವರು ಎಂದು ಹಳೆಶಹಾಬಾದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ ಹೇಳಿದರು.
ಅವರು ಗುರುವಾರ ಹಳೆಶಹಾಬಾದನಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಆಯೋಜಿಸಲಾದ ಕರ್ನಾಟಕದ ಗಾಂಧಿ ಶರಣ ಹರ್ಡೇಕರ ಮಂಜಪ್ಪನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸುಧಾರಕರು, ದೇಶ ಪ್ರೇಮಿಯೂ, ಸಂಘಟನಾ ಚತುತರಾಗಿದ್ದ ಮಂಜಪ್ಪನವರು ೧೯೨೭ರಲ್ಲಿ ಶಿಕ್ಷಣದ ಜತೆಗೆ ಕೌಶಲ ಶಿಕ್ಷಣ ಪ್ರಾರಂಭಿಸಿ ಆ ಮೂಲಕ ಗಾಂಧೀಜಿಯವರ ತತ್ವ ಪ್ರತಿಪಾದಿಸಿ ಕರ್ನಾಟಕ ಗಾಂಧಿ ಎಂದು ಹೆಸರುವಾಸಿಯಾಗಿದ್ದರು ಎಂದರು.
ಧರ್ಮ ಕ್ರಾಂತಿ, ಕಾಯಕ ನಿಷ್ಠೆಯಿಂದ ಶರಣ ಶರಣೆಯರ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದವರಲ್ಲಿ ಹರ್ಡೇಕರ ಮಂಜಪ್ಪನವರು ಒಬ್ಬರು. ಅವರಿಗೆ ಬಸವಣ್ಣನವರ ಒಂದು ವಚನ ಅವರ ಜೀವನದ ದಿಕ್ಕನೇ ಬದಲಿಸಿತು.ಅಲ್ಲಿಂದ ಅವರ ಜೀವಿತಾವಧಿವರೆಗೂ ಶರಣ ಸಾಹಿತ್ಯಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದೇಶದ ಉದ್ದಗಲಕ್ಕೂ ಸಂಚರಿಸಿ ಹಲವು ಭಾಷೆಗಳಲ್ಲಿ ಶರಣ ಸಾಹಿತ್ಯವನ್ನು ಪಸರಿಸಿದರು. ವಿದ್ವಾಂಸರಾಗಿ, ಪತ್ರಕರ್ತರಾಗಿ, ದೇಶಪ್ರೇಮಿಗಳಾಗಿ, ಸಚ್ಚಾರಿತ್ರ್ಯವಂತರಾಗಿ ಜೀವನವನ್ನೇ ಸಮಾಜ ಸೇವೆಗಾಗಿ ಅರ್ಪಿಸಿಕೊಂಡ ಅವರು ನಮಗೆಲ್ಲ ಪ್ರಾತ: ಸ್ಮರಣೀಯರೇ ಆಗಿದ್ದಾರೆ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ವಿಸ್ಟ್ರಾನ್ ಕಂಪನಿಯ ಉತ್ಪಾದನೆ ಪುನರಾರಂಭ: ಸಚಿವ ಜಗದೀಶ್ ಶೆಟ್ಟರ್
ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕಾಧ್ಯಕ್ಷ ವೈಜನಾಥ ಹುಗ್ಗಿ ಮಾತನಾಡಿ, ದೇಶದಲ್ಲಿಯೇ ಮೊಟ್ಟ ಮೊದಲು ಗುರುಕುಲ ಮಾದರಿ ಶಿಕ್ಷಣ ಪ್ರಾರಂಭಿಸಿ ಸರ್ವರಿಗೂ ಶಿಕ್ಷಣದ ಹಕ್ಕು ನೀಡಿದ ಮಹಾನ್ ಶಿಕ್ಷಣ ಪ್ರೇಮಿಯಾಗಿದ್ದರು. ೧೯೧೭ ರಲ್ಲಿ ಕನ್ನಡ ನಾಡಿನಲ್ಲಿ ಭಜನಾ ಸಂಘ ಸ್ಥಾಪಿಸಿ ಅದನ್ನು ಅನೇಕ ಗ್ರಾಮಗಳಿಗೆ ವಿಸ್ತರಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ ಆ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅವರ ತತ್ವಾದರ್ಶಗಳು ಸರ್ವಕಾಲಿಕ ಎಂದು ಹೇಳಿದರು.
ಕಸಾಪ ಕಲಬುರಗಿ ಗ್ರಾಮೀಣ ಶರಣಗೌಡ ಪಾಟೀಲ್,ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಶಾಂತಪ್ಪ ಹಡಪದ, ಶರಣಪ್ಪ ಕೊಡದೂರ,ಸಂತೋ? ಪಾಟೀಲ್, ಚನ್ನಮಲ್ಲಪ್ಪ ಸಿನ್ನೂರ,ಕುಪೇಂದ್ರ ತುಪ್ಪದ,ರಹೀಮ ಸಾಹೇಬ್, ನೀಲಕಂಠ ಹಡಪದ, ವೀರಯ್ಯ ಸ್ವಾಮಿ,ಕಲ್ಯಾಣಿ ಸೂರಾ ಇತರರು ಇದ್ದರೂ.